ನವದೆಹಲಿ: ನೀವು ಬ್ಯಾಂಕ್‌ಗೆ ಸಂಬಂಧಿಸಿದ ಯಾವುದೇ ಪ್ರಮುಖ ಕೆಲಸವ ಮಾಡಬೇಕಿದ್ದರೆ, ಅದನ್ನು ಎರಡು ದಿನಗಳಲ್ಲಿ ಅಂದರೆ ಸೆಪ್ಟೆಂಬರ್ 24 ಮತ್ತು 25 (ಮಂಗಳವಾರ ಮತ್ತು ಬುಧವಾರ) ರೊಳಗೆ ಮುಗಿಸಿಕೊಳ್ಳಿ. ಇದರ ನಂತರ, ಸೆಪ್ಟೆಂಬರ್ 26 ರಿಂದ ನಾಲ್ಕು ದಿನಗಳವರೆಗೆ ದೇಶಾದ್ಯಂತದ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ.


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಬ್ಯಾಂಕ್ ನೌಕರರ ಸಂಸ್ಥೆಯಾದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟವು ಸರ್ಕಾರಿ ಬ್ಯಾಂಕುಗಳ ವಿಲೀನವನ್ನು ವಿರೋಧಿಸಿ ಎರಡು ದಿನಗಳ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರವನ್ನು ಘೋಷಿಸಿವೆ. ರಾಷ್ಟ್ರವ್ಯಾಪಿ ಮುಷ್ಕರದಿಂದಾಗಿ, ಎಲ್ಲಾ ರೀತಿಯ ಗ್ರಾಹಕ ಸೇವೆಗಳನ್ನು ಸೆಪ್ಟೆಂಬರ್ 26 ಮತ್ತು 27 ರಂದು ಬ್ಯಾಂಕುಗಳಲ್ಲಿ ಮುಚ್ಚಲಾಗುವುದು. 


ಸೆಪ್ಟೆಂಬರ್ 30 ರಂದು ಬ್ಯಾಂಕುಗಳ ಮಧ್ಯ ವರ್ಷದ ಮುಕ್ತಾಯ:
ಇದರ ನಂತರ, ಸೆಪ್ಟೆಂಬರ್ 28 ರಂದು ತಿಂಗಳ ಕೊನೆಯ ಶನಿವಾರ ಮತ್ತು 29 ರಂದು ಭಾನುವಾರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಸೆಪ್ಟೆಂಬರ್ 30 ರಂದು ಮಧ್ಯ ವರ್ಷದ ಮುಕ್ತಾಯವಾದ್ದರಿಂದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ, ಆದರೆ ಈ ಅವಧಿಯಲ್ಲಿ ಗ್ರಾಹಕ ಸೇವೆಗಳನ್ನು ಪುನಃಸ್ಥಾಪಿಸಲಾಗುತ್ತದೆ. 4 ಬ್ಯಾಂಕ್ ಯೂನಿಯನ್‌ಗಳು (ಬ್ಯಾಂಕ್ ಸ್ಟ್ರೈಕ್) ಮುಷ್ಕರಕ್ಕೆ ಸೇರ್ಪಡೆಗೊಳ್ಳುವುದಾಗಿ ಘೋಷಿಸಿವೆ. ಬ್ಯಾಂಕುಗಳ ವಿಲೀನದ ವಿರುದ್ಧ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕುಗಳ ಸಂಘಕ್ಕೆ (ಐಬಿಎ) ಒಕ್ಕೂಟಗಳಿಂದ ನೀಡಲಾಗಿರುವ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಆಗಸ್ಟ್ 30 ರಂದು ಸರ್ಕಾರವು 10 ಸಾರ್ವಜನಿಕ ವಲಯದ ಬ್ಯಾಂಕುಗಳನ್ನು ವಿಲೀನಗೊಳಿಸಿ 4 ಬ್ಯಾಂಕುಗಳನ್ನು ರಚಿಸುವುದಾಗಿ ಘೋಷಿಸಿತ್ತು.


ಸರ್ಕಾರದ ಈ ಕ್ರಮದಿಂದಾಗಿ, ಬ್ಯಾಂಕ್ ಒಕ್ಕೂಟಗಳು ತಮ್ಮ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿವೆ. ಆದರೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪರಿಸ್ಥಿತಿಯನ್ನು ಸ್ಪಷ್ಟಪಡಿಸಿದ್ದು, ಬ್ಯಾಂಕ್‌ಗಳ ವಿಲೀನದಿಂದಾಗಿ ಯಾರಿಗೂ ಕೆಲಸ ಹೋಗುವುದಿಲ್ಲ ಎಂದು ಹೇಳಿದ್ದರು. ಆದರೆ ಅವರ ಮಾತಿಗೆ ಒಪ್ಪದ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ (ಎಐಬಿಒಸಿ), ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಒಎ), ಇಂಡಿಯನ್ ನ್ಯಾಷನಲ್ ಬ್ಯಾಂಕ್ ಆಫೀಸರ್ಸ್ ಕಾಂಗ್ರೆಸ್ (ಐಎನ್‌ಬಿಒಸಿ) ಮತ್ತು ನ್ಯಾಷನಲ್ ಆರ್ಗನೈಸೇಶನ್ ಆಫ್ ಬ್ಯಾಂಕ್ ಅಧಿಕಾರಿಗಳ (ನೊಬೊ) ಒಟ್ಟಾಗಿ ಮುಷ್ಕರಕ್ಕೆ ಸೂಚನೆ ನೀಡಿವೆ.


ಜಾಗರೂಕತೆಯಿಂದ ಬಾಹ್ಯ ಏಜೆನ್ಸಿಗಳ ಹಸ್ತಕ್ಷೇಪವನ್ನು ನಿಲ್ಲಿಸಲು, ನಿವೃತ್ತ ನೌಕರರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು, ಸಮರ್ಪಕ ನೇಮಕಾತಿಗಳನ್ನು ಮಾಡಲು, ಎನ್‌ಪಿಎಸ್ ನಿರ್ಮೂಲನೆ ಮಾಡಲು ಮತ್ತು ಗ್ರಾಹಕರಿಗೆ ಸೇವಾ ತೆರಿಗೆಯನ್ನು ಕಡಿಮೆ ಮಾಡಲು ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸದ ಹೆಸರಿನಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ಒಕ್ಕೂಟಗಳು ಒತ್ತಾಯಿಸಿವೆ. 


ಇದು ಸರ್ಕಾರದ ಯೋಜನೆ:
ಆಗಸ್ಟ್ 30 ರಂದು ಸರ್ಕಾರದ ಪರವಾಗಿ 10 ರಾಷ್ಟ್ರೀಕೃತ ಬ್ಯಾಂಕುಗಳನ್ನು ವಿಲೀನಗೊಳಿಸಿ 4 ದೊಡ್ಡ ಬ್ಯಾಂಕುಗಳನ್ನು ರಚಿಸುವುದಾಗಿ ಘೋಷಿಸಲಾಯಿತು. ಇದರ ಅಡಿಯಲ್ಲಿ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ಮತ್ತು ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (ಒಬಿಸಿ) ಅನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ನೊಂದಿಗೆ ವಿಲೀನಗೊಳಿಸಲಾಗುವುದು. ಇದರಿಂದ ರೂಪುಗೊಂಡ ಬ್ಯಾಂಕ್ ಸಾರ್ವಜನಿಕ ವಲಯದ ಎರಡನೇ ಅತಿದೊಡ್ಡ ಬ್ಯಾಂಕ್ ಆಗಲಿದೆ ಎನ್ನಲಾಗಿದೆ.