ಶ್ರೀನಗರ: ಮುಂದಿನ 24 ಗಂಟೆಗಳಲ್ಲಿ ಜಮ್ಮು ಕಾಶ್ಮೀರದ 9 ಜಿಲ್ಲೆಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತದ ಬಗೆ ಬುಧವಾರ ರಾಜ್ಯ ಅಧಿಕಾರಿಗಳು ಎಚ್ಚರಿಕೆಯನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಕಾಶ್ಮೀರದ ಒಂಬತ್ತು ಜಿಲ್ಲೆಗಳಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆಯಿದೆ ಎಂದು ಡಿವಿಶನಲ್ ಕಮಿಷನರ್ ಬೇಸರ್ ಅಹ್ಮದ್ ಖಾನ್ ಎಚ್ಚರಿಕೆ ನೀಡಿದ್ದಾರೆ ಎಂದು ಅಧಿಕೃತ ಮೂಲಗಳಿಂದ ಮಾಹಿತಿ ಲಭಿಸಿದೆ.


ಅನಂತನಾಗ್, ಕುಲ್ಗಮ್, ಬಡ್ಗಮ್, ಬಾರಾಮುಲ್ಲಾ, ಕುಪ್ವಾರಾ, ಬಂಡಿಪೊರಾ, ಗಾಂಡ್ ಬರ್ಲ್, ಕಾರ್ಗಿಲ್ ಮತ್ತು ಲೇಹ್ ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ.


ಕಾಶ್ಮೀರ ಡಿವಿಶನಲ್ ಕಮಿಷನರ್ ಈ ಎಲ್ಲಾ ಜಿಲ್ಲೆಗಳ ಉಪ ಆಯುಕ್ತರನ್ನು ಯಾವುದೇ ರೀತಿಯ ಪ್ರಾಣಹಾನಿ, ಆಸ್ತಿ ಹಾನಿಯನ್ನು ತಪ್ಪಿಸಲು ಮುನ್ನೆಚ್ಚರಿಕೆಯ ಕ್ರಮ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಸಂಬಂಧಪಟ್ಟ ಎಲ್ಲಾ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿರುವ ಖಾನ್, ಎಸ್ಡಿಆರ್ಎಫ್, ಪೋಲಿಸ್ ಮತ್ತು ಪ್ಯಾರಮೆಡಿಕಲ್ ಸಿಬ್ಬಂದಿಗಳನ್ನು ಆಂಬುಲೆನ್ಸ್ನೊಂದಿಗೆ ಸನ್ನದ್ಧರಿರುವಂತೆ ಸೂಚಿಸಿದ್ದಾರೆ.