ನವದೆಹಲಿ: ಇನ್ಮುಂದೆ ರೈಲಿನಲ್ಲಿ ಪ್ರಯಾಣ ಬೆಳೆಸುವುದು ಇನಷ್ಟು ಕಷ್ಟಕರವಾಗಲಿದೆ. ಹೌದು, ಕೇಂದ್ರ ಸರ್ಕಾರ ರೈಲು ಪ್ರಯಾಣ ದರದಲ್ಲಿ ಹೆಚ್ಚಳ ಮಾಡಲು ನಿರ್ಣಯ ಕೈಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಈ ಕುರಿತಾದ ಪ್ರಸ್ತಾಪಕ್ಕೆ  ಮಂಜೂರಾತಿ ನೀಡಿದೆ. ಹೀಗಾಗಿ ರೈಲು ಪ್ರಯಾಣದಲ್ಲಿ ಶೇ.10ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಹೆಚ್ಚಾಗಿರುವ ಪ್ರಯಾಣ ದರಗಳ ಕುರಿತು ಸರ್ಕಾರ ಶೀಘ್ರವೇ ಪ್ರಕಟಣೆ ಹೊರಡಿಸಲಿದೆ ಎನ್ನಲಾಗಿದೆ. 


COMMERCIAL BREAK
SCROLL TO CONTINUE READING

ಕೇಂದ್ರ ರೇಲ್ವೆ ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ರೇಲ್ವೆ ಮಂಡಳಿಯ ಅಧ್ಯಕ್ಷರು ಸರ್ಕಾರದ ಜೊತೆಗೆ ಈ ಕುರಿತಾದ ಪ್ರಸ್ತಾಪದ ಮೇಲೆ ಮಾತುಕತೆ ನಡೆಸಿದ್ದು, ಶೀಘ್ರವೇ ವಿವಿಧ ರೈಲುಗಳ ಪ್ರಯಾಣದರ ಹೆಚ್ಚಳದ ಕುರಿತು ಘೋಷಣೆಯಾಗಲಿದೆ ಎನ್ನಲಾಗಿದೆ. ದೇಶಾದ್ಯಂತ ಚಲಿಸುವ ವಿವಿಧ ಪ್ಯಾಸೆಂಜರ್ ರೈಲುಗಳ ವಿವಿಧ ಶ್ರೇಣಿಗಳ ಪ್ರಯಾಣ ದರ ಹೆಚ್ಚಿಸಲು ಕೇಂದ್ರ ರೇಲ್ವೆ ಸಚ್ವಾಲಯ ರೋಡ ಮ್ಯಾಪ್ ಸಿದ್ಧಪಡಿಸಿದೆ. 


AC, ಸ್ಲೀಪರ್, ಸಾಮಾನ್ಯ ಹಾಗೂ ಪಾಸ್ ಗಳ ದರಗಳಲ್ಲಿ ಹೆಚ್ಚಳ
ಮೂಲಗಳಿಂದ ದೊರೆತ ಮಾಹಿತಿ ಪ್ರಕಾರ ಎಲ್ಲಾ ಶ್ರೇಣಿಗಳ ಪ್ರಯಾಣ ದರ ಹೆಚ್ಚಳ ಮಾಡುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ ಪ್ರಸ್ತಾಪದಲ್ಲಿ AC, ಸ್ಲೀಪರ್ ಹಾಗೂ ಸಾಮಾನ್ಯ ಶ್ರೇಣಿಯ ಪ್ರಯಾಣದರದಲ್ಲಿ ಹೆಚ್ಚಳದ ಜೊತೆಗೆ ಮಾಸಿಕ ರೇಲ್ವೆ ಪಾಸ್ ದರದಲ್ಲಿಯೂ ಕೂಡ ವೃದ್ಧಿಯಾಗಲಿದೆ. ಆದರೆ, ಸರ್ಕಾರ ಈ ದರಗಳನ್ನು ತರ್ಕಬದ್ಧಗೊಳಿಸಲಾಗುವುದು ಎಂದಿದ್ದರೂ ಕೂಡ ಪ್ರಯಾಣ ದರದಲ್ಲಿ ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರ್ತಿಸಲಾಗಿದೆ.


ಸರಕು ಶುಲ್ಕಗಳಲ್ಲಿ ಇಳಿಕೆಯಾಗುವ ಸಾಧ್ಯತೆ
ರಸ್ತೆಗಳ ಮೂಲಕ ಸರಕು ಸಾಗಾಣಿಕೆಯಿಂದ ಬರುವ ಆದಾಯ ಇಲಿಕೆಯಾಗುತ್ತಿರುವದನ್ನು ಪರಿಗಣಿಸಿರುವ ರೇಲ್ವೆ ಸಚಿವಾಲಯ ಸರಕು ಸಾಗಾಣಿಕಾ ಶುಲ್ಕವನ್ನು ಇಳಿಕೆ ಮಾಡುವ ಸಾಧತೆಯನ್ನೂ ಸಹ ವರ್ತಿಸಲಾಗುತ್ತಿದೆ. ಅಷ್ಟೇ ಅಲ್ಲ ಪ್ರಸ್ತುತ ಜಾರಿಯಲ್ಲಿರುವ ದರದಲ್ಲಿ ಕಡಿತದ ಘೋಷಣೆಯಾಗುವ ಸಾಧ್ಯತೆ ಕೂಡ ಇದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದು, ಇದರಿಂದ ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎನ್ನಲಾಗಿದೆ.