ನವದೆಹಲಿ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಪ್ರಧಾನಿ ನರೇಂದ್ರ ಮೋದಿಯವರನ್ನು ಶುಕ್ರವಾರ ಭೇಟಿ ಮಾಡಿದರು. ಅವರು ಮತ್ತು ಅವರ ಪತ್ನಿ ಮಾಜಿ ಪ್ರಥಮ ಮಹಿಳೆ ಮಿಚೆಲ್ ಒಬಾಮ, ಒಬಾಮಾ ಫೌಂಡೇಶನ್ ಆಯೋಜಿಸಿದ್ದ ಟೌನ್ ಹಾಲ್ ಸಭೆಯಲ್ಲಿ ಭಾಗವಹಿಸಲು ಅವರು ಭಾರತಕ್ಕೆ ಬಂದಿದ್ದರು.


COMMERCIAL BREAK
SCROLL TO CONTINUE READING

ಒಬಾಮ ಮತ್ತು ಪ್ರಧಾನಿ ಮೋದಿ ಅವರು ಈ ಹಿಂದೆ ಯುಎಸ್ ಮತ್ತು ಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ ಭೇಟಿಯಾಗಿ ನಿಕಟ ಸಂಬಂಧ ಹೊಂದಿದ್ದಾರೆ. ಈ ಇಬ್ಬರೂ ವಿಶ್ವ ನಾಯಕರು ಸೆಪ್ಟೆಂಬರ್ 2014 ಮತ್ತು ಸೆಪ್ಟೆಂಬರ್ 2016 ರ ನಡುವೆ ಎಂಟು ಬಾರಿ ಭೇಟಿಯಾಗಿದ್ದರು. ಅಲ್ಲದೆ ಒಬಾಮ ಅವರು ಭಾರತದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮೊದಲ ಅಮೇರಿಕಾ ಅಧ್ಯಕ್ಷರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 


ಈ ಬಾರಿಯ ಭಾರತ ಭೇಟಿಯಲ್ಲಿ, ಒಬಾಮಾ ಅವರು ಶುಕ್ರವಾರ ಮಧ್ಯಾಹ್ನ ಟೌನ್ ಹಾಲ್ ಸಭೆಯಲ್ಲಿ ಭಾಗವಹಿಸಿ 280ಕ್ಕೂ ಹೆಚ್ಚು ಯುವ ನಾಯಕರೊಂದಿಗೆ ಸಂವಾದ ನಡೆಸಿ, ಅಲ್ಲಿನ ಸಮುದಾಯದವನ್ನು ಸುಧಾರಿಸುವಲ್ಲಿ ಮತ್ತು ಭವಿಷ್ಯದಲ್ಲಿ ಒಬಾಮಾ ಫೌಂಡೇಷನ್ ಹೇಗೆ ಸಹಾಯ ಮಾಡಬಹುದೆಂಬುದರ ಬಗ್ಗೆ ಚರ್ಚಿಸಿದರು. 


ಈ ವರ್ಷದ ಆರಂಭದಲ್ಲಿ ಜರ್ಮನಿ, ಇಂಡೋನೇಷ್ಯಾ ಮತ್ತು ಬ್ರೆಜಿಲ್ನಲ್ಲಿ ಯುವಜನರೊಂದಿಗೆ ಇಂತಹ ಅನೇಕ ಸಭೆಗಳನ್ನು ಒಬಾಮಾ ಆಯೋಜಿಸಿದ್ದರು.