ನವದೆಹಲಿ: ಹಿಮಾಚಲ ಪ್ರದೇಶದ ರೋಹ್ತಂಗ್‌ನಲ್ಲಿ ಅಟಲ್ ಸುರಂಗ ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಅದನ್ನು ಇಂದು ಉದ್ಘಾಟಿಸಲಿದ್ದಾರೆ. ಇದು ವಿಶ್ವದ ಅತ್ಯಂತ ಉದ್ದನೆಯ ರಾಜ್ಯ ಹೆದ್ದಾರಿಯಾಗಿದೆ. ಕಾರ್ಯಕ್ರಮ ಬೆಳಗ್ಗೆ 10 ಗಂಟೆ ಸುಮಾರಿಗೆ ಆರಂಭವಾಗಲಿದೆ ಎಂದು ಪ್ರಧಾನ ಮಂತ್ರಿ ಕಚೇರಿ ತನ್ನ ಹೇಳಿಕೆಯಲ್ಲಿ ಹೇಳಿದೆ.


COMMERCIAL BREAK
SCROLL TO CONTINUE READING

ಅಟಲ್ ಟನಲ್ ಮನಾಲಿ ಹಾಗೂ ಲೇಹ್ ನಡುವಿನ ಅಂತರವನ್ನು ಸುಮಾರು 46 ಕಿ.ಮೀ ಗಳಷ್ಟು ಕಡಿಮೆ ಮಾಡುವುದರ ಜೊತೆಗೆ ಪ್ರಯಾಣದ ಸಮಯವನ್ನು ಕೂಡ ಸುಮಾರು 4 ರಿಂದ 5 ಗಂಟೆ ಕಡಿಮೆ ಮಾಡುತ್ತದೆ. ಇದು ಸುಮಾರು 9.02 ಕಿ.ಮೀ. ಗಳಷ್ಟು ಉದ್ದವಾಗಿದ್ದು, ಇದು ಮನಾಲಿಯನ್ನು ಇಡೀ ವರ್ಷ ಲಾಹೌಲ್-ಸ್ಪಿತಿ ಕಣಿವೆಯ ಜೊತೆಗೆ ಸಂಪರ್ಕ ಸಾಧಿಸುವಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದೆ.


ಇದನ್ನು ಓದಿ- ಹತ್ರಾಸ್ ಸಾಮೂಹಿಕ ಅತ್ಯಾಚಾರ: ಪ್ರಧಾನಿ ಮೋದಿ ಮೌನ ಪ್ರಶ್ನಿಸಿದ ಕಾಂಗ್ರೆಸ್


ಇದಕ್ಕೂ ಮೊದಲು ವರ್ಷದಲ್ಲಿ ಸುಮಾರು 6 ತಿಂಗಳುಗಳ ಕಾಲ ಭಾರಿ ಹಿಮಪಾತದಿಂದ ಈ ಭಾಗ ಇತರೆ ಭಾಗಗಳಿಂದ ಸಂಪರ್ಕ ಕಡಿತಕ್ಕೆ ಒಳಗಾಗುತ್ತಿತ್ತು. ಈ ಸುರಂಗ ಮಾರ್ಗವನ್ನು ಸಮುದ್ರ ಮಟ್ಟದಿಂದ ಸುಮಾರು 3000 ಮೀಟರ್ (10,000 ಅಡಿ) ಎತ್ತರದಲ್ಲಿ ಹಿಮಾಲಯದ ಪೀರ್ ಪಂಜಾಲ್ ಪರ್ವತ ಶ್ರೇಣಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ನಿರ್ಮಿಸಲಾಗಿದೆ.


ಈ ಸುರಂಗ ಮಾರ್ಗದ ಮೂಲಕ ನಿತ್ಯ  3 ಸಾವಿರ ಕಾರುಗಳು ಮತ್ತು ಒಂದೂವರೆ ಸಾವಿರ ಟ್ರಕ್‌ಗಳು ಹಾದುಹೋಗಲು ಸಾಧ್ಯವಾಗಲಿದೆ. ಸುರಂಗದೊಳಗೆ ಗಂಟೆಗೆ ಗರಿಷ್ಠ 80 ಕಿಲೋಮೀಟರ್ ವೇಗವನ್ನು ನಿಗದಿಪಡಿಸಲಾಗಿದೆ. ಸುರಂಗದೊಳಗೆ ಅರೆ ಅಡ್ಡದಾರಿ ವಾತಾಯನ ವ್ಯವಸ್ಥೆ ಇರುತ್ತದೆ. ಇಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ವ್ಯವಸ್ಥೆ ಮಾಡಲಾಗಿದೆ.


ಇದನ್ನು ಓದಿ-  ಕರೋನಾ ವಿರುದ್ಧ ಹೋರಾಡಲು ಪ್ರಧಾನಿ ಮೋದಿಯವರ 'ಪಂಚ ಮಂತ್ರ' ಅನುಸರಿಸಿ


ಸುರಂಗದೊಳಗೆ ಭದ್ರತೆಯ ಬಗ್ಗೆಯೂ ವಿಶೇಷ ಗಮನ ನೀಡಲಾಗಿದೆ. ಎರಡೂ ಕಡೆ ಪ್ರವೇಶ ತಡೆ ಇರುತ್ತದೆ. ಪ್ರತಿ 150 ಮೀಟರ್‌ಗೆ ತುರ್ತು ಸಂದರ್ಭದಲ್ಲಿ ಸಂಪರ್ಕದ ವ್ಯವಸ್ಥೆ ಇರುತ್ತದೆ. ಪ್ರತಿ 60 ಮೀಟರ್‌ಗೆ ಅಗ್ನಿಶಾಮಕ ಘಟಕ ಇರುತ್ತದೆ. ಇದಲ್ಲದೆ, ಪ್ರತಿ 250 ಮೀಟರ್‌ಗೆ ಅಪಘಾತವನ್ನು ಸ್ವಯಂ ಪತ್ತೆ ಹಚ್ಚಲು ಸಿಸಿಟಿವಿ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕಿಲೋಮೀಟರ್ ವೇಗದಲ್ಲಿ ಗಾಳಿಯ ಗುಣಮಟ್ಟವನ್ನು ಪರೀಕ್ಷಿಸುವ ವ್ಯವಸ್ಥೆಯೂ ಇದೆ.


ಈ ಸುರಂಗವನ್ನು ನಿರ್ಮಿಸುವ ಐತಿಹಾಸಿಕ ನಿರ್ಧಾರವನ್ನು ಜೂನ್ 3, 2000 ರಂದು ಅಟಲ್ ಬಿಹಾರಿ ವಾಜಪೇಯಿ (Former PM Atal Bihari Vajpayee) ದೇಶದ ಪ್ರಧಾನ ಮಂತ್ರಿಯಾಗಿದ್ದಾಗ ತೆಗೆದುಕೊಳ್ಳಲಾಗಿತ್ತು. ಇದರ ಅಡಿಪಾಯವನ್ನು 26 ಮೇ 2002 ರಂದು ಹಾಕಲಾಯಿತು. 24 ಡಿಸೆಂಬರ್ 2019 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ದಿವಂಗತ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರಿನಲ್ಲಿ ಸುರಂಗದ ಹೆಸರನ್ನು ಇಡಲು ನಿರ್ಧರಿಸಲಾಯಿತು.