ನವದೆಹಲಿ: ಮುಷ್ಕರ ಮತ್ತು ರಜೆ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 26 ರಿಂದ 29ರವರೆಗೆ ನಾಲ್ಕು ದಿನಕಳ ಕಾಲ ದೇಶಾದ್ಯಂತ ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. 


COMMERCIAL BREAK
SCROLL TO CONTINUE READING

10 ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನ ವಿರೋಧಿಸಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಅಧಿಕಾರಿಗಳ ಕಾಂಗ್ರೆಸ್(ಐಎನ್‌ಬಿಒಸಿ), ಬ್ಯಾಂಕ್ ಅಧಿಕಾರಿಗಳ ರಾಷ್ಟ್ರೀಯ ಸಂಸ್ಥೆ (ಎನ್‌ಒಬಿಒ) ಸೆಪ್ಟೆಂಬರ್ 26 ಮತ್ತು 27ರಂದು ಮುಷ್ಕರ ನಡೆಸಲು ನಿರ್ಧರಿಸಿವೆ. ಈ ಹಿನ್ನೆಲೆಯಲ್ಲಿ ಆ ದಿನಗಳಂದು ಬ್ಯಾಂಕುಗಳಿಗೆ ರಜೆ ಇರಲಿದೆ. 


ಸೆಪ್ಟೆಂಬರ್ 28 ರಂದು ನಾಲ್ಕನೇ ಶನಿವಾರ ಮತ್ತು ಸೆಪ್ಟೆಂಬರ್ 29ರಂದು ಭಾನುವಾರ ಆಗಿರುವುದರಿಂದ ಎಂದಿನಂತೆ ಆ ದಿನಗಳಂದು ಬ್ಯಾಂಕುಗಳಿಗೆ ರಜೆ ಇರಲಿದೆ. ಹೀಗಾಗಿ ನಾಲ್ಕು ದಿನಗಳು ಸರಣಿಯಾಗಿ ಬ್ಯಾಂಕುಗಳು ಮುಚ್ಚಲ್ಪಡುವುದರಿಂದ ಸಾರ್ವಜನಿಕರು ತಮ್ಮ ಯಾವುದೇ ಬ್ಯಾಂಕ್ ವ್ಯವಹಾರಗಳನ್ನು ಈ ದಿನಾಂಕಗಳನ್ನು ಗಮನದಲ್ಲಿಟ್ಟುಕೊಂಡು ನಿಗದಿಪಡಿಸಿಕೊಳ್ಳುವುದು ಸೂಕ್ತ.