ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಂಡಿಪೊರಾ ಜಿಲ್ಲೆಯ ಲೈನ್ ಆಪ್ಹ್ ಕಂಟ್ರೋಲ್(LoC) ಬಳಿ ಹಠಾತ್ತನೆ ಸಂಭವಿಸಿದ ಹಿಮಪಾತದಿಂದಾಗಿ ಭಾರತೀಯ ಸೇನೆಯ ಮೂವರು ಯೋಧರು ಕಾಣೆಯಾಗಿದ್ದಾರೆ.  


COMMERCIAL BREAK
SCROLL TO CONTINUE READING

ಗುರೆಝ್ ವಲಯದ ಬಕ್ತೂರ್ ಪೋಸ್ಟ್ ಬಳಿ ಹಿಮಪಾತವಾಗಿದ್ದು, ಭಾರಿ ಹಿಮದ ಗೆಡ್ಡೆಗಳು  ಭಾರತೀಯ ಪೋಸ್ಟ್ ಗಳ ಕ್ಯಾಂಪ್ ಮೇಲೆ ಬಿದ್ದ ಪರಿಣಾಮ, ಅಲ್ಲಿ ಕರ್ತವ್ಯ ನಿರತರಾಗಿದ್ದ ಮೂವರು ಯೋಧರು ನಾಪತ್ತೆಯಾಗಿದ್ದಾರೆ. ಇದೀಗ ಯೋಧರ ಶೋಧ ಕಾರ್ಯಕ್ಕೆ ಪ್ರಯತ್ನಗಳು ನಡೆಯುತ್ತಿವೆಯಾದರೂ, ನಿರಂತರ ಹಿಮಪಾತವು ಪಾರುಗಾಣಿಕಾ ಮತ್ತು ಹುಡುಕಾಟ ಪ್ರಯತ್ನಗಳನ್ನು ಅಡ್ಡಿಪಡಿಸುತ್ತಿದೆ" ಎಂದು ಪೋಲಿಸ್ ಮೂಲಗಳು ತಿಳಿಸಿವೆ. 


ಭಾನುವಾರ ಮಧ್ಯಾಹ್ನ ಪ್ರಾರಂಭವಾದ ಭಾರೀ ಹಿಮಪಾತದಿಂದ ಮಂಗಳವಾರ ಬೆಳಿಗ್ಗೆವರೆಗೆ ನಿರಂತರವಾಗಿ ಮುಂದುವರೆದಿದ್ದರಿಂದ ಐದು ಅಡಿ ಎತ್ತರದ ಹಿಮವು ಗುರೆಝ್ ವಲಯದಲ್ಲಿ LoC ಪ್ರದೇಶದ ಮೇಲೆ ಸಂಗ್ರಹವಾಗಿದೆ.


ಏತನ್ಮಧ್ಯೆ, ಗುರೆಝ್ ವಲಯದಲ್ಲಿ ತುಲೇಲ್ನಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಒಂದು ಆರ್ಮಿ ಪೋರ್ಟರ್ ಸಹ ಕಾಣೆಯಾಗಿದೆ.