ನವದೆಹಲಿ: 2002 ರ ಗೋಧ್ರಾ ಗಲಭೆ ನಂತರ ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಪದಚ್ಯುತಿಗೊಳಿಸಲು ಬಯಸಿದ್ದರು ಎಂದು ಮಾಜಿ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಹೇಳಿದ್ದಾರೆ.
 
ಭೂಪಾಲ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಿನ್ಹಾ " ಗುಜರಾತ್ ನಲ್ಲಿ ನಡೆದ ಕೋಮುವಾದಿ ಗಲಭೆ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ನರೇಂದ್ರ ಮೋದಿ ಅವರನ್ನು ಪದಚ್ಯುತಿಗೋಳಿಸಲು ನಿರ್ಧರಿಸಿದ್ದರು. 2002 ರಲ್ಲಿ ಗೋವಾ ರಾಷ್ಟ್ರೀಯ ಕಾರ್ಯಕಾರಣಿ ಸಮಿತಿ ಸಭೆಗೆ ಹೋಗುವ ಸಂದರ್ಭದಲ್ಲಿ ಒಂದು ವೇಳೆ ಮೋದಿ ಮುಖ್ಯಮಂತ್ರಿ ಹುದ್ದೆಯಿಂದ ಇಳಿಯಲು ನಿರಾಕರಿಸಿದರೆ ಗುಜರಾತ್ ಸರ್ಕಾರವನ್ನು ವಿಸರ್ಜನೆಗೊಳಿಸುವ ಹಂತಕ್ಕೆ ಬಂದಿದ್ದರು" ಎಂದು ಹೇಳಿದರು.


COMMERCIAL BREAK
SCROLL TO CONTINUE READING

"ನನ್ನ ಮಾಹಿತಿಯ ಪ್ರಕಾರ, ಆಡ್ವಾಣಿ ಅವರು ಅದನ್ನು ವಿರೋಧಿಸಿದರು ಮತ್ತು ಮೋದಿ ಜೀ ಅವರನ್ನು ವಜಾ ಮಾಡಿದರೆ ಅವರು ಅಡ್ವಾಣಿ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ಈ ಹಿನ್ನಲೆಯಲ್ಲಿ ವಾಜಪೇಯಿ ನಿರ್ಧಾರದಿಂದ ಹಿಂದೆ ಸರಿದರು. ಆದ ಕಾರಣ ಮೋದಿ ಸಿಎಂ ಹುದ್ದೆಯಲ್ಲಿ ಮುಂದುವರೆದರು.


ಇದೇ ವೇಳೆ ಐಎನ್ಎಸ್ ವಿರಾಟ್ ನನ್ನು ರಾಜೀವ್ ಗಾಂಧಿ ವೈಯಕ್ತಿಕ ಟಾಕ್ಸಿಯಾಗಿ ಬಳಸಿಕೊಂಡಿದ್ದಾರೆ ಎನ್ನುವ  ಪ್ರಧಾನಿ ಮೋದಿ ಹೇಳಿಕೆಗೆ  ಪ್ರತಿಕ್ರಿಯಿಸಿದ ಅವರು ಮಾಜಿ ನೌಕಾ ಅಧಿಕಾರಿಗಳು ಅದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದರು.