ನವದೆಹಲಿ: ಬಿಜೆಪಿ ಸಂಸದೆ ಹಾಗೂ ಲೋಕಸಭೆ ಡೆಪ್ಯೂಟಿ ಸ್ಪೀಕರ್ ರಮಾದೇವಿ ವಿರುದ್ದ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಸಮಾಜವಾದಿ ಪಕ್ಷದ ಸಂಸದ ಅಜಂ ಖಾನ್ ಸೋಮವಾರ ಲೋಕಸಭೆಯಲ್ಲಿ ಕ್ಷಮೆ ಯಾಚಿಸಿದ್ದಾರೆ. 


COMMERCIAL BREAK
SCROLL TO CONTINUE READING

ಲೋಕಸಭೆಯಲ್ಲಿ ಗುರುವಾರ ತ್ರಿವಳಿ ತಲಾಖ್ ಬಗ್ಗೆ ಚರ್ಚೆ ಸಂದರ್ಭದಲ್ಲಿ ಸ್ಪೀಕರ್ ಸ್ಥಾನದಲ್ಲಿದ್ದ ಡೆಪ್ಯೂಟಿ ಸ್ಪೀಕರ್ ರಮಾದೇವಿ ಅವರನ್ನು ನೋಡಿ, "ನನಗೆ ನಿಮ್ಮನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎನಿಸುತ್ತದೆ" ಎಂದು ಹೇಳಿದ್ದರು. ಇದಕ್ಕೆ ಸದನದಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಅಸ್ಗ್ತೆ ಅಲ್ಲದೆ ಅಜಂ ಖಾನ್ ಕ್ಷಮೆ ಕೇಳಬೇಕು ಮತ್ತು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸದನದ ಮಹಿಳಾ ಸದಸ್ಯರು ಒತ್ತಾಯಿಸಿದ್ದರು.


 ಈ ಬೆನ್ನಲ್ಲೇ ಇಂದು ಕ್ಷಮೆಯಾಚಿಸಿದ ಅಜಂ ಖಾನ್, "ನನ್ನ ಉದ್ದೇಶ ಉಪ ಸಭಾಪತಿ ಅವರಿಗೆ ಅಗೌರವಗೊಳಿಸುವುದಾಗಿರಲಿಲ್ಲ. ನನ್ನ ಮಾತಿನಿಂದ ಇತರರ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ" ಎಂದು ಹೇಳಿದರು.


ಗುರುವಾರ ಅಜಂ ಖಾನ್ ಅವರ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ರಮಾದೇವಿ ಅವರು, ನಾನು ನಿಮ್ಮ ಸಹೋದರಿ ಇದ್ದಂತೆ, ಈ ಮಾತುಗಳು ಕಡತದಲ್ಲಿ ದಾಖಲಾಗುವುದಿಲ್ಲ. ಮಹಿಳೆಯರ ಬಗ್ಗೆ ಹೀಗೆ ಅಗೌರವದಿಂದ ಮಾತನಾಡುವುದು ಅಜಂ ಖಾನ್ ಅವರಿಗೆ ಅಭ್ಯಾಸವಾಗಿ ಹೋಗಿದೆ. ಅವರು ಸಂಸತ್ತಿನ ಒಳಗೆ ಮತ್ತು ಹೊರಗೆ ಹಾಗೆಯೇ ಮಾತನಾಡುತ್ತಾರೆ ಎಂದು ಹೇಳಿದ್ದರು.