ಚೆನ್ನೈ : ತಮಿಳುನಾಡು (Tamil Nadu) ಚುನಾವಣೆಯಲ್ಲಿ ಡಿಎಂಕೆ (DMK)  ಮುನ್ನಡೆ ಕಾಯ್ದುಕೊಂಡಿದೆ.  ಏಪ್ರಿಲ್ 6 ರಂದು ನಡೆದ ವಿಧಾನಸಭೆ ಚುನಾವಣೆಯ (Assembly Elections 2021) ಎಣಿಕೆ ಕಾರ್ಯ ನಡೆಯುತ್ತದೆ. . ಆರಂಭಿಕ ಫಲಿತಾಂಶಗಳನ್ನು ಗಮನಿಸಿದರೆ, ಆಡಳಿತಾರೂಢ AIADMKಯನ್ನು ಹಿಂದಿಕ್ಕಿ DMK ಮುನ್ನಡೆ ಕಾಯ್ದುಕೊಂಡಿದೆ. ಆದರೆ ಸ್ಪಷ್ಟ ಚಿತ್ರಣ ಹೊರಬೀಳು ಇನ್ನೂ ಕೆಲ ಸಮಯ ಕಾಯಬೇಕಾಗುತ್ತದೆ.  ಸದ್ಯದ ಟ್ರೆಂಡಿಂಗ್ ನೋಡಿದರೆ ರಾಜ್ಯದ ಜನತೆ ಬದಲಾವಣೆ ಬಯಸಿರುವುದು ಸ್ಪಷ್ಟವಾಗಿ ಕಾಣುತ್ತದೆ.  


COMMERCIAL BREAK
SCROLL TO CONTINUE READING

ಎಲ್ಲಿ ಯಾರು ಮುನ್ನಡೆ :
ಭಾನುವಾರ ಬೆಳಿಗ್ಗೆ 8 ಗಂಟೆಯಿಂದ ರಾಜ್ಯದಲ್ಲಿ ಮತ ಎಣಿಕೆ (Counting) ಕಾರ್ಯ ಆರಂಭವಾಗಿದೆ. ಇಲ್ಲಿಯವರೆಗೆ ದೊರೆತ ಫಲಿತಾಂಶಗಳ ಪ್ರಕಾರ, DMK + 129 ಮತ್ತು ಆಡಳಿತಾರೂಢ AIADMK + 98 ಸ್ಥಾನಗಳಲ್ಲಿ ಮುಂದಿದೆ. ಇನ್ನೊಂದು ಸೀಟು ಇತರರು ಮುನ್ನಡೆಯಲ್ಲಿದ್ದಾರೆ. ಆರಂಭಿಕ  ಎಣಿಕೆಯ ಪ್ರಕಾರ, ಸಿಎಂ ಪಳನಿಸ್ವಾಮಿ (Palaniswami ) ಮತ್ತು ಡಿಎಂಕೆಯ  ಉದಯನಿಧಿ (Udhayanidhi) ಮುನ್ನಡೆ ಸಾಧಿಸಿದ್ದಾರೆ. ಡಿಎಂಕೆ ಪ್ರಬಲ ಅಭ್ಯರ್ಥಿ ಎಂ.ಕೆ.ಸ್ಟಾಲಿನ್ ಇನ್ನೂ ಹಿನ್ನಡೆಯಲ್ಲಿದ್ದಾರೆ. ಸಂಜೆಯ ವೇಳೆಗೆ ಪೂರ್ಣ ಫಲಿತಾಂಶ ಘೋಷಣೆಯಾಗುವ  ನಿರೀಕ್ಷೆಯಿದೆ. COVID-19 ಮಾರ್ಗಸೂಚಿಗಳನ್ನು ಅನುಸರಿಸಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. 


ಇದನ್ನೂ ಓದಿ : Kerala Election Results 2021 : ಬಿಜೆಪಿ ಅಭ್ಯರ್ಥಿ ಮೆಟ್ರೋಮ್ಯಾನ್ ಇ. ಶ್ರೀಧರನ್ ಮುನ್ನಡೆ!


ಅಧಿಕಾರಕ್ಕಾಗಿ  ಅಗತ್ಯವಿರುವ ಮ್ಯಾಜಿಕ್ ನಂಬರ್ : 
ನಟ-ನಾಯಕ ಕಮಲ್ ಹಾಸನ್ (Kamal Hassan) ಅವರ ಮಕ್ಕಲ್ ನಿಧಿ ಮಾಯಂ ಸೇರಿದಂತೆ ನಾಲ್ಕು ಮೈತ್ರಿಗಳು ತಮಿಳುನಾಡಿನಲ್ಲಿ ಕಣದಲ್ಲಿವೆ. ಆದರೂ ಮುಖ್ಯ ಸ್ಪರ್ಧೆಯು ಆಡಳಿತಾರೂಢ  ಎಐಎಡಿಎಂಕೆ ಮತ್ತು ಮುಖ್ಯ ಪ್ರತಿಪಕ್ಷ ಡಿಎಂಕೆ ನಡುವೆ ನಡೆಯುತ್ತಿದೆ. ಮುಖ್ಯಮಂತ್ರಿ ಕೆ.ಕೆ. ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ( Panneerselvam) , ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್ (MK Stalin) , ಅವರ ಪುತ್ರ ಉದಯನಿಧಿ ಸ್ಟಾಲಿನ್, ಅಮ್ಮ ಮಕ್ಕಲ್ ಮುನ್ನೇತ್ರಾ ಕಜ್ಗಂ ಮುಖ್ಯಸ್ಥ ಟಿ.ಟಿ.ವಿ ದಿನಕರನ್ ಮತ್ತು ಬಿಜೆಪಿಯ ರಾಜ್ಯ ಘಟಕದ ಮುಖ್ಯಸ್ಥ ಎಲ್.ಕೆ. ಮುರುಗನ್ ಸೇರಿದಂತೆ ಸುಮಾರು 4000 ಅಭ್ಯರ್ಥಿಗಳು ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.  ರಾಜ್ಯದಲ್ಲಿ ಒಟ್ಟು 234 ವಿಧಾನಸಭಾ ಸ್ಥಾನಗಳಿದ್ದು, ಬಹುಮತಕ್ಕೆ 118 ಸ್ಥಾನಗಳಲ್ಲಿ ಗೆಲುವು ಸಾಧಿಸಬೇಕು. 


ಇದನ್ನೂ ಓದಿ : Assembly Election Results 2021 : ಪಶ್ಚಿಮ ಬಂಗಾಳದಲ್ಲಿ ಮ್ಯಾಜಿಕ್ ನಂಬರ್ ರಿಚ್ ಆದ ಟಿಎಂಸಿ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.