ಲಖನೌ: ಬಾಬರಿ ಮಸೀದಿ (Babri Masjid )ಧ್ವಂಸ ಪ್ರಕರಣದಲ್ಲಿ ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಇಂದು ತನ್ನ ಅಂತಿಮ ತೀರ್ಪು ಪ್ರಕಟಿಸಿದೆ. ಸುಮಾರು 28 ವರ್ಷಗಳ ಬಳಿಕ ಈ ಪ್ರಕರಣದಲ್ಲಿ ಇಂದು ತೀರ್ಪು ಪ್ರಕಟವಾಗಿದ್ದು, ನ್ಯಾಯಾಲಯ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ.  ಈ ಕುರಿತು ವಿಚಾರಣೆಯ ಆರಂಭದಲ್ಲಿಯೇ ಸಂಕೇತಗಳನ್ನು ನೀಡಿದ್ದ ನ್ಯಾಯಪೀಠ, ಇದೊಂದು ಆಕಸ್ಮಿಕ ಘಟನೆಯಾಗಿದ್ದು, ಸುನಿಯೋಜಿತ ಘಟನೆ ಅಲ್ಲ ಎಂದಿದೆ. 



COMMERCIAL BREAK
SCROLL TO CONTINUE READING

ಜೊತೆಗೆ ಈ ಪ್ರಕರಣದಲ್ಲಿ ಸಲ್ಲಿಸಲಾಗಿರುವ ಎಲ್ಲಾ ಸಾಕ್ಷಗಳು ಸಕ್ಷಮವಾಗಿಲ್ಲ ಎಂದು ನ್ಯಾಯಪೀಠ ಹೇಳಿದೆ. ಸಿಬಿಐ ಸಲ್ಲಿಸಿರುವ ಎಲ್ಲ ಆಧಾರಗಳು ನಿರಾಧಾರವಾಗಿವೆ. ವಿಶ್ವ ಹಿಂದೂ ಪರಿಷತ್ ಹಾಗೂ ಆರ್.ಎಸ್.ಎಸ್. ಕೈವಾಡವನ್ನು ನ್ಯಾಯಾಲಯ ಅಲ್ಲಗಳೆದಿದ್ದು, ಇದೊಂದು ಕಿಡಿಗೇಡಿಗಳು ನಡೆಸಿರುವ ಕೃತ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.


Live Update
- ತೀರ್ಪು ಪ್ರಕಟಗೊಂಡ ಬಳಿಕ ಲಾಲ್ ಕೃಷ್ಣ ಅಡ್ವಾಣಿ ನಿವಾಸ ತಲುಪಿದ ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್.
- ನ್ಯಾಯಾಲಯ ನೀಡಿರುವ ತೀರ್ಪನ್ನು ಸ್ವಾಗತಿಸಿದ  ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ನ್ಯಾಯ ಗೆದ್ದಿದೆ ಎಂದಿದ್ದಾರೆ.
- ತೀರ್ಪು ಪ್ರಕಟಣೆಯ ವೇಳೆ 26 ಆರೋಪಿಗಳು ನ್ಯಾಯಾಲಯದಲ್ಲಿ ಹಾಜರಿದ್ದರೆ, ಉಳಿದ 6 ಆರೋಪಿಗಳನ್ನು ವಯಸ್ಸಿನ ಆಧಾರದ ಮೇಲೆ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿದ್ದರು.


ಕೋರ್ಟ್ ಗೆ ಹಾಜರಾಗಿದ್ದವರು
1. ವಿನಯ್ ಕಟಿಯಾರ್
2. ಸಾಕ್ಷಿ ಮಹಾರಾಜ್
3. ಸಾಧ್ವಿ ರಿತಂಭರ
4. ಚಂಪತ್ ರೈ
5. ರಾಮ್ ವಿಲಾಸ್ ವೇದಾಂತಿ
6. ಸತೀಶ್ ಪ್ರಧಾನ್
7. ಧರ್ಮದರು
8. ಪವನ್ ಪಾಂಡೆ
9. ಬ್ರಿಜ್ ಭೂಷಣ್ ಸಿಂಗ್
10. ಜಯಭಗವಾನ್ ಗೋಯಲ್
11. ಓಂಪ್ರಕಾಶ್ ಪಾಂಡೆ
12. ರಾಮಚಂದ್ರ ಖತ್ರಿ
13. ಸುಧೀರ್ ಕಕ್ಕರ್
14. ಅಮರನಾಥ್ ಗೋಯಲ್
15. ಸಂತೋಷ್ ದುಬೆ
16. ಲಲ್ಲು ಸಿಂಗ್
17. ಕಮಲೇಶ್ ತ್ರಿಪಾಠಿ
18. ವಿಜಯ್ ಬಹದ್ದೂರ್ ಸಿಂಗ್
19. ಆಚಾರ್ಯ ಧರ್ಮೇಂದ್ರ
20. ಪ್ರಕಾಶ್ ಶರ್ಮಾ
21. ಜೈಭನ್ ಪೊವಾಯಾ
22. ಧರ್ಮಮೇಂದ್ರ ಸಿಂಗ್
23. ಆರ್.ಎನ್. ಶ್ರೀವಾಸ್ತವ
24. ವಿನಯ್ ಕುಮಾರ್
25. ನವೀನ್ ಶುಕ್ಲಾ
26. ಗಾಂಧಿ ಯಾದವ್


ಆರೋಗ್ಯ ಕಾರಣಗಳಿಂದಾಗಿ ಈ 6 ಜನರು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಿದ್ದರು
1. ಎಲ್.ಕೆ.ಅಡ್ವಾಣಿ
2. ಮುರಳಿ ಮನೋಹರ್ ಜೋಶಿ
3. ಕಲ್ಯಾಣ್ ಸಿಂಗ್
4. ಉಮಾ ಭಾರತಿ
5. ಮಹಂತ್ ನರ್ತ್ಯ ಗೋಪಾಲ್ ದಾಸ್
6. ಸತೀಶ್ ಪ್ರಧಾನ್