ಜುಲೈ ತಿಂಗಳಿನಲ್ಲಿ ಹಲವು ದಿನಗಳ ಕಾಲ ಬ್ಯಾಂಕ್ ಗಳು ಬಂದ್ ಇರಲಿವೆ.. ರಜಾ ದಿನಗಳಲ್ಲಿ ಮನೆಯಲ್ಲಿ ಕುಳಿತು ಹಣ ಕೂಡ ಗಳಿಸಬಹುದು
ಜುಲೈ ತಿಂಗಳಲ್ಲಿ ಹಲವಾರು ದಿನಗಳವರೆಗೆ ಬ್ಯಾಂಕ್ ಗಳು ಬಂದ್ ಇರಲಿವೆ. ರಾಷ್ಟ್ರೀಯ ರಜಾದಿನಗಳನ್ನು ಹೊರತುಪಡಿಸಿ, ಇವುಗಳಲ್ಲಿ ಬೇರೆ ದಿನಗಳೂ ಕೂಡ ಶಾಮೀಲಾಗಿವೆ.
ನವದೆಹಲಿ: ಬರುವ ಬುಧವಾರದಿಂದ ಜುಲೈ ತಿಂಗಳು ಆರಂಭವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ಜನರು ತಮ್ಮ ಬ್ಯಾಂಕ್‌ಗೆ ಸಂಬಂಧಿಸಿದ ಮಾಹಿತಿಯನ್ನು ಇಂದಿನಿಂದಲೇ ಪಡೆಯುವುದು ಸಹ ಮುಖ್ಯವಾಗಿದೆ. ಏಕೆಂದರೆ ಬ್ಯಾಂಕ್ ಗೆ ಸಂಬಂಧಿಸಿದ ಅವರ ಯಾವುದೇ ಕೆಲಸಗಳು ಅವರು ಮುಂಚಿತವಾಗಿ ಪ್ಲಾನ್ ಮಾಡಬಹುದು. ಸಾರ್ವತ್ರಿಕ ರಜಾದಿನಗಳನ್ನು ಹೊರತುಪಡಿಸಿ, ಇತರೆ ದಿನಗಳಲ್ಲಿಯೂ ಕೂಡ ಬ್ಯಾಂಕ್ ಗಳಿಗೆ ರಜೆ ಇರುವುದರಿಂದ ನೀವೂ ಕೂಡ ನಿಮ್ಮ ಬ್ಯಾಂಕ್ ಕೆಲಸಗಳನ್ನು ಸಮಯ ಇರುವಂತೆಯೇ ಮುಗಿಸಿಕೊಳ್ಳಿ.
ಈ ದಿನಗಳದಂದು ಬ್ಯಾಂಕ್ ಗಳು ಬಂದ್ ಇರಲಿವೆ
ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳಲ್ಲಿ ಕೆಲವು ರಜಾದಿನಗಳು ಕಡ್ಡಾಯವಾಗಿದೆ. ಎಲ್ಲಾ ಭಾನುವಾರ ಮತ್ತು ತಿಂಗಳ ಎರಡನೇ ಶನಿವಾರದಂದು ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಅದರಂತೆ ಜುಲೈ 5, 11, 12, 19, 25 ಮತ್ತು 26 ರಂದು ಬ್ಯಾಂಕುಗಳಿಗೆ ಶನಿವಾರ ಮತ್ತು ಭಾನುವಾರ ರಜೆ ಇರುತ್ತದೆ. ಇದಲ್ಲದೆ, ಜುಲೈ 30 ಅಥವಾ 31 ರಂದು ಬಕ್ರೀದ್ ಹಬ್ಬದ ಪಯುಕ್ತ ರಜೆ ಇರಲಿದೆ. ಆದ್ದರಿಂದ ಒಟ್ಟಾರೆಯಾಗಿ, ಮುಂದಿನ ತಿಂಗಳು ಸತತ 7 ದಿನಗಳವರೆಗೆ ಬ್ಯಾಂಕುಗಳನ್ನು ಬಂದ್ ಇರಲಿವೆ.
ಆಗಸ್ಟ್ ತಿಂಗಳಿನಲ್ಲಿಯೂ ಕೂಡ ಹಬ್ಬಗಳು ಬರಲಿವೆ
ಅಧಿಕೃತ ಕ್ಯಾಲೆಂಡರ್ ಪ್ರಕಾರ, ಆಗಸ್ಟ್ ನಲ್ಲಿಯೂ ಕೂಡ ಬ್ಯಾಂಕ್ ರಜಾದಿನಗಳಿವೆ. ಇದಲ್ಲದೆ ಆಗಸ್ಟ್ ತಿಂಗಳಲ್ಲಿ ರಕ್ಷಾ ಬಂಧನ್ ಮತ್ತು ಕೃಷ್ಣ ಜನ್ಮಾಷ್ಟಮಿ ಈ ಎರಡು ಹಬ್ಬಗಳ ಪ್ರಯುಕ್ತ ರಜಾದಿನ ಇರಲಿವೆ.
ಏತನ್ಮಧ್ಯೆ ನಿಮಗೆ ಮನೆಯಿಂದಲೇ ನಿಮ್ಮ ಕಚೇರಿ ಕೆಲಸ ಮಾಡುವ ಅವಕಾಶ ಕೂಡ ಇದೆ. ಕೊರೊನಾ ಮಹಾಮಾರಿಯ ಕಾರಣ ಇಂದು ಹೆಚ್ಚಿನ ಸಂಖ್ಯೆಯ ಜನರು ತಮ್ಮ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ನಾವು ನಿಮಗೆ ಮನೆಯಿಂದಲೇ ಕುಳಿತು ಹಣ ಗಳಿಕೆ ಮಾಡುವ ಅವಕಾಶವೊಂದರ ಕುರಿತು ಮಾಹಿತಿ ಕೂಡ ನೀಡಲಿದ್ದೇವೆ. ನೀವು ಮನೆಯಲ್ಲಿಯೇ ಕುಳಿತು ಕೇವಲ ಹೆಸರನ್ನು ಸೂಚಿಸಿ, ರೂ.10,000 ವರೆಗೆ ಗಳಿಕೆ ಮಾಡಬಹುದು
ಈ ಸುಲಭ ಕೆಲಸ ನೀವೂ ಮಾಡಬಹುದು
ಭಾರತೀಯ ವಿಮಾ ನಿಯಂತ್ರಕ ಪ್ರಾಧಿಕಾರ ಅಂದರೆ IRDAI ಮೂರು ನೂತನ ವಿಮಾ ಪಾಲಸಿಗಳಿಗೆ ಹೆಸರು ಸೂಚಿಸಲು ಜನರಿಂದ ಸಲಹೆ ಕೇಳಿದೆ. ಒಂದು ವೇಳೆ ನೀವು ನೀಡಿರುವ ಸಲಹೆ ನಿಯಂತ್ರಕಕ್ಕೆ ಮೆಚ್ಚುಗೆಯಾದರೆ ನಿಮಗೆ ಒಂದು ಪ್ರಶಸ್ತಿ ಪತ್ರದ ಜೊತೆಗೆ ರೂ. 10,000 ಬಹುಮಾನ ಕೂಡ ಸಿಗಲಿದೆ.