`Azaadi Ka Amrit Mahotsava` ಪೋಸ್ಟರ್ ನಲ್ಲಿ ನೆಹರುಗಿಲ್ಲ ಜಾಗ, ಹೃದಯದಿಂದ ಹೇಗೆ ಹೊರಹಾಕುವಿರಿ ಎಂದು ಪ್ರಶ್ನಿಸಿದ ರಾಹುಲ್
Azaadi Ka Amrit Mahotsava Ceremony - ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿ (ICHR) ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (Jawahar Lal Nehru) ಅವರ ಚಿತ್ರವನ್ನು `ಆಜಾದಿ ಕೆ ಅಮೃತ್ ಮಹೋತ್ಸವ` (Azaadi Ka Amrit Mahotsava) ಆಚರಣೆಯ ಪೋಸ್ಟರ್ ನಿಂದ ತೆಗೆದುಹಾಕಿದ್ದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನವದೆಹಲಿ: Azaadi Ka Amrit Mahotsava Ceremony - ದೇಶದಲ್ಲಿ 75 ನೇ ಸ್ವಾತಂತ್ರ್ಯ ದಿನಾಚರಣೆಯ ಬಳಿಕ 'ಆಜಾದಿ ಕಾ ಅಮೃತ್ ಮಹೋತ್ಸವ'ದ ಚರ್ಚೆ ನಡೆಯುತ್ತಿದೆ. ಏತನ್ಮಧ್ಯೆ, ಕಾರ್ಯಕ್ರಮಕ್ಕೆ ಸಂಬಂಧಿಸಿದ ಪೋಸ್ಟರ್ ಗಾಲ್ಲಿ ದೇಶದ ಮೊಟ್ಟಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಇಲ್ಲದೆ ಇರುವುದರ ಬಗ್ಗೆ ತೀವ್ರ ಕೋಲಾಹಲ ಸೃಷ್ಟಿಯಾಗಿದೆ. ಭಾರತೀಯ ಇತಿಹಾಸ ಸಂಶೋಧನಾ ಮಂಡಳಿ (ICHR) ಪಂಡಿತ್ ನೆಹರು ಅವರ ಭಾವಚಿತ್ರವನ್ನು 'ಆಜಾದಿ ಕೆ ಅಮೃತ್ ಮಹೋತ್ಸವ' ಸಮಾರಂಭದ ಪೋಸ್ಟರ್ ನಿಂದ ತೆಗೆದುಹಾಕಿರುವುದಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಹುಲ್ ಗಾಂಧಿ (Rahul Gandhi) ಹೇಳಿದ್ದೇನು?
ಹಾಗೆ ನೋಡಿದರೆ ಕಾಂಗ್ರೆಸ್ (INC) ಪಕ್ಷದ ಹಲವು ನಾಯಕರು ICHR ವೆಬ್‌ಸೈಟ್‌ನಲ್ಲಿ 'ಆಜಾದಿ ಕೆ ಅಮೃತ್ ಮಹೋತ್ಸವ'ಕ್ಕೆ ಸಂಬಂಧಿಸಿದ ಛಾಯಾಚಿತ್ರಗಳ ಟ್ವಿಟರ್ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ, ಇದರಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಭಗತ್ ಸಿಂಗ್, ಮದನ್ ಮೋಹನ್ ಮಾಳವೀಯ ಮತ್ತು ವೀರ್ ಸಾವರ್ಕರ್. ಚಿತ್ರಗಳಿವೆ, ಆದರೆ ನೆಹರು ಅವರ ಚಿತ್ರ ಕಾಣೆಯಾಗಿದೆ.
ಮತ್ತೊಂದೆಡೆ ಇದಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ, ಬಿಜೆಪಿಯನ್ನು (BJP) ತರಾಟೆಗೆ ತೆಗೆದುಕೊಂಡಿದ್ದಾರೆ. 'ದೇಶದ ಪ್ರೀತಿಯ ಪಂಡಿತ್ ನೆಹರು ಅವರನ್ನು ಜನರ ಹೃದಯದಿಂದ ಹೇಗೆ ತೆಗೆದುಹಾಕುವಿರಿ?' ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ. ನೆಹರೂ ಜೀವನಕ್ಕೆ ಸಂಬಂಧಿಸಿದ ಹಲವು ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅವರು, 'ಪ್ರೀತಿಯ ಪಂಡಿತ್ ನೆಹರು ಅವರನ್ನು ಜನರ ಹೃದಯದಿಂದ ಹೇಗೆ ತೆಗೆದುಹಾಕುತ್ತೀರಿ?' ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ-Corona Third Wave: ಕೊರೊನಾ ಮೂರನೇ ಅಲೆಯ ಆತಂಕದ ನಡುವೆ ಈ ರಾಜ್ಯದಲ್ಲಿ Night Curfew ಘೋಷಣೆ
ಇತರ ಕಾಂಗ್ರೆಸ್ ಮುಖಂಡರ ಪ್ರತಿಕ್ರಿಯೆಗಳು
ಈ ಕುರಿತಂತ ಲೋಕಸಭೆಯಲ್ಲಿ ಮಾತನಾಡಿರುವ ಕಾಂಗ್ರೆಸ್ ಉಪ ನಾಯಕ ಗೌರವ್ ಗೊಗೊಯ್, ಯಾವುದೇ ದೇಶವು ತನ್ನ ಮೊದಲ ಪ್ರಧಾನಿಯ ಚಿತ್ರವನ್ನು ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸುವ ವೆಬ್‌ಸೈಟ್‌ನಿಂದ ತೆಗೆದುಹಾಕುವುದಿಲ್ಲ, ಆದರೆ ಅದನ್ನು ಇಲ್ಲಿ ಮಾಡಲಾಗಿದೆ, ಇದು "ಕ್ಷುಲ್ಲಕ" ಮತ್ತು "ಅನ್ಯಾಯ" ಎಂದು ಹೇಳಿದ್ದಾರೆ. ಇದೇ ರೀತಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೂಡ ICHR ಪಂಡಿತ್ ನೆಹರು ಅವರ ಚಿತ್ರವನ್ನು ತೆಗೆದುಹಾಕುವ ಮೂಲಕ ತನ್ನ ಹೆಸರಿಗೆ ತಾನು ಕಳಂಕ ತಂದುಕೊಂಡಿದೆ ಎಂದು ಹೇಳಿದ್ದಾರೆ.
Money Laundering Case: ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಅವರ ಪತ್ನಿಗೆ ಸಮನ್ಸ್ ಜಾರಿ
ಇದೇ ರೀತಿ ಮಾಜಿ ವಿತ್ತ ಸಚಿವ ಪಿ. ಚಿದಂಬರಂ (P.Chidambaram) ಅವರೂ ಕೂಡ ICHR ಮೇಲೆ ಇದೇ ರೀತಿಯ ಆರೋಪ ಮಾಡಿದ್ದಾರೆ.
PM Kisan ಯೋಜನೆ ಅಡಿ ಈಗ ರೈತರಿಗೆ ಸಿಗಲಿದೆ 6000 ಬದಲಿಗೆ,12000 ರೂ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ