ಪ್ರಾಣ ಪ್ರತಿಷ್ಠೆಗೂ ಮುನ್ನವೇ ರಾಮನ ಮೂರ್ತಿ ದರ್ಶನ..! ಏನಾದರೂ ದೋಷ ಜರಗುತ್ತಾ..?
Ayodhya Ram Mandir idol : ಪ್ರಾಣ ಪ್ರತಿಷ್ಠೆಗೂ ಮುನ್ನವೇ ಅಯೋಧ್ಯೆ ಶ್ರೀರಾಮನ ಫೋಟೋಗಳನ್ನು ಬಿಡುಗಡೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಅಲ್ಲದೆ, ಇದು ನಿಯಮ ಉಲ್ಲಂಘನೆ ಎಂದು ರಾಮ ಮಂದಿರ ಟ್ರಸ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Ram Mandir Inauguration : ಅಯೋಧ್ಯೆ ಬಾಲ ರಾಮನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಪ್ರಾಣ ಪ್ರತಿಷ್ಠೆಯ ನಂತರ ಕಾಣಿಸಿಕೊಳ್ಳಬೇಕಿದ್ದ ಶ್ರೀರಾಮನ ಮೂರ್ತಿ ಜಗಜ್ಜಾಹೀರವಾಗಿದೆ. ಅಲ್ಲದೆ, ಮೂರ್ತಿಯ ಕಣ್ಣಿಗೆ ಕಟ್ಟಿದ್ದ ಪಟ್ಟಿ ಮತ್ತು ದೇಹದ ಮೇಲಿದ್ದ ಮುಸುಕನ್ನು ತೆಗೆದುಹಾಕಲಾಗಿದ್ದು, ಚರ್ಚೆಗೆ ಗ್ರಾಸವಾಗಿದೆ.
ಅಲ್ಲದೆ, ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ನಿಜವಾದ ಪ್ರಾಣ ಪ್ರತಿಷ್ಠೆ ನಡೆಯುವ ಮುನ್ನವೇ ಆ ಮುಸುಕನ್ನು ಹೇಗೆ ತೆಗೆಯುತ್ತೀರಿ..? ಆ ಫೋಟೋಗಳನ್ನು ತೆಗೆದವರು ಯಾರು? ಹೊರ ಹಾಕಿದ್ದು ಯಾರು ಎಂಬ ಶಂಕೆ ವ್ಯಕ್ತವಾಗುತ್ತಿದೆ. ನಿಯಮಗಳ ಉಲ್ಲಂಘನೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ.. ಅಲ್ಲದೆ ಏನಾದರೂ ದೋಷ ಜರುಗುತ್ತಾ ಎಂಬ ಅನುಮಾನವನ್ನು ನೆಟ್ಟಿಗರು ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: 160 ಸ್ಕ್ರೀನ್‌ಗಳ ಮೇಲೆ ಶ್ರೀರಾಮಮಂದಿರ ಉದ್ಘಾಟನೆ ನೇರ ಪ್ರಸಾರ..! ಟಿಕೆಟ್ ದರ, ಮಾಹಿತಿ ಇಲ್ಲಿದೆ..
ಸಧ್ಯ ಈ ಕುರಿತು ರಾಮಮಂದಿರದ ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಪ್ರತಿಕ್ರಿಯಿಸಿದ್ದಾರೆ. ಪ್ರಾಣ ಪ್ರತಿಷ್ಠೆಗೂ ಮುನ್ನ ಕೆಲವು ನಿಯಮಗಳನ್ನು ಪಾಲಿಸಬೇಕಿರುತ್ತದೆ. ಅದನ್ನು ಉಲ್ಲಂಘಿಸುವುದು ಸರಿಯಲ್ಲ, ಯಾವುದೇ ವಿಗ್ರಹವನ್ನು ಪ್ರತಿಷ್ಠಾಪಿಸುವ ಮೊದಲು, ಅದರ ಕಣ್ಣುಗಳನ್ನು ಮುಚ್ಚಬೇಕು, ಮುಸುಕು ಹಾಕಿರಬೇಕು ಎಂದಿದ್ದಾರೆ. ಅಲ್ಲದೆ, ಸಧ್ಯ ಶ್ರೀರಾಮನ ಮೂರ್ತಿಯ ಫೋಟೋ ವೈರಲ್ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ.
ಮೈಸೂರಿನ ಅರುಣ್ ಯೋಗಿರಾಜ್ ಅವರು ಶ್ರೀರಾಮನ ಮೂರ್ತಿಯನ್ನು ಕೆತ್ತಿದ್ದಾರೆ. ಈಗಾಗಲೇ ಬಲರಾಮನ ಮೂರ್ತಿ ಗರ್ಭ ಗುಡಿ ತಲುಪಿದೆ. ಜನವರಿ 22 ರಂದು ಅಭಿಜಿತ್ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಭದ್ರತಾ ಕಾರಣಗಳಿಂದಾಗಿ ಅಂದು ಕೆಲವೇ ಅತಿಥಿಗಳಿಗೆ ಮಾತ್ರ ದೇವಾಲಯದ ಒಳಗೆ ಪ್ರವೇಶ ನೀಡಲಾಗುವುದು ಎಂದು ಟ್ರಸ್ಟ್ ತಿಳಿಸಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.