ಇನ್ನೂ ಮುಗಿದಿಲ್ಲ ಕರೋನಾ ಆಟ, ಎದುರಾಗಲಿದೆ ನಾಲ್ಕನೇ ಅಲೆಯ ಸಂಕಟ , ತಜ್ಞರು ಹೇಳಿದ್ದೇನು ?
ಕರೋನಾ ಸಂಕಷ್ಟ ಕೊನೆಯಾಯಿತು ಅಂದು ಕೊಂಡರೆ ಅದು ತಪ್ಪು. ದೇಶದಲ್ಲಿ ಮೂರನೇ ಅಲೆಯು ತಣ್ಣಗಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಕರೋನಾದ ನಾಲ್ಕನೇ ಅಲೆಯ ಬಗ್ಗೆ ಭವಿಷ್ಯ ನುಡಿದಿದ್ದಾರೆ ತಜ್ಞರು .
ನವದೆಹಲಿ : ಕರೋನಾ (Coronavirus)ಸಂಕಷ್ಟ ಕೊನೆಯಾಯಿತು ಅಂದು ಕೊಂಡರೆ ಅದು ತಪ್ಪು. ದೇಶದಲ್ಲಿ ಮೂರನೇ ಅಲೆಯು ತಣ್ಣಗಾಗುತ್ತಿರುವ ಹೊತ್ತಿನಲ್ಲಿಯೇ ಮತ್ತೆ ಕರೋನಾದ ನಾಲ್ಕನೇ ಅಲೆಯ ಬಗ್ಗೆ (Corona Fourth Wave in India) ಭವಿಷ್ಯ ನುಡಿದಿದ್ದಾರೆ ತಜ್ಞರು . ಕರೋನದ ನಾಲ್ಕನೇ ಅಲೆಯು ಜೂನ್ 22 ರ ಸುಮಾರಿಗೆ ಪ್ರಾರಂಭವಾಗಬಹುದು. ಆರಂಭವಾಗಿ, ಅಕ್ಟೋಬರ್ 24 ರವರೆಗೆ ಮುಂದುವರಿಯುವ ಸಾಧ್ಯತೆಯಿದೆ ಎನ್ನಲಾಗಿದೆ. ಆದರೆ, ನಾಲ್ಕನೇ ಅಲೆ ಎಷ್ಟು ತೀವ್ರವಾಗಿರಲಿದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.
4 ತಿಂಗಳವರೆಗೆ ಕಾಡಲಿದೆ ಕರೋನಾ ಹೊಸ ರೂಪಾಂತರ :
IIT ಕಾನ್ಪುರದ ಸಂಶೋಧಕರು COVID-19 ನ ನಾಲ್ಕನೇ ತರಂಗ ಕನಿಷ್ಠ ನಾಲ್ಕು ತಿಂಗಳವರೆಗೆ ಇರುತ್ತದೆ ಎಂದು ಹೇಳಿದ್ದಾರೆ. ಫೆಬ್ರವರಿ 24 ರಂದು ಪ್ರಿಪ್ರಿಂಟ್ ಸರ್ವರ್ MedRxiv ನಲ್ಲಿ ಈ ಬಗ್ಗೆ ಪ್ರಕಟಿಸಲಾಗಿದೆ. ನಾಲ್ಕನೇ ಅಲೆಯ ಆಗಸ್ಟ್ 15 ರಿಂದ ಆಗಸ್ಟ್ 31 ರವರೆಗೆ ಗರಿಷ್ಠ ಮಟ್ಟವನ್ನು ತಲುಪಾಲಿದೆ ಎನ್ನುವುದು ತಜ್ಞರ ಅಂದಾಜು. ನಂತರ ಮತ್ತೆ ಅದು ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದರೆ, ಹೊಸ ರೂಪಾಂತರದ (Coronavirus news varient)ಗಂಭೀರತೆಯ ಬಗ್ಗೆ ಸದ್ಯಕ್ಕೆ ಏನನ್ನೂ ಹೇಳಲು ಸಾಧ್ಯವಿಲ್ಲ ಎನ್ನುತ್ತಾರೆ ತಜ್ಞರು.
ಇದನ್ನೂ ಓದಿ : EPFO : UAN ನಂಬರ್ ಇಲ್ಲದೆಯೇ ನೀವು PF ಖಾತೆಯಿಂದ ಹಣ ತೆಗಿಯಬಹುದು! ಹೇಗೆ? ಇಲ್ಲಿದೆ ನೋಡಿ
ನಿಖರವಾಗಿತ್ತು ಇವರು ಹೇಳಿದ ಮಾತು :
ಐಐಟಿ ಕಾನ್ಪುರದ (IIT Kanpur) ಸಂಶೋಧಕರು ದೇಶದಲ್ಲಿ ಕರೋನಾ ಅಲೆಯ ಬಗ್ಗೆ ಭವಿಷ್ಯ ನುಡಿದಿರುವುದು ಇದು ಮೂರನೇ ಬಾರಿ. ಅವರ ಭವಿಷ್ಯವಾಣಿಗಳು, ವಿಶೇಷವಾಗಿ ಮೂರನೇ ತರಂಗದ ಬಗ್ಗೆ, ಬಹುತೇಕ ನಿಖರವಾಗಿವೆ. ಈ ಸಂಶೋಧನೆಯನ್ನು ಐಐಟಿ ಕಾನ್ಪುರದ ಮಾಥ್ಸ್ ಮತ್ತು ಸ್ಟಾಟೆಸ್ಟೀಕ್ ವಿಭಾಗದ ಎಸ್‌ಪಿ ರಾಜೇಶ್‌ಭಾಯ್, ಸುಭ್ರಾ ಶಂಕರ್ ಧರ್ ಮತ್ತು ಶಲಭ್ ಅವರು ನಡೆಸಿದ್ದಾರೆ. ಸಂಶೋಧನೆಗಾಗಿ ಈ ತಂಡವು ಸಂಖ್ಯಾಶಾಸ್ತ್ರೀಯ ಮಾದರಿಗಳನ್ನು ಬಳಸಿದೆ.
ಈ ರೀತಿಯಲ್ಲಿ ಮಾಡಲಾಗಿದೆ ಲೆಕ್ಕಾಚಾರ :
ಕರೋನಾ ಸಾಂಕ್ರಾಮಿಕ ರೋಗ ಪ್ರಾರಂಭವಾದ 936 ದಿನಗಳ ನಂತರ ಕರೋನಾದ ನಾಲ್ಕನೇ ತರಂಗ ಬರಬಹುದು ಎಂದು ಸಂಶೋಧಕರು ಹೇಳಿದ್ದಾರೆ (Corona Fourth Wave in India). ಈ ಪ್ರಕಾರ ನಾಲ್ಕನೇ ಅಲೆಯು ಅಂದಾಜು ಜೂನ್ 22 ರಿಂದ ಪ್ರಾರಂಭವಾಗಬಹುದು. ನಾಲ್ಕನೇ ತರಂಗ ಎಷ್ಟರ ಮಟ್ಟಿಗೆ ಅಪಾಯಕಾರಿಯಾಗಿರಬಹುದು ಎನ್ನುವುದನ್ನು ತಿಳಿಯಲು ತಂಡವು 'ಬೂಟ್‌ಸ್ಟ್ರಾಪ್' ಎಂಬ ವಿಧಾನವನ್ನು ಬಳಸಿದೆ. ಈ ವಿಧಾನವನ್ನು ಇತರ ದೇಶಗಳಲ್ಲಿಯೂ ನಾಲ್ಕನೇ ಮತ್ತು ಇತರ ಅಲೆಯನ್ನು ಊಹಿಸಲು ಬಳಸಬಹುದು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ರಾಷ್ಟ್ರಭಕ್ತಿ ಮತ್ತು ಪರಿವಾರ ಭಕ್ತಿ ನಡುವೆ ವ್ಯತ್ಯಾಸವಿದೆ- ಪ್ರಧಾನಿ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.