ನವದೆಹಲಿ : ಬಾಬರಿ ಮಸೀದಿ-ರಾಮ ಜನ್ಮಭೂಮಿ ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್ ಏಪ್ರಿಲ್ 6 ರಂದು ನಡೆಸಲಿದೆ. 


COMMERCIAL BREAK
SCROLL TO CONTINUE READING

ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಅಲಹಾಬಾದ್ ಕೋರ್ಟ್ನ 2010ರ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ 13 ಮೇಲ್ಮನವಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್ ನಡೆಸಲಿದೆ. 


ಅಯೋಧ್ಯೆ ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದ ಪ್ರಕರಣದಲ್ಲಿ ಶ್ಯಾಮ್ ಬೆನೆಗಲ್, ಅಪರ್ಣಾ ಸೇನ್ ಮತ್ತು ಟೆಸ್ಟಾ ಸೆಟಲ್ವಾಡ್ ಅವರ ಅರ್ಜಿಗಳನ್ನೂ ಒಳಗೊಂಡಂತೆ ಹಸ್ತಕ್ಷೇಪಕ್ಕೆ ಅವಕಾಶ ಕೋರಿ ಸಲ್ಲಿಸಿದ್ದ ಎಲ್ಲಾ 32 ಮಧ್ಯಂತರ ಅರ್ಜಿಗಳನ್ನು ಸುಪ್ರೀಂಕೋರ್ಟ್ ಮಾ.14ರಂದು ವಜಾಗೊಳಿಸಿತ್ತು.


ಅಲ್ಲದೆ, ಸುಪ್ರೀಂಕೋರ್ಟ್'ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಾಧೀಶರಾದ ಅಶೋಕ್ ಭೂಷಣ್ ಮತ್ತು ಎಸ್.ಅಬ್ದುಲ್ ನಝೀರ್ ಒಳಗೊಂಡ ಪೀಠವು ಅಯೋಧ್ಯೆಯ ಪ್ರಕರಣದಲ್ಲಿ ಯಾವುದೇ ಮಧ್ಯಸ್ಥಿಕೆ ಅರ್ಜಿ ಸಲ್ಲಿಸದಂತೆ ಈ ಹಿಂದೆ ನಿರ್ದೇಶಿಸಿತ್ತು. 


ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಯತ್ನಿಸಿದ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಸುಬ್ರಮಣ್ಯಿಯನ್ ಸ್ವಾಮಿಯವರ ಮನವಿಯನ್ನೂ ಸುಪ್ರೀಂ ತಿರಸ್ಕರಿಸಿತ್ತು. 


ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ಹಗೆತನದ ಶತಮಾನಗಳಷ್ಟು ಹಳೆಯದಾದ ವಿವಾದದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನಾಯಕ ಸುಬ್ರಮಣ್ಯನ್ ಸ್ವಾಮಿಯ ಹಸ್ತಕ್ಷೇಪ ಅರ್ಜಿಯನ್ನು ಮೇಲ್ಮನವಿ ತಿರಸ್ಕರಿಸಿತ್ತು.