ಚೆನ್ನೈ:ಆಗಸ್ಟ್ 1 ರಿಂದ ಬ್ಯಾಂಕ್ ಆಫ್ ಮಹಾರಾಷ್ಟ್ರ, ಆಕ್ಸಿಸ್ ಬ್ಯಾಂಕ್, ಕೊಟಕ್ ಮಹಿಂದ್ರಾ ಬ್ಯಾಂಕ್ ಮತ್ತು ಆರ್.ಬಿ.ಎಲ್ ಬ್ಯಾಂಕ್ ಗಳು ತನ್ನ ನಿಯಮಗಳಲ್ಲಿ ಬದಲಾವಣೆ ತರಲಿದ್ದು, ಇವು ಹಿಮ್ಮ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ದಿನಾಂಕದಿಂದ ಇವುಗಳಲ್ಲಿನ ಕೆಲ ಬ್ಯಾಂಕ್ ಗಳು ನಗದು ಹಣ ಹಿಂಪಡೆಯುವಿಕೆ ಹಾಗೂ ಠೇವಣಿ ಮೇಲೆ ಶುಲ್ಕ ವಿಧಿಸಲು ಯೋಜನೆ ರೂಪಿಸಿದ್ದರೆ, ಉಳಿದ ಬ್ಯಾಂಕ್ ಗಳು ಖಾತೆಗಳಲ್ಲಿನ ಮಿನಿಮಮ್ ಬ್ಯಾಲೆನ್ಸ್ ಮಿತಿಯಲ್ಲಿ ಹೆಚ್ಚಳ ಮಾಡುತ್ತಿವೆ. ಇದು ನೀವು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾಯಬೇಕಾಗಿರುವ ಕನಿಷ್ಠ ಮೊತ್ತವಾಗಿದೆ. ಈ ಮೊತ್ತಕ್ಕಿಂತ ಒಂದು ವೇಳೆ ನಿಮ್ಮ ಖಾತೆಯಲ್ಲಿ ಕಡಿಮೆ ಮೊತ್ತ ಕಂಡುಬಂದರೆ, ನಿಮಗೆ ದಂಡ ವಿಧಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಮೆಟ್ರೋ ಹಾಗೂ ನಗರ ಪ್ರದೇಶಗಳಲ್ಲಿ ವಾಸಿಸುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಉಳಿತಾಯ ಖಾತೆ ಹೊಂದಿದವರು ತಮ್ಮ ಖಾತೆಯಲ್ಲಿ ಕನಿಷ್ಠ ರೂ.2000 ಕನಿಷ್ಠ ಬ್ಯಾಲೆನ್ಸ್ ಹೊಂದುವುದು ಕಡ್ಡಾಯವಾಗಲಿದೆ. ಇದಕ್ಕೂ ಮೊದಲು ಈ ಮೊತ್ತ ರೂ.1500 ರಷ್ಟಿತ್ತು. ಖಾತೆಯಲ್ಲಿ ಇದಕ್ಕಿಂತ ಕಡಿಮೆ ಹಣ ಹೊಂದಿದ ಮೆಟ್ರೋ ಹಾಗೂ ನಗರ ಪ್ರದೇಶದ ಖಾತೆದಾರರಿಗೆ ರೂ. 75 ಪೆನಾಲ್ಟಿ ಬೀಳಲಿದೆ.


ಇನ್ನೊಂದೆಡೆ ಬ್ಯಾಂಕ್ ನಲ್ಲಿ ಚಾಲ್ತಿ ಖಾತೆ ಹೊಂದಿದವರು ಮಾಸಿಕ ರೂ.5000 ಕನಿಷ್ಠ ಮೊತ್ತ ಹೊಂದುವುದು ಅನಿವಾರ್ಯವಾಗಲಿದೆ. ಮೊದಲು ಮೂರು ತಿಂಗಳ ಆಧಾರದ ಮೇಲೆ ಈ ಮೊತ್ತ ನಿಗದಿಯಾಗುತ್ತಿತ್ತು. 


ತಿಂಗಳಲ್ಲಿ ಮೂರು ಉಚಿತ ಹಾಗೂ ಬೇರೆ ಬ್ಯಾಂಕ್ ಗಳಲ್ಲಿ ಡಿಪಾಸಿಟ್ ಅಥವಾ ವಿಥ್ ಡ್ರಾ ಮಾಡಿದಾಗ ರೂ.100 ಕ್ಯಾಶ್ ಹ್ಯಾಂಡ್ಲಿಂಗ್ ಶುಲ್ಕ ಪಾವತಿಸಬೇಕಾಗಲಿದೆ. ಲಾಕರ್ ಸೌಕರ್ಯಕ್ಕೆ ಒಂದೆಡೆ ಡಿಪಾಸಿಟ್ ಕಡಿಮೆ ಮಾಡಲಾಗಿದ್ದರೆ ಲಾಕರ್ ರೆಂಟ್ ಏರಿಯರ್ ಗಾಗಿ ಪೆನಾಲ್ಟಿ ಹೆಚ್ಚಿಸಲಾಗಿದೆ. 


ಈ ಕುರಿತು ಹೇಳಿಕೆ ನೀಡಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಎಂಡಿ ಹಾಗೂ ಸಿಇಓ ಎ.ಎಸ್ ರಾಜೀವ್, ಕೊವಿಡ್ 19 ಪ್ರಕೋಪದ ಬಳಿಕ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಭಾರಿ ಬದಲಾವಣೆ ಬಂದಿದ್ದು, ಎಲ್ಲ ಬ್ಯಾಂಕ್ ಗಳು ಡಿಜಿಟಲ್ ಆಗುವತ್ತ ಹೆಜ್ಜೆ ಇಟ್ಟಿವೆ. ಇದರಿಂದ ನಾವು ಗ್ರಾಹಕರಿಗೆ ನೀಡಲಾಗಿರುವ ವಿಕಲ್ಪವನ್ನು ಅಳವಡಿಸಿಕ್ಕೊಳ್ಳಲು ಪ್ರೋತ್ಸಾಹಿಸುತ್ತಿದ್ದೇವೆ ಎಂದಿದ್ದಾರೆ.


ಇನ್ನೊಂದೆಡೆ ಆಕ್ಸಿಸ್ ಬ್ಯಾಂಕ್ ಗ್ರಾಹಕರು ಇನ್ಮುಂದೆ ಪ್ರತಿ ಇಸಿಎಸ್ ವ್ಯವಹಾರಕ್ಕಾಗಿ ರೂ.25 ಶುಲ್ಕ ನೀಡಬೇಕಾಗಲಿದೆ. ಜೊತೆಗೆ ಇತರ ವ್ಯವಹಾರಕ್ಕಾಗಿ ರೂ.100 ಕ್ಯಾಶ್ ಹ್ಯಾಂಡ್ಲಿಂಗ ಚಾರ್ಚ್ ಅನ್ನು ಕೂಡ ಈ ಪ್ರೈವೇಟ್ ಬ್ಯಾಂಕ್ ವಿಧಿಸಲಿದೆ.


ಕೊಟಕ್ ಮಹಿಂದ್ರಾ ಬ್ಯಾಂಕ್ ನ ಉಳಿತಾಯ ಹಾಗೂ ಕಾರ್ಪೋರೆಟ್ ಸ್ಯಾಲರಿ ಖಾತೆದಾರರು ಪ್ರತಿ ತಿಂಗಳು 5 ಉಚಿತ ವ್ಯವಹಾರ ಗಳ ಬಳಿಕ ರೂ.20 ಡೆಬಿಟ್ ಕಾರ್ಡ್-ಏಟಿಎಂ ಶುಲ್ಕ ನೀಡಬೇಕಾಗಲಿದೆ. ಇದೆ ರೀತಿ ಪ್ರತಿಯೊಂದು ಬ್ಯಾಂಕೇತರ ವ್ಯವಹಾರಕ್ಕಾಗೋ ರೂ.8.5 ನೀಡಬೇಕಾಗಲಿದೆ. ಜೊತೆಗೆ ಫೇಲ್ಡ್ ಟ್ರಾನ್ಸಾಕ್ಷನ್ ಗಾಗಿ ರೂ.25 ನೀಡಬೇಕಾಗಲಿದೆ.


ಮಿನಿಮಮ್ ಬ್ಯಾಲೆನ್ಸ್ ಮೈನ್ಟೈನ್ ಮಾಡದ ಗ್ರಾಹಕರಿಗೆ ಕೊಟಕ್ ಬ್ಯಾಂಕ್ ಪೆನಾಲ್ಟಿ ಕೂಡ ವಿಧಿಸಲಿದ್ದು, ವಿಭಿನ್ನ ಖಾತೆಗಳಿಗೆ ಈ ಪೆನಾಲ್ಟಿ ವಿಭಿನ್ನವಾಗಿರಲಿದೆ.