ನವದೆಹಲಿ: ಭಾರತದ ಪ್ರಮುಖ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಬಜಾಜ್ ಆಟೋ ತನ್ನ ನೆಚ್ಚಿನ ಬೈಕ್ ಪಲ್ಸರ್ ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದೆ.


COMMERCIAL BREAK
SCROLL TO CONTINUE READING

ಕಂಪೆನಿಯು 180 ಸಿಸಿಗಳಲ್ಲಿ ಪಲ್ಸರ್ ಬೈಕ್ ನ ಹೊಸ ರೂಪಾಂತರಗಳನ್ನು ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ ಪಲ್ಸರ್ 180 ಎಫ್ (ಪಲ್ಸರ್ 180F)ಬೈಕ್ ನ ಎಕ್ಸ್ ಶೋರೂಂ ಬೆಲೆ  87450 ರೂ. ಗಳಾಗಿವೆ. ಈ ಬೈಕ್ ಮಾಡೆಲ್ ಅನ್ನು ಬಜಾಜ್ ವೆಬ್ಸೈಟ್ ನಲ್ಲಿ ಪಲ್ಸರ್ 180 ನಿಯಾನ್ ಎಂದು ಪಟ್ಟಿ ಮಾಡಲಾಗಿದೆ.


ಪಲ್ಸರ್ 220 ಎಫ್ ವಿನ್ಯಾಸವನ್ನು ಒಳಗೊಂಡಿದೆ
ಸದ್ಯ ಈ ಹೊಸ ಮಾಡೆಲ್ ಬೈಕ್ ಕಿತ್ತಳೆ ಬಣ್ಣದಲ್ಲಿ ಮಾತ್ರ ಲಭ್ಯವಿದೆ. ಪಲ್ಸರ್ 180F ವಿನ್ಯಾಸದ ಬಗ್ಗೆ ಹೇಳುವುದಾದರೆ, ಇದು ನೋಡಲು ಪಲ್ಸರ್ 220Fನಂತೆಯೇ ಇದ್ದರೂ, ಬೈಕ್ ನ ಬೇಸಿಕ್ ಕಲರ್ ಮೆಟ್ ಗ್ರೇ ಆಗಿದ್ದು, ಲೋಗೊವನ್ನು ಕಿತ್ತಳೆ ಬಣ್ಣದಲ್ಲಿ ಫಿನಿಷಿಂಗ್ ನೀಡಲಾಗಿದೆ. ಬೈಕ್ ನ ಸೈಡ್ ಪ್ಯಾನೆಲ್, ಹೆಡ್ ಲ್ಯಾಂಪ್ ಮತ್ತು ದ್ವಿಚಕ್ರದ ಪ್ರತ್ಯೇಕ ಭಾಗಗಳಲ್ಲಿ ಇದೇ ರೀತಿಯ ಫಿನಿಷಿಂಗ್ ನೀಡಲಾಗಿದೆ. 


178.6 ಸಿಸಿ ಸಿಂಗಲ್ ಸಿಲಿಂಡರ್ ಇಂಜಿನ್
ಬಜಾಜ್ ಪಲ್ಸರ್ 180F ಬೈಕಿನಲ್ಲಿ 178.6 ಸಿಸಿ ಹೊಂದಿರುವ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಇರುವ ಫೋರ್ ಸ್ಟ್ರೋಕ್ ಎಂಜಿನ್ ಇದೆ. ಇದರಲ್ಲಿ 8,500 ಆರ್ಪಿಎಮ್ ನಲ್ಲಿ 17.2 ಪಿಎಎಸ್ ಪವರ್ ಮತ್ತು 6,500 rpmನಲ್ಲಿ 14.22 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರಲ್ಲಿ 5 ಸ್ಪೀಡ್ ಮ್ಯಾನುಯಲ್ ಗೇರ್‌ಬಾಕ್ಸ್ ಸಂಯೋಜಿತವಾಗಿದೆ.


ಎಬಿಎಸ್ ವ್ಯವಸ್ಥೆ ಇಲ್ಲ
ಪಲ್ಸರ್ 180F ಬೈಕಿನಲ್ಲಿ ಎಬಿಎಸ್ ವ್ಯವಸ್ಥೆಯನ್ನು ಕಂಪನಿ ನೀಡಿಲ್ಲ.  ಆದರೆ, ಬಜಾಜ್ 125 ಸಿಸಿ ಗಿಂತ ಹೆಚ್ಚಿರುವ ಇತರ ಮಾದರಿಯ ಬೈಕ್ ಗಳಲ್ಲಿ ಕಂಪನಿ ಎಬಿಎಸ್ ಅಳವಡಿಸಿದೆ. ಆದರೆ ಈ ಬೈಕಿನಲ್ಲಿ ಮಾತ್ರ ಈ ವ್ಯವಸ್ಥೆ ನೀಡಲಾಗಿಲ್ಲ. ಏಪ್ರಿಲ್ 1 ರಿಂದ ಸರ್ಕಾರ ಎಬಿಎಸ್ ಕಡ್ದಾಯಗೊಳಿಸಿರುವ ಹಿನ್ನೆಲೆಯಲ್ಲಿ ಮಾರ್ಚ್ 31ರ ಬಳಿಕ ಬಿಡುಗಡೆಯಾಗುವ ಮಾದರಿಗಳಲ್ಲಿ ಬಜಾಜ್ ಕಂಪನಿ ಎಬಿಎಸ್ ಅಳವಡಿಸಲಿದೆ ಎಂದು ನಿರೀಕ್ಷಿಸಲಾಗಿದೆ. 


ಬಜಾಜ್ ಪಲ್ಸರ್ 180F ಬೈಕ್ 17 ಇಂಚಿನ ಮಿಶ್ರಲೋಹದ ವೀಲ್ ಗಳನ್ನು ಹೊಂದಿದೆ. ಮುಂಭಾಗದಲ್ಲಿ 90/90 ಸೆಕ್ಷನ್ ಟೈರ್ ಮತ್ತು ಹಿಂಬಾಗದಲ್ಲಿ 120/80 ಸೆಕ್ಷನ್ ಟೈರ್ ನೀಡಲಾಗಿದೆ.  ಅಲ್ಲದೆ, ಬೈಕು 2035 ಮಿ.ಮೀ. ಉದ್ದ, 115 ಮಿ.ಮೀ ಎತ್ತರ ಮತ್ತು 765 ಎಂಎಂ ಅಗಲವಿದೆ.  ಜೊತೆಗೆ 15 ಲೀಟರ್ ಇಂಧನ ಸಾಮರ್ಥ್ಯ ಇರುವ ಟ್ಯಾಂಕ್ ಹೊಂದಿದೆ.