Odisha Train Accident Big Shocking News: ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತ ಇದುವರೆಗಿನ ಅತಿದೊಡ್ಡ ರೈಲು ಅಪಘಾತದ ಪಟ್ಟಿಗೆ ಸೇರಿಕೊಂಡಿದೆ. ಈ ಅಪಘಾತದಲ್ಲಿ ಸುಮಾರು 278 ಜನರು ಸಾವನ್ನಪ್ಪಿದರೆ, 1200 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಅಪಘಾತದ ಬಳಿಕ ಸ್ಥಳಕ್ಕಾಗಮಿಸಿದ ರಕ್ಷಣಾ ಮತ್ತು ಪರಿಹಾರ ತಂಡಕ್ಕೆ ಒಂದೇ ಒಂದು ಗಾಯದ ಗುರುತು ಇಲ್ಲದ 40 ಶವಗಳು ಪತ್ತೆಯಾಗಿವೆ ಎಂದರೆ ನೀವೂ ಕೂಡ ಒಂದು ಕ್ಷಣ ತಬ್ಬಿಬ್ಬಾಗುವಿರಿ. ಇದೀಗ ಅವರ ಸಾವು ಹೇಗೆ ಸಂಭವಿಸಿರಬಹುದು ಎಂಬುದರ ಬಗ್ಗೆ ತನಿಖಾ ಸಂಸ್ಥೆಗಳು ಗೊಂದಲಕ್ಕೊಳಗಾಗಿವೆ. ಆದರೆ, ಪೊಲೀಸರು ದಾಖಲಿಸಿರುವ ಎಫ್‌ಐಆರ್‌ನಲ್ಲಿ ಇದಕ್ಕೆ ಉತ್ತರ ಸಿಕ್ಕಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ-Balasore Train Mishap: ಓಡಿಷಾ ರೈಲು ದುರಂತ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸಿದ ಸಿಬಿಐ


ವಿದ್ಯುತ್ ಸ್ಪರ್ಶದಿಂದ 40 ಸಾವು...
ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದಲ್ಲಿ, ಕೋರಮಂಡಲ್ ಎಕ್ಸ್‌ಪ್ರೆಸ್‌ನಿಂದ ವಶಪಡಿಸಿಕೊಂಡ ಸುಮಾರು 40 ಮೃತ ದೇಹಗಳಲ್ಲಿ ಗಾಯದ ಒಂದು ಗುರುತು ಕೂಡ ಪತ್ತೆಯಾಗಿಲ್ಲ, ಇದು ತನ್ನಷ್ಟಕ್ಕೆ ತಾನೇ ಒಂದು ಆಘಾತಕಾರಿ ಸಂಗತಿಯಾಗಿದೆ. ಇದನ್ನು ವೈದ್ಯರು ಮತ್ತು ತನಿಖಾ ಸಂಸ್ಥೆಗಳು ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಅಂದು ನಮ್ಬೀದ್ದಾರೆ. ಈ ಬಗ್ಗೆ ಸ್ವತಃ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್‌ಪಿ) ಮಾಹಿತಿ ನೀಡಿದೆ. ಬಾಲಸೋರ್‌ನ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾದ ಎಫ್‌ಐಆರ್ ಅಪಘಾತದ ನಂತರ ಓವರ್‌ಹೆಡ್ ವೈರ್‌ಗಳು ತುಂಡಾಗಿ , ಕೋಚ್ ಗಳ ಮೇಲೆ ಕುಸಿದು ಬಿದ್ದ ಕಾರಣ ಅವುಗಳಲ್ಲಿರುವ ಪ್ರಯಾಣಿಕರಿಗೆ ವಿದ್ಯುತ್ ಸ್ಪರ್ಶವಾಗಿದೆ ಎಂಬುದನ್ನೂ ಸೂಚಿಸುತ್ತದೆ. ಇದರಿಂದಾಗಿ ಅವರು ಸಾವನ್ನಪ್ಪಿದ್ದಾರೆ. ಓವರ್‌ಹೆಡ್ ತಂತಿಗಳ ಸ್ಪರ್ಶದಿಂದ ಅನೇಕ ಪ್ರಯಾಣಿಕರು ಗಾಯಗಳು ಮತ್ತು ವಿದ್ಯುದಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪಿ ಕುಮಾರ್ ನಾಯಕ್ ಎಫ್‌ಐಆರ್‌ನಲ್ಲಿ ತಿಳಿಸಿದ್ದಾರೆ. ಅಪಘಾತದ ನಂತರ ಬೋಗಿಗಳು ಪಲ್ಟಿಯಾದ ಪರಿಣಾಮ ವಿದ್ಯುತ್ ಕಂಬಗಳು ಬಿದ್ದಿದ್ದು, ಮೇಲಿನಿಂದ ಹೋಗುತ್ತಿದ್ದ ತಂತಿಗಳು ತುಂಡಾಗಿ ಕೋಚ್ ಗಳ ಮೇಲೆ ಬಿದ್ದಿವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಇದನ್ನೂ ಓದಿ-Manipur Clash: ಮಣಿಪುರ ಹಿಂಸಾಚಾರದಲ್ಲಿ ಓರ್ವ ಬಿಎಸ್ಎಫ್ ಜವಾನ ಹುತಾತ್ಮ, ಅಸ್ಸಾಂ ರೈಫಲ್ಸ್ ನ ಇಬ್ಬರು ಯೋಧರಿಗೂ ಗುಂಡೇಟು


ಸಿಬಿಐ ತನಿಖೆ ನಡೆಸುತ್ತಿದೆ
ಒಡಿಶಾದ ಬಾಲಸೋರ್‌ನಲ್ಲಿ ಶುಕ್ರವಾರ ಮೂರು ರೈಲುಗಳು ಅಪಘಾತಕ್ಕೀಡಾಗಿವೆ ಎಂಬುದು ಇಲ್ಲಿ ಗಮನಾರ್ಹ. ಈ ವೇಳೆ ಹೌರಾ-ಚೆನ್ನೈ ಕೋರಮಂಡಲ್ ಎಕ್ಸ್‌ಪ್ರೆಸ್, ಬೆಂಗಳೂರು-ಹೌರಾ ಎಕ್ಸ್‌ಪ್ರೆಸ್ ಹಾಗೂ ನಿಂತಿದ್ದ ಗೂಡ್ಸ್ ರೈಲು ಅಪಘಾತಕ್ಕೀಡಾಗಿವೆ. ಸದ್ಯ ಪ್ರಕರಣದ ತನಿಖೆಯನ್ನು ಮಂಗಳವಾರ ಸಿಬಿಐ ತನ್ನ ಕೈಗೆತ್ತಿಕೊಂಡಿದೆ. ಇದರಲ್ಲಿ ತಪ್ಪಿತಸ್ತರು ಯಾರೇ ಆಗಿರಲಿ ಅವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದು ರೈಲ್ವೆ ಸಚಿವೆ ಅಶ್ವಿನಿ ವೈಷ್ಣವ್ ಈಗಾಗಲೇ ಹೇಳಿದ್ದಾರೆ. ಸಂತ್ರಸ್ತ ಕುಟುಂಬಗಳಿಗೆ ಕೇಂದ್ರದಿಂದ ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಇದೇ ವೇಳೆ ಅಪಘಾತದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನಡೆಯುತ್ತಿದೆ. ವೈದ್ಯರ ತಂಡ 24 ಗಂಟೆಗಳ ಕಾಲ ಅಲರ್ಟ್ ಆಗಿದೆ. ಅನೇಕ ಪ್ರಯಾಣಿಕರನ್ನು ಬಸ್‌ನಿಂದ ಅವರವರ ಮನೆಗಳಿಗೆ ತಲುಪಿಸಲಾಗಿದೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.