ನವದೆಹಲಿ: ಕೇಂದ್ರ ಸಚಿವೆ ಹರ್ಸಿಮ್ರಾತ್ ಕೌರ್ ಬಾದಲ್ ಅವರು ನವಜೋತ್ ಸಿಂಗ್ ರನ್ನು ಪಾಕಿಸ್ತಾನದ ಏಜೆಂಟ್ ಎಂದು ಕರೆದ ನಂತರ ಪ್ರತಿಕ್ರಿಯೆ ನೀಡಿರುವ ಸಿಧು ಪತ್ನಿ ನವಜೋತ್ ಕೌರ್ "ಬಾದಲ್ ಕುಟುಂಬ ಸಿಖ್ಖರನ್ನು ನಾಶಮಾಡುತ್ತಿದೆ" ಎಂದು ಪ್ರತ್ಯುತ್ತರ ನೀಡಿದ್ದಾರೆ.



COMMERCIAL BREAK
SCROLL TO CONTINUE READING

ಬಾದಲ್ ಕುಟುಂಬದ ಮೇಲೆ ವಾಗ್ದಾಳಿ ನಡೆಸಿದ ಕೌರ್" ನನಗೆ ಅನಿಸುತ್ತೆ ಬಾದಲ್ ಕುಟುಂಬದವರು ಗೂಂಡಾಗಳು, ಇಡೀ ಸಿಖ್ಖರನ್ನು ನಾಶ ಮಾಡಲಿಕ್ಕೆ ಅವರೇ ಕಾರಣಕರ್ತರು. ಅವರು ಸಿಖ್ಖರಿಗಾಗಿ ಏನು ಮಾಡಿಲ್ಲ. ಅವರು ಭ್ರಷ್ಟರಾಗಿದ್ದು 1984ರಲ್ಲಿ ಸಂತ್ರಸ್ತರಿಗೆ ಬಂದಂತಹ ಹಣವನ್ನು ಅವರು ಬಳಸಿಕೊಂಡಿದ್ದಾರೆ ಎಂದರು.


"ನಾವು ಗುರುನಾನಕ್ ಹಾಗೂ ಸಿಖ್ಖರ ಪ್ರಾರ್ಥನೆಯಿಂದಾಗಿ ಈ ಕಾರಿಡಾರ್ ಮುಕ್ತಗೊಳಿಸಿಲಾಗಿದೆ ಎಂದು ನಂಬಿದ್ದೇವೆ.ಆದರೆ ಇದರ ಶ್ರೆಯವನ್ನು ನಾವು ತೆಗೆದುಕೊಳ್ಳುವುದಿಲ್ಲ. ಒಂದು ವೇಳೆ ಈ ಕಾರಿಡಾರ್ ನ ಕ್ರೆಡಿಟ್ ನ್ನು ಅವರು ತೆಗೆದುಕೊಳ್ಳಬೇಕಾದರೆ ಎಷ್ಟು ಬಾರಿ ಪಾಕಿಸ್ತಾನಕ್ಕೆ ಇದರ ಉದ್ದೇಶಕ್ಕಾಗಿ ಭೇಟಿ ನೀಡಿದ್ದಾರೆ ಎನ್ನುವುದನ್ನು ತಿಳಿಸಬೇಕು.ಅವರಿಗೆಲ್ಲ ನಾಚಿಕೆಯಾಗಬೇಕು "ಎಂದು ಕೌರ್ ಆಕ್ರೋಶ ವ್ಯಕ್ತಪಡಿಸಿದರು.