ನವದೆಹಲಿ: ನಿಮಗೂ ಬ್ಯಾಂಕಿನಲ್ಲಿ ಏನಾದರೂ ಕೆಲಸವಿದೆಯೇ? ಹಾಗಿದ್ದರೆ ತಡಮಾಡದೆ ಇಂದೇ ನಿಮ್ಮ ಕೆಲಸವನ್ನು ಪೂರ್ಣಗೊಳಿಸಿ. ಇಲ್ಲದಿದ್ದರೆ ಇನ್ನೂ ಮೂರು ದಿನಗಳವರೆಗೆ ನಿಮಗೆ ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ಮಾಡಲು ಸಾಧ್ಯವಾಗುವುದಿಲ್ಲ. ವಾಸ್ತವವಾಗಿ, ಮುಂದಿನ 3 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಆದ್ದರಿಂದ, ನೀವು ಹಣವನ್ನು ಹಿಂಪಡೆಯಲು ಅಥವಾ ಬ್ಯಾಂಕಿಂಗ್ ಸೇವೆಗಳಿಗೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದು ಇದ್ದರೆ ಅದನ್ನು ಇಂದೇ ಮಾಡಿ ಮುಗಿಸುವುದು ಉತ್ತಮ.


COMMERCIAL BREAK
SCROLL TO CONTINUE READING

ಎರಡು ದಿನ ಬ್ಯಾಂಕ್ ಮುಷ್ಕರ:
ಶುಕ್ರವಾರ ಮತ್ತು ಶನಿವಾರ (ಜನವರಿ 31 ಮತ್ತು ಫೆಬ್ರವರಿ 1) ಬ್ಯಾಂಕುಗಳ ಮುಷ್ಕರವಿದೆ. ಇದರಿಂದಾಗಿ ಬ್ಯಾಂಕುಗಳ ಕಾರ್ಯವೈಖರಿ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಅದೇ ಸಮಯದಲ್ಲಿ, ಫೆಬ್ರವರಿ 2 ರಂದು ಭಾನುವಾರ ಆಗಿರುವುದರಿಂದ ಅಂದೂ ಕೂಡ ಬ್ಯಾಂಕ್ ರಜೆ ಇರುತ್ತದೆ.  ಅಂತಹ ಪರಿಸ್ಥಿತಿಯಲ್ಲಿ, ಸತತ 3 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಮುಷ್ಕರ ಮತ್ತು ಒಂದು ದಿನದ ವಾರದ ರಜಾದಿನದಿಂದಾಗಿ ಎಟಿಎಂ ಯಂತ್ರಗಳಲ್ಲಿ ಹಣದ ಕೊರತೆಯಿರುವ ಸಾಧ್ಯತೆಯೂ ಇದೆ.


ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿದಂತೆ ಅನೇಕ ಸಾರ್ವಜನಿಕ ಬ್ಯಾಂಕುಗಳು ಈಗಾಗಲೇ ಮುಷ್ಕರದ ಬಗ್ಗೆ ಗ್ರಾಹಕರನ್ನು ಎಚ್ಚರಿಸಿದೆ. ಆದರೆ, ಈ ಮುಷ್ಕರ ಖಾಸಗಿ ಬ್ಯಾಂಕುಗಳ ಮೇಲೆ ಪರಿಣಾಮ ಬೀರುವುದಿಲ್ಲ. ಆನ್‌ಲೈನ್ ಬ್ಯಾಂಕಿಂಗ್ ಸಹ ಮುಂದುವರಿಯುತ್ತದೆ.


ಬ್ಯಾಂಕ್ ನೌಕರರ ಸಂಘಟನೆಯ ಮುಖ್ಯ ಬೇಡಿಕೆ ವೇತನವನ್ನು ಹೆಚ್ಚಿಸುವುದು. ಏಕೆಂದರೆ ಬ್ಯಾಂಕ್ ನೌಕರರ ವೇತನವನ್ನು ಪರಿಷ್ಕರಿಸುವ ವಿಷಯವು ನವೆಂಬರ್ 2017 ರಿಂದ ಬಾಕಿ ಉಳಿದಿದೆ. ಇದಲ್ಲದೆ, ಕೆಲಸದ ಸಮಯ, ಕುಟುಂಬ ಪಿಂಚಣಿ ಇತ್ಯಾದಿಗಳಿಗೆ ಸಂಬಂಧಿಸಿದ ಬೇಡಿಕೆಗಳೂ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಈ ಮುಷ್ಕರ ನಡೆಸುತ್ತಿರುವುದಾಗಿ ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷ ಸುನಿಲ್ ಕುಮಾರ್ ಮಾಹಿತಿ ನೀಡಿದ್ದಾರೆ.