ನವದೆಹಲಿ: Ayushman Bharat Yojana - ಮೋದಿ ಸರ್ಕಾರದ ಆಯುಷ್ಮಾನ್ ಭಾರತ್ ರಾಷ್ಟ್ರೀಯ ಸಾರ್ವಜನಿಕ ಆರೋಗ್ಯ ವಿಮಾ ಯೋಜನೆ (Ayushman Bharat National Public Health Insurance Scheme) ಫಲಾನುಭವಿಗಳಿಗೆ ದೊಡ್ಡ ಅಪ್ಡೇಟ್ ಪ್ರಕಟಗೊಂಡಿದೆ. ಇದರ ಅಡಿಯಲ್ಲಿ, ಈಗ ಫಲಾನುಭವಿಗಳು ಆರೋಗ್ಯ ಪ್ಯಾಕೇಜ್‌ನ ಭಾಗವಾಗಿರದ ವೈದ್ಯಕೀಯ ಸರ್ಜರಿಗಳ  ಆಯ್ಕೆಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ವಾಸ್ತವವಾಗಿ, ಸರ್ಕಾರವು (Modi Government) ಆಯುಷ್ಮಾನ್ ಭಾರತ್ (Health Insurance) ವ್ಯಾಪ್ತಿಯನ್ನು ಹೆಚ್ಚಿಸಲು ಬಯಸಿದೆ. ಇದರ ಬೆನ್ನಲ್ಲೇ ಪ್ರತಿ ರಾಜ್ಯದಲ್ಲೂ ಈ ಯೋಜನೆ ಜಾರಿಯಾಗಬೇಕಿದೆ.


COMMERCIAL BREAK
SCROLL TO CONTINUE READING

ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ವಿನಾಯಿತಿ
ಆಯುಷ್ಮಾನ್ ಭಾರತ್ ಯೋಜನೆಯ ಆಡಳಿತ ಸಮಿತಿಯು ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸ್ವಾತಂತ್ರ್ಯ ನೀಡಿದೆ. ಇದರ ಅಡಿಯಲ್ಲಿ, ಆಡಳಿತ ಸಮಿತಿಯ ಸಲಹೆಯ ಮೇರೆಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು 5 ಲಕ್ಷ ರೂ.ವರೆಗಿನ ಅನಿರ್ದಿಷ್ಟ ಶಸ್ತ್ರಚಿಕಿತ್ಸಾ ಪ್ಯಾಕೇಜ್‌ಗಳನ್ನು ಬುಕ್ ಮಾಡಲು ಸಾಧ್ಯವಾಗಲಿದೆ.


ಮೆಡಿಕಲ್ ಸರ್ಜರಿಗಳ ಪಟ್ಟಿ ನೀಡಲಾಗಿದೆ
ಇದರ ಹೊರತಾಗಿ, ಆರೋಗ್ಯ ಪ್ರಯೋಜನ ಪ್ಯಾಕೇಜ್‌ಗಳ (HBPs) ಬೆಲೆಯನ್ನು ರಾಜ್ಯಗಳು ನಿರ್ಧರಿಸಲು ಸಾಧ್ಯವಾಗಲಿದೆ. ಕಾರ್ಡ್ ಹೊಂದಿರುವವರಿಗೆ ವೈದ್ಯಕೀಯ ವಿಧಾನಗಳ ಪಟ್ಟಿಯನ್ನು ನೀಡಲಾಗಿದೆ. ಅದರಲ್ಲಿ ಅವರು ತನ್ನ ಪ್ರದೇಶಕ್ಕೆ ಅನುಗುಣವಾಗಿ ಪ್ಯಾಕೇಜ್ ಅನ್ನು ಆಯ್ಕೆ ಮಾಡಬಹುದು.


ಇದನ್ನೂ ಓದಿ-JEE Main 2022: ನೋಂದಣಿ ಪ್ರಕ್ರಿಯೆಗೆ ಚಾಲನೆ, ಪರೀಕ್ಷಾ ದಿನಾಂಕ ಪ್ರಕಟ


ಯೋಜನೆಯನ್ನು 2018 ರಲ್ಲಿ ಪ್ರಾರಂಭಿಸಲಾಗಿದೆ
ಆಯುಷ್ಮಾನ್ ಭಾರತ್ ಕಾರ್ಯಕ್ರಮವನ್ನು 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ (Modi Govt Health Scheme) ಅವರು ಪ್ರಾರಂಭಿಸಿದ್ದಾರೆ.  ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗದ ಕೋಟ್ಯಂತರ ಭಾರತೀಯರಿಗಾಗಿ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.


ಇದನ್ನೂ ಓದಿ-ಸಾರ್ವಜನಿಕರಿಗೆ ದೆಹಲಿ ಮೃಗಾಲಯ ಮುಕ್ತ, ರಾತ್ರೋ ರಾತ್ರಿ ಟಿಕೆಟ್ ಮಾರಾಟ


ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA), ಯೋಜನೆಯನ್ನು (Govt Health Scheme) ಕಾರ್ಯಗತಗೊಳಿಸುವ ಇಲಾಖೆಯಾಗಿದ್ದು,  ಎಲ್ಲಾ ವೈದ್ಯಕೀಯ ಕಾರ್ಯವಿಧಾನಗಳನ್ನು ಈ ಯೋಜನೆಯಡಿ ಒಳಗೊಂಡಿವೆ ಎಂದು ತಿಳಿಸಿದೆ. ಕೆಲವು ಸಂದರ್ಭಗಳಲ್ಲಿ ರೋಗಿಯು ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ.


ಇದನ್ನೂ ಓದಿ-ಒಡಿಶಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ BJD, ಕಾಂಗ್ರೆಸ್-ಬಿಜೆಪಿಗೆ ತೀವ್ರ ಮುಖಭಂಗ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.