ಉದ್ಗಾಟನೆಯಾದರೂ ಮುಗಿಯದ ಅಯೋಧ್ಯೆ ರಾಮಮಂದಿರ ಕಾಮಗಾರಿ, ಮಂದಿರ ಪೂರ್ಣಗೊಳ್ಳಲು ತಡವಾಗುತ್ತಿರುವುದೇಕೆ?
Ram Mandir: ರಾಮಮಂದಿರ ನಿರ್ಮಾಣ ಸಮಿತಿಯು ಇತ್ತೀಚಿಗೆ 2 ದಿನಗಳ ಕಾಲ ಸದ್ಯ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದೆ. ಮೊದಲ ಮಹಡಿ, ಸಭಾಂಗಣ, ಗಡಿ, ಪ್ರದಕ್ಷಿಣಿಯ ಮಾರ್ಗ ಸೇರಿದಂತೆ ಕಾಮಗಾರಿ ನಡೆಯುತ್ತಿರುವ ಎಲ್ಲಾ ಭಾಗಗಳಲ್ಲಿ ಪರಿಶೀಲನೆ ನಡೆಸಿದೆ. ಸಮಿತಿಗೆ 2025ರ ಸೆಪ್ಟೆಂಬರ್ ವೇಳೆಗೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಬಹುದೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
Ayodhya Ram Mandir: ಕೋಟ್ಯಂತರ ಭಕ್ತರ ಕನಸಿನ ದೇಗುಲವಾದ ಅಯೋಧ್ಯೆಯ ರಾಮಮಂದಿರವನ್ನು ಲೋಕಸಭಾ ಚುನಾವಣೆಗೂ ಮುನ್ನ 2024ರ ಜನವರಿ 22ರಂದು ಉದ್ಘಾಟನೆ ಮಾಡಲಾಗಿತ್ತು. ಶ್ರೀರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಬಳಿಕ ಕಾಮಗಾರಿಯನ್ನು ತೀವ್ರಗೊಳಿಸಲಾಗುತ್ತದೆ. 2025ರೊಳಗೆ ಸಂಪೂರ್ಣವಾಗಿ ರಾಮಮಂದಿರದ ಕಾಮಗಾರಿಯನ್ನು ಮುಗಿಸಲಾಗುತ್ತದೆ ಎಂದು ಹೇಳಲಾಗುತ್ತಿತ್ತು. ಆದರೀಗ ತಡವಾಗುತ್ತಿದೆ.
ಅಯೋದ್ಯೆಯ ರಾಮಮಂದಿರ ವಿಷಯ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರವಹಿಸಿತ್ತು ಮತ್ತು ದೇಶದಲ್ಲಿ ಅತಿ ಹೆಚ್ಚು ಚರ್ಚೆಯಾಗಿತ್ತು. ಇದೇ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಗೂ ಮುನ್ನ 2024ರ ಜನವರಿ 22ರಂದು ತರಾತುರಿಯಲ್ಲಿ ಅಯೋದ್ಯೆಯ ರಾಮಮಂದಿರ ಉದ್ಘಾಟನೆ ಮಾಡಲಾಗಿದೆ ಎಂದು ಕೂಡ ಹೇಳಲಾಗಿತ್ತು. ಇದೆಲ್ಲ ಚರ್ಚೆಯ ಬಳಿಕ ಮಂದಿರದ ಕಾಮಗಾರಿಯನ್ನು 2025ರೊಳಗೆ ಸಂಪೂರ್ಣವಾಗಿ ರಾಮಮಂದಿರದ ಕಾಮಗಾರಿಯನ್ನು ಮುಗಿಸಲಾಗುತ್ತದೆ ಎಂದು ಕೂಡ ತಿಳಿಸಲಾಗಿತ್ತು. ಆದರೀಗ ಅದು ಕೂಡ ಸುಳ್ಳಾಗುತ್ತಿದೆ. ಅಯೋಧ್ಯೆ ರಾಮಮಂದಿರ ಕಾಮಗಾರಿ ಪೂರ್ಣಗೊಳ್ಳುವುದು ಇನ್ನಷ್ಟು ನಿಧಾನವಾಗುತ್ತಿದೆ.
ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ 2025ರ ಜೂನ್ ವೇಳೆಗೆ ಅಯೋದ್ಯೆಯ ರಾಮಮಂದಿರದ ಕಾಮಗಾರಿ ಮುಗಿದಿರಬೇಕಿತ್ತು. ಆದರೆ ನಿರೀಕ್ಷೆಯಂತೆ ಕೆಲಸ ನಡೆದಿಲ್ಲದ ಕಾರಣಕ್ಕೆ 2025ರ ಸೆಪ್ಟೆಂಬರ್ ವೇಳೆಗೆ ಕಾಮಗಾರಿ ಮುಗಿಯಬಹುದು ಎಂದು ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಇದನ್ನೂ ಓದಿ- Daily GK Quiz: ಭಾರತೀಯ ಜೀವ ವಿಮಾ ನಿಗಮದ (LIC) ಪ್ರಧಾನ ಕಛೇರಿ ಎಲ್ಲಿದೆ?
ರಾಮಮಂದಿರ ಕಾಮಗಾರಿ ವಿಳಂಬಕ್ಕೆ ಪ್ರಮುಖ ಕಾರಣಗಳು:
ಯಾವ ಕಾರಣಕ್ಕೆ ರಾಮಮಂದಿರ ನಿರ್ಮಾಣ ಕಾಮಗಾರಿ ಕುಂಠಿತವಾಗುತ್ತಿದೆ ಎನ್ನುವ ಕಾರಣವನ್ನು ಕೂಡ ನೃಪೇಂದ್ರ ಮಿಶ್ರಾ ಅವರು ತಿಳಿಸಿದ್ದಾರೆ. ದೇವಸ್ಥಾನದ ಮೊದಲ ಮಹಡಿಯಲ್ಲಿ ಕೆಲವು ಕಲ್ಲುಗಳನ್ನು ಬದಲಿಸಬೇಕಾಗಿದೆ. ಇದು ಮೊದಲಿನ ಯೋಜನೆಯಾಗಿರಲಿಲ್ಲ. ಈಗ ಹೆಚ್ಚುವರಿ ಕೆಲಸವಾಗಿದೆ. ಜೊತೆಗೆ ಸುಮಾರು 200 ಕಾರ್ಮಿಕರ ಕೊರತೆ ಕಾಡುತ್ತಿದೆ. ಇವು ಮಂದಿರ ನಿರ್ಮಾಣದ ಕಾಮಗಾರಿ ವಿಳಂಬವಾಗಲು ಇರುವ ಪ್ರಮುಖ ಕಾರಣಗಳು ಎಂದಿದ್ದಾರೆ.
ರಾಮಮಂದಿರದ ಮೊದಲ ಮಹಡಿಯಲ್ಲಿ ಮಾಡಲು ಇಚ್ಚಿಸಿರುವ ಕೆಲವು ಬದಲಾವಣೆಗಳು ಏನೆಂದರೆ ದುರ್ಬಲ ಮತ್ತು ತೆಳ್ಳಗೆ ಎಂದು ಪರಿಗಣಿಸಲಾಗಿರುವ ಕಲ್ಲುಗಳನ್ನು ತೆಗೆದು ‘ಮೈಕ್ರಾನಾ’ ಕಲ್ಲುಗಳನ್ನು ಹಾಕುವುದು. ಇದನ್ನು ಮಾಡುವುದರ ಜೊತೆಗೆ ಕಾರ್ಮಿಕರ ಕೊರತೆಯ ನಡುವೆಯೂ 2025ರ ಸೆಪ್ಟೆಂಬರ್ ವೇಳೆಗೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಲು ಸಾಧ್ಯವಿದೆ ಎಂದು ನೃಪೇಂದ್ರ ಮಿಶ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಇದಲ್ಲದೆ ದೇವಾಲಯದ ಗಡಿಯಲ್ಲಿ 8.5 ಲಕ್ಷ ಘನ ಅಡಿ ಕೆಂಪು ‘ಬನ್ಸಿ ಪಹಾರ್ ಪುರ್’ ಕಲ್ಲುಗಳನ್ನು ಹಾಕಲು ಯೋಜಿಸಲಾಗಿದೆ. ಅದಕ್ಕೂ ಕೂಡ ಕಾರ್ಮಿಕರ ಕೊರತೆ ಕಾಡುತ್ತಿದೆ. ಈ ಸಮಸ್ಯೆಯನ್ನು ಪರಿಹರಿಸಿ 2025ರ ಸೆಪ್ಟೆಂಬರ್ ವೇಳೆಗೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಲು ಪ್ರಯತ್ನಿಸುತ್ತಿರುವುದಾಗಿ ನೃಪೇಂದ್ರ ಮಿಶ್ರಾ ಹೇಳಿದ್ದಾರೆ ಎನ್ನಲಾಗಿದೆ.
ರಾಮಮಂದಿರ ನಿರ್ಮಾಣ ಸಮಿತಿಯು ಇತ್ತೀಚಿಗೆ 2 ದಿನಗಳ ಕಾಲ ಸದ್ಯ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನೆ ಸಭೆ ನಡೆಸಿದೆ. ಮೊದಲ ಮಹಡಿ, ಸಭಾಂಗಣ, ಗಡಿ, ಪ್ರದಕ್ಷಿಣಿಯ ಮಾರ್ಗ ಸೇರಿದಂತೆ ಕಾಮಗಾರಿ ನಡೆಯುತ್ತಿರುವ ಎಲ್ಲಾ ಭಾಗಗಳಲ್ಲಿ ಪರಿಶೀಲನೆ ನಡೆಸಿದೆ. ಸಮಿತಿಗೆ 2025ರ ಸೆಪ್ಟೆಂಬರ್ ವೇಳೆಗೆ ಮಂದಿರದ ಕಾಮಗಾರಿಯನ್ನು ಪೂರ್ಣಗೊಳಿಸಬಹುದೆಂಬ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ- ಗೋವಾಗೆ ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಏಕಾಏಕಿ ಕುಸಿತ..? ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..
ಕಾಮಾಗಾರಿ ವಿಳಂಬವಾಗಲು ಸಣ್ಣಪುಟ್ಟ ಇನ್ನೂ ಕೆಲವು ಕಾರಣಗಳಿವೆ. ಭಗವಾನ್ ರಾಮನ ಆಸ್ಥಾನ ಮತ್ತು ಸುತ್ತಲಿನ ಆರು ದೇವಾಲಯಗಳಿಗೆ ಬೇಕಾಗಿರುವ ಪ್ರತಿಮೆಗಳು ಜೈಪುರದಲ್ಲಿ ನಿರ್ಮಾಣವಾಗುತ್ತಿವೆ. ಅವು ಅಯೋಧ್ಯೆಯನ್ನು ತಲುಪಿದ ಕೂಡಲೇ ಅವುಗಳನ್ನು ನಿರ್ಮಿಸುವ ಕೆಲಸವಾಗಲಿದೆ. ಇದೇ ಡಿಸೆಂಬರ್ ವೇಳೆಗೆ ಪ್ರತಿಮೆಗಳನ್ನು ಅಯೋಧ್ಯೆಗೆ ತಲುಪಿಸುವುದಾಗಿ ಶಿಲ್ಪಿಗಳು ಭರವಸೆ ನೀಡಿದ್ದಾರೆ. ಅವು ಆಗಮಿಸಿದ ಕೂಡಲೇ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲಾಗುವುದು. ಈ ಪ್ರತಿಮೆಗಳನ್ನು ದೇವಾಲಯದ ಸಂಕೀರ್ಣದಲ್ಲಿ ಸ್ಥಾಪಿಸಲು ದೇವಾಲಯದ ಟ್ರಸ್ಟ್ ಒಪ್ಪಿಗೆ ನೀಡಿರುವುದರಿಂದ ಆದಷ್ಟು ಬೇಗ ಪ್ರತಿಮೆಗಳ ನಿರ್ಮಾಣವಾಗಲಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.