CoronaVirus ಬಿಕ್ಕಟ್ಟು, ಲಾಕ್ ಡೌನ್ ಮಧ್ಯೆಯೇ ನಡೆಯಲಿದೆ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ
ಕೊರೊನಾ ಬಿಕ್ಕಟ್ಟು ಮತ್ತು ಲಾಕ್‌ಡೌನ್ ಮಧ್ಯೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ಏಪ್ರಿಲ್ 1 ರಂದು ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೈಗೊಳ್ಳಲಿದೆ.
ಕೊರೊನಾ ಬಿಕ್ಕಟ್ಟು ಮತ್ತು ಲಾಕ್‌ಡೌನ್ ಮಧ್ಯೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲು ಸರ್ಕಾರ ಏಪ್ರಿಲ್ 1 ರಂದು ಬ್ಯಾಂಕುಗಳ ವಿಲೀನ ಪ್ರಕ್ರಿಯೆ ಕೈಗೊಳ್ಳಲಿದೆ. ಸರ್ಕಾರದ ಈ ಹೆಜ್ಜೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ಹೆಚ್ಚಿನ ಶಕ್ತಿ ಸಿಗಲಿದೆ. ಏಪ್ರಿಲ್ ತಿಂಗಳ ಆರಂಭದಲ್ಲಿ ದೇಶದ ಒಟ್ಟು 10 ಹೊಸ ಬ್ಯಾಂಕುಗಳನ್ನು ವಿಲೀನಗೊಳಿಸಿ 4 ಹೊಸ ಬ್ಯಾಂಕುಗಳನ್ನು ನಿರ್ಮಿಸಲಾಗುತ್ತಿದೆ.
4 ಹೊಸ ಬ್ಯಾಂಕ್ ಗಳ ನಿರ್ಮಾಣ
ಇದೇ ತಿಂಗಳ ಆರಂಭದಲ್ಲಿ 10 ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳನ್ನು ನಾಲ್ಕು ಬ್ಯಾಂಕುಗಳಾಗಿ ವಿಲೀನಗೊಳಿಸುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತ್ತು. ಈ ವಿಲೀನ ಮುಂದಿನ ಹಣಕಾಸು ವರ್ಷದಿಂದ ಜಾರಿಗೆ ಬರಲಿದೆ. ಅಂದರೆ, ಏಪ್ರಿಲ್ 1 ರಿಂದ 10 ಬ್ಯಾಂಕುಗಳು ವಿಲೀನಗೊಂಡು 4 ಬ್ಯಾಂಕುಗಳಾಗಿ ಪರಿವರ್ತನೆಯಾಗಲಿವೆ.
PNBಯಲ್ಲಿ ಈ ಬ್ಯಾಂಕ್ ಗಳು ವಿಲೀನಗೊಳ್ಳಲಿವೆ
ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಈ ವಿಲೀನದ ನಂತರ, ಇದು ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಿ ಮಾರ್ಪಟ್ಟಿದೆ.
ವಿಲೀನ ಪ್ರಕ್ರಿಯೆಯಲ್ಲಿ ಈ ಬ್ಯಾಂಕ್ ಗಳೂ ಕೂಡ ಶಾಮೀಲಾಗಿವೆ
ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್‌ನೊಂದಿಗೆ ವಿಲೀನಗೊಂಡರೆ, ಅಲಹಾಬಾದ್ ಬ್ಯಾಂಕ್, ಇಂಡಿಯನ್ ಬ್ಯಾಂಕ್ ನೊಂದಿಗೆ ವಿಲೀನಗೊಳಿಸಲಾಗಿದೆ. ಅಂತೆಯೇ, ಆಂಧ್ರ ಬ್ಯಾಂಕ್ ಮತ್ತು ಕಾರ್ಪೊರೇಷನ್ ಬ್ಯಾಂಕ್ ಅನ್ನು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಲಾಗಿದೆ.
ಈ ಬ್ಯಾಂಕ್ ಗಳೂ ಕೂಡ ವಿಲೀನಗೊಂಡಿವೆ
ಈ ವಿಲೀನದ ನಂತರ, ದೇಶದಲ್ಲಿ ಒಟ್ಟು ಏಳು ಬೃಹತ್ ಗಾತ್ರದ ಬ್ಯಾಂಕುಗಳು ಇರಲಿದ್ದು, ಅವುಗಳ ವ್ಯವಹಾರ 8 ಲಕ್ಷ ಕೋಟಿ ರೂ.ವರೆಗೆ ಇರಲಿದೆ. ವಿಲೀನದ ನಂತರ, ಏಳು ಬೃಹತ್ ಗಾಗ್ರದ ಬ್ಯಾಂಕುಗಳು, ಐದು ಸಣ್ಣ ಗಾತ್ರದ ಬ್ಯಾಂಕುಗಳು ದೇಶದಲ್ಲಿ ಉಳಿಯಲಿವೆ. 2017 ರಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳ ಸಂಖ್ಯೆ 27 ಆಗಿತ್ತು. ಇದಲ್ಲದೆ ಸರ್ಕಾರ ಬ್ಯಾಂಕ್ ಆಫ್ ಬರೋಡಾ, ದೇನಾ ಬ್ಯಾಂಕ್ ಮತ್ತು ವಿಜಯ ಬ್ಯಾಂಕ್ ಅನ್ನು ವಿಲೀನಗೊಳಿಸಿತ್ತು. ಈ ಮೂರು ಬ್ಯಾಂಕುಗಳ ವಿಲೀನದ ನಂತರ ರೂಪುಗೊಂಡ ಬ್ಯಾಂಕ್ ದೇಶದ ಮೂರನೇ ಅತಿದೊಡ್ಡ ಬ್ಯಾಂಕ್ ಆಗಿ ಮಾರ್ಪಟ್ಟಿದೆ.
2017 ರಲ್ಲಿ ಈ ಬ್ಯಾಂಕ್ ಗಳ ವಿಲೀನ ಪ್ರಕ್ರಿಯೆ ನಡೆದಿತ್ತು
ಏಪ್ರಿಲ್ 2017 ರಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕಾನೆರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಸ್ಟೇಟ್ ಬ್ಯಾಂಕ್ ಆಫ್ ತಿರುವಾಂಕೂರು ಮತ್ತು ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ ಮತ್ತು ಭಾರತೀಯ ಮಹಿಲಾ ಬ್ಯಾಂಕ್ ಗಳು ವಿಲೀನಗೊಂಡಿದ್ದವು.