ಧೂಮಪಾನ ತ್ಯಜಿಸಲು ಸಾಧುಗಳಿಗೆ ಬಾಬಾ ರಾಮದೇವ್ ಕರೆ
ಹಲವು ಸಾಧುಗಳಿಂದ ಧೂಮಪಾನ ಮಾಡುವ ಹೊಗೆ ಪೈಪ್ ಗಳನ್ನು ಕಿತ್ತುಕೊಂಡ ರಾಮದೇವ್, ಇನ್ನು ಮೇಲೆ ಧೂಮಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡರು.
ಪ್ರಯಾಗರಾಜ್: ಸಾಧುಗಳು ಧೂಮಪಾನ ತ್ಯಜಿಸುವಂತೆ ಯೋಗ ಗುರು ಬಾಬಾ ರಾಮದೇವ್ ಕರೆ ನೀಡಿದ್ದಾರೆ.
ಇಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಬುಧವಾರ ಭಾಗವಹಿಸಿ ಮಾತನಾಡಿದ ಅವರು, "ಶ್ರೀರಾಮ ಮತ್ತು ಶ್ರೀಕೃಷ್ಣ ಎಂದೂ ಧೂಮಪಾನ ಮಾಡಿದವರಲ್ಲ. ಹೀಗಿರುವಾಗ ನಾವೇಕೆ ಮಾಡಬೇಕು? ನಾವೆಲ್ಲರೂ ದುಮಪಾನ ತ್ಯಜಿಸುವುದಾಗಿ ಪ್ರತಿಜ್ಞೆ ಮಾಡೋಣ. ತಂದೆ, ತಾಯಿ, ಬಂಧು-ಬಳಗ, ಮನೆ ಎಲ್ಲವನ್ನೂ ತೊರೆದು ನಾವು ಸಾಧುಗಳಾಗಿದ್ದೇವೆ. ಹೀಗಿರುವಾಗ ಧೂಮಪಾನ ಈಕೆ ತ್ಯಜಿಸಬಾರದು" ಎಂದು ರಾಮದೇವ್ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹಲವು ಸಾಧುಗಳಿಂದ ಧೂಮಪಾನ ಮಾಡುವ ಹೊಗೆ ಪೈಪ್ ಗಳನ್ನು ಕಿತ್ತುಕೊಂಡ ರಾಮದೇವ್, ಇನ್ನು ಮೇಲೆ ಧೂಮಪಾನ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿಸಿಕೊಂಡರು. ಬಳಿಕ ಸಂಗ್ರಹವಾದ ಹೊಗೆ ಪೈಪು(ಚಿಲಂ)ಗಳನ್ನು ತಾವು ಮುಂದೊಂದು ದಿನ ನಿರ್ಮಿಸಲಿರುವ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡುವುದಾಗಿ ಹೇಳಿದರು.