ಪುಟ್ಟ ಕಂದಮ್ಮಗಳನ್ನು ರೈಲಿನಲ್ಲಿ ಕರೆದುಕೊಂಡು ಹೋಗುವುದೆಂದರೆ ಪೋಷಕರಿಗೆ ದೊಡ್ಡ ಹರಸಾಹಸವೇ ಸರಿ. ಇದನ್ನು ಗಮನದಲ್ಲಿಟ್ಟುಕೊಂಡ ರೈಲ್ವೆ ಇಲಾಖೆ ಇದೀಗ ಪೋಷಕರು ಮಗುವನ್ನು ಯಾವುದೇ ತೊಂದರೆಯಿಲ್ಲದೇ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರೈಲ್ವೇ ಸ್ಟೇಷನ್‌ನಲ್ಲಿ ಪತ್ತೆಯಾದ ಬಾಂಬ್‌ ಮಾದರಿ ವಸ್ತು!


ಹೌದು ಪುಟ್ಟ ಮಕ್ಕಳನ್ನು ಕರೆದುಕೊಂಡು ರೈಲುಗಳಲ್ಲಿ ಸಂಚರಿಸುವ ಪೋಷಕರಿಗೆ ರೈಲ್ವೆ ಇಲಾಖೆ ಸಿಹಿ ಸುದ್ದಿ ನೀಡಿದ್ದು, ಇನ್ನು ಮುಂದೆ ರೈಲುಗಳಲ್ಲಿ ಮಕ್ಕಳಿಗಾಗಿ 'ಬೇಬಿ ಬರ್ತ್' ಇರಲಿವೆ. ಆರಂಭಿಕ ಹಂತದಲ್ಲಿ ಲಖನೌ ಮೇಲ್‌ ರೈಲುಗಳ ಲೋವರ್‌ ಬರ್ತ್ ಗಳಿಗೆ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ.


 



NEET PG 2022: ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್‌


ಹಸುಗೂಸುಗಳನ್ನು ಕರೆದುಕೊಂಡು ಸಂಚರಿಸುವ ಹೆಣ್ಣುಮಕ್ಕಳಿಗೆ ಭಾರಿ ಅನುಕೂಲವಾಗಲಿದೆ. 770 ಮಿ.ಮೀ ಉದ್ದ, 255 ಮಿ.ಮೀ ಅಗಲ ಹಾಗೂ 76.2 ಮಿ.ಮೀ ಎತ್ತರದ ಬೇಬಿ ಬರ್ತ್ ಗಳನ್ನು ಅಳವಡಿಸಲಾಗಿದೆ.  ಲಕ್ನೋ ಮೇಲ್‌ನಲ್ಲಿ ಕೋಚ್ ಸಂಖ್ಯೆ 194129/ B4, ಬರ್ತ್ ಸಂಖ್ಯೆ 12 ಮತ್ತು 60 ಗೆ ಬೇಬಿ ಬರ್ತ್ ಅನ್ನು ಸೇರಿಸಲಾಗಿದೆ ಎಂದು ಉತ್ತರ ರೈಲ್ವೆಯ ಲಕ್ನೋ ವಿಭಾಗ ತಿಳಿಸಿತ್ತು. ಇವರ ಈ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿತ್ತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.