ನವದೆಹಲಿ: ಬ್ಯಾಂಕ್ ಖಾತೆ ಹೊಂದಿರುವುದು ಇಂದು ಎಲ್ಲರ ಜೀವನದ ಆವಶ್ಯಕ ಸಂಗತಿಯಾಗಿ ಪರಿಣಮಿಸಿದೆ. ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಉಳಿತಾಯ ಖಾತೆಯನ್ನು ಹೊಂದಿದ್ದಾರೆ. ಒಬ್ಬೊಬ್ಬ ವ್ಯಕ್ತಿ ಹಲವು ಖಾತೆಗಳನ್ನು  ಹೊಂದಿದ್ದಾರೆ. ನೌಕರ ವರ್ಗದವರು ನೌಕರಿಯ ಕಾರಣ ಹಲವು ಬ್ಯಾಂಕ್ ಗಳಲ್ಲಿ ಸ್ಯಾಲರಿ ಅಕೌಂಟ್ ತೆರೆಯಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಒಂದೇ ವ್ಯಕ್ತಿಯ ಹೆಸರಿನಲ್ಲಿ ಹಲವು ಕಂಡು ಬರುತ್ತವೆ. ಆದರೆ, ಕಾಲಕ್ರಮೇಣ ಕೆಲವು ಖಾತೆಗಳು ಬಳಕೆಯಾಗದೆಯೇ. ಆದರೂ ಕೂಡ ನಾವು ಇಂತಹ ಖಾತೆಗಳನ್ನು ಬಂದ್ ಮಾಡುವುದಿಲ್ಲ. ಆದರೆ, ಇದರಿಂದ ನಮಗೆ ಹಾನಿಯಾಗುವ ಸಾಧ್ಯತೆ ಇದೆ. ಏಕೆಂದರೆ ಇಂತಹ ಅಕೌಂಟ್ ಗಳ ಮೇಲೆ ಬ್ಯಾಂಕ್ ಗಳು ಹಲವು ವಿಧಧ ಶುಲ್ಕಗಳನ್ನು ವಿಧಿಸುತ್ತವೆ.


COMMERCIAL BREAK
SCROLL TO CONTINUE READING

ಮಿನಿಮಮ್ ಬ್ಯಾಲೆನ್ಸ್ ಹೊಂದುವುದು ಅವಶ್ಯಕವಾಗಿದೆ
ವಿವಿಧ ಬ್ಯಾಂಕ್ ಗಳಿಗೆ ಅನುಗುಣವಾಗಿ ತಿಂಗಳಿಗೆ ರೂ.500 ರಿಂದ ರೂ.10000 ವರೆಗೆ ಕನಿಷ್ಠ ಬ್ಯಾಲೆನ್ಸ್ ಹೊಂದುವುದು ಅನಿವಾರ್ಯವಾಗಿದೆ. ಇಲ್ಲದೆ ಹೋದಲ್ಲಿ ಬ್ಯಾಂಕ್ ಗಳು ತನ್ನ ಪಾಲಸಿಗೆ ಅನುಗುಣವಾಗಿ ಶುಲ್ಕ ವಿಧಿಸುತ್ತವೆ. ಇದಕ್ಕಾಗಿ ರೂ.5 ರಿಂದ ರೂ.150ರವರೆಗೆ ಚಾರ್ಜ್ ವಿಧಿಸಲಾಗುತ್ತದೆ.


ನೌಕರಿ ಬಿಟ್ಟ ಬಳಿಕ ಖಾತೆಯನ್ನು ಬಂದ್ ಮಾಡಿ
ಝೀರೋ ಬ್ಯಾಲೆನ್ಸ್ ಅಕೌಂಟ್ ಕೂಡ ಸತತ ಮೂರು ತಿಂಗಳುಗಳ ಕಾಲ ಖಾತೆಗೆ ವೇತನ ಬರದೆ ಹೋದ ಸಂದರ್ಭದಲ್ಲಿ ಸಾಧಾರಣ ಉಳಿತಾಯ ಖಾತೆಯಾಗಿ ಪರಿವರ್ತನೆಯಾಗುತ್ತವೆ. ಆಗ, ಆ ಖಾತೆಯಲ್ಲಿಯೂ ಕೂಡ ಕನಿಷ್ಠ ಬ್ಯಾಲೆನ್ಸ್ ಹೊಂದುವುದು ಅವಶ್ಯಕವಾಗಿದೆ.


ಡೆಬಿಟ್ ಕಾರ್ಡ್ ಗೆ ಶುಲ್ಖ ನೀಡಬೇಕು
ಬ್ಯಾಂಕ್ ಖಾತೆ ತೆರೆದ ಬಳಿಕ ಯಾವುದೇ ವಿಶೇಷ ಶುಲ್ಕ ಅನ್ವಯಿಸುವುದಿಲ್ಲ. ಆದರೆ, ಹಲವು ಬ್ಯಾಂಕ್ ಗಳು ತಮ್ಮ ಡೆಬಿಟ್ ಕಾರ್ಡ್ ಮೇಲೆ ಶುಲ್ಕ ವಸೂಲಿ ಮಾಡುತ್ತವೆ. ಈ ಶುಲ್ಕ ರೂ.100 ರಿಂದ ರೂ.1000 ಗಳಷ್ಟಿರುತ್ತವೆ. ಈ ಶುಲ್ಕ ಸ್ವಯಂ ಚಾಲಿತವಾಗಿ ನಿಮ್ಮ ಖಾತೆಯಿಂದ ಕಡಿತಗೊಳ್ಳುತ್ತದೆ. ಒಂದು ವೇಳೆ ನೀವು ಖಾತೆಯನ್ನು ಬಳಸದೇ ಇದ್ದರೂ ಕೂಡ ನಿಮಗೆ ಈ ಶುಲ್ಕ ವಿಧಿಸಲಾಗುತ್ತದೆ.


SMS ಕಳುಹಿಸಲು ಕೂಡ ಶುಲ್ಕ ವಿಧಿಸಲಾಗುತ್ತದೆ
ನಿಮ್ಮ ಫೋನ್ ಗೆ ಖಾತೆಯಲ್ಲಿ ನಡೆಸಲಾದ ವ್ಯವಹಾರದ ಕಿರು ಸಂದೇಶ ಕಳುಹಿಸಲು ಕೂಡ ಶುಲ್ಕ ವಸೂಲಿ ಮಾಡುತ್ತವೆ. ಈ ಶುಲ್ಕ ಪ್ರತಿ ತ್ರಿಮಾಸಿಕ ರೂ.30 ರಷ್ಟಿರುತ್ತದೆ. ಇದಲ್ಲದೆ ಫೋನ್ ಮೂಲಕ ಖಾತೆಯ ಬಗ್ಗೆ ವಿವರ ನೀಡಲೂ ಕೂಡ ಬ್ಯಾಂಕ್ ಗಳು ಶುಲ್ಕ ವಿಧಿಸುತ್ತವೆ.