Bank Holiday in July 2021 : ಈ ಪ್ರದೇಶಗಳಲ್ಲಿ ಮುಂದಿನ ನಾಲ್ಕು ದಿನ ಬ್ಯಾಂಕ್ ರಜೆ , ಲಿಸ್ಟ್ ನಲ್ಲಿದೆಯಾ ನಿಮ್ಮೂರು ?
Bank Holiday in July 2021 :ಒಟ್ಟಾರೆಯಾಗಿ, ಜುಲೈನಲ್ಲಿ 15 ದಿನಗಳವರೆಗೆ ಬ್ಯಾಂಕ್ ರಜಾದಿನಗಳಿವೆ. ಮುಂದಿನ 4 ದಿನಗಳವರೆಗೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿವೆ.
ನವದೆಹಲಿ : Bank Holiday in July 2021 : ಬ್ಯಾಂಕ್‌ಗೆ ಸಂಬಂಧಿಸಿದ ಕೆಲಸಗಳು ಬಾಕಿ ಇದ್ದು, ಆ ಕೆಲಸಕ್ಕಾಗಿ ಬ್ಯಾಂಕ್ ಗೆ ಹೋಗುವ ಬಗ್ಗೆ ಯೋಚಿಸುತ್ತಿದ್ದರೆ, ಮೊದಲು ಕ್ಯಾಲೆಂಡರ್ ಅನ್ನೊಮ್ಮೆ ಚೆಕ್ ಮಾಡಿಕೊಳ್ಳಿ. ಮುಂದಿನ 4 ದಿನಗಳವರೆಗೆ ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳಿಗೆ ರಜೆ ಇರಲಿವೆ. ಆದ್ದರಿಂದ, ಮನೆಯಿಂದ ಹೊರಡುವ ಮೊದಲು, ಬ್ಯಾಂಕ್ ರಜೆ ಇದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳಿ.
ಮುಂದಿನ 5 ದಿನಗಳವರೆಗೆ ಬ್ಯಾಂಕುಗಳಿಗೆ ರಜೆ :
ಒಟ್ಟಾರೆಯಾಗಿ, ಜುಲೈನಲ್ಲಿ 15 ದಿನಗಳವರೆಗೆ ಬ್ಯಾಂಕ್ ರಜಾದಿನಗಳಿವೆ (Bank holidays). ಆರ್‌ಬಿಐನ (RBI) ರಜಾದಿನದ ಕ್ಯಾಲೆಂಡರ್ ಪ್ರಕಾರ, . ಜುಲೈ 17 ರಂದು ಶಿಲ್ಲಾಂಗ್‌ನ ಅಗರ್ತಲಾದಲ್ಲಿ ಯು ತಿರೋತ್ ಸಿಂಗ್ ದಿನ ಮತ್ತು ಖಾರ್ಚಿ ಪೂಜೆ ಅಂಗವಾಗಿ ರಜೆ ಇರಲಿದೆ. ಜುಲೈ 18 ಭಾನುವಾರದಂದು ದೇಶಾದ್ಯಂತ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಗ್ಯಾಂಗ್ ಟಾಕ್ ನಲ್ಲಿ ಗುರು ರಿಂಪೋಚೆ ತುಂಗ್ಕರ್ ತ್ಸೆಚು ಹಬ್ಬದ ಹಿನ್ನೆಲೆಯಲ್ಲಿ ಜುಲೈ 19 ಬ್ಯಾಂಕ್ ರಜೆ ಇರಲಿದೆ.
ಇದನ್ನೂ ಓದಿ : ಸಾಂಬಾ ಮತ್ತು ಜಮ್ಮುವಿನಲ್ಲಿ ನಾಲ್ಕು ಡ್ರೋನ್ ಪತ್ತೆ, ಹೈಅಲರ್ಟ್ ಜಾರಿ
ಇನ್ನು, 2021 ರ ಜುಲೈ 20 ರಂದು ಬಕ್ರಿದ್ ಅಂಗವಾಗಿ, ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್ ವಹಿವಾಟು ನಡೆಯುವುದಿಲ್ಲ. ಐಜ್ವಾಲ್, ಭುವನೇಶ್ವರ, ಗ್ಯಾಂಗ್ಟಾಕ್, ಕೊಚ್ಚಿ ಮತ್ತು ತಿರುವನಂತಪುರಂ ಹೊರತುಪಡಿಸಿ ಜುಲೈ 21 ರಂದು ದೇಶಾದ್ಯಂತ ಬ್ಯಾಂಕುಗಳು (Bank) ಈದ್ ಹಿನ್ನೆಲೆಯಲ್ಲಿ ಮುಚ್ಚಲ್ಪಡುತ್ತವೆ. ಆದರೂ, ಈ ಬ್ಯಾಂಕ್ ರಜಾದಿನಗಳು ಎಲ್ಲಾ ರಾಜ್ಯಗಳಿಗೆ ಏಕಕಾಲದಲ್ಲಿ ಅನ್ವಯವಾಗುವುದಿಲ್ಲ ಎನ್ನುವುದು ಗೊತ್ತಿರಲಿ. ಆರ್‌ಬಿಐ (RBI) ನಿರ್ದೇಶನದ ಪ್ರಕಾರ ದೇಶಾದ್ಯಂತ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಬ್ಯಾಂಕುಗಳು ಮೇಲೆ ತಿಳಿಸಿದ ದಿನಾಂಕಗಳಲ್ಲಿ ಮುಚ್ಚಿರುತ್ತವೆ.
ರಜಾದಿನಗಳ ಸಂಪೂರ್ಣ ಪಟ್ಟಿ ಇಲ್ಲಿದೆ :
- 17 ಜುಲೈ 2021: ಖಾರ್ಚಿ ಪೂಜಾ - (ಅಗರ್ತಲಾ, ಶಿಲ್ಲಾಂಗ್)
- 18 ಜುಲೈ 2021: ಭಾನುವಾರ
- 19 ಜುಲೈ 2021: ಗುರು ರಿಂಪೋಚಿಯ ತುಂಗ್ಕರ್ ತ್ಸೆಚು - (ಗ್ಯಾಂಗ್ಟಾಕ್)
- 20 ಜುಲೈ 2021: ಮಂಗಳವಾರ - ಈದ್ (ದೇಶಾದ್ಯಂತ)
- 21 ಜುಲೈ 2021: ಬುಧವಾರ - ಬಕ್ರಿಡ್ (ದೇಶಾದ್ಯಂತ)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ