ನವದೆಹಲಿ: ವಾಟ್ಸ್‌ ಆ್ಯಪ್‌ ಹ್ಯಾಕ್‌(Whatsapp Hacking) ಮಾಡಿ ಫೋರ್ಜರಿ ಮಾಡುತ್ತಿದ್ದ ನೈಜೀರಿಯನ್‌ ಯುವಕನನ್ನು ದೆಹಲಿಯ ತಿಲಕ್‌ ಮಾರ್ಗ್‌ ಠಾಣೆ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಒಕ್ವುದಿರಿ ಪಾಸ್ಚಲ್(Okwudiri Paschal) ಎಂದು ಗುರುತಿಸಲಾಗಿದೆ. ಈತ ಅಪ್‌ಗ್ರೇಡ್ ಮಾಡುವ ಹೆಸರಿನಲ್ಲಿ ವಾಟ್ಸ್‌ ಆ್ಯಪ್ ಹ್ಯಾಕ್ ಮಾಡುವ ಮೂಲಕ ಜನರನ್ನು ವಂಚಿಸುತ್ತಿದ್ದ. ಸ್ಥಳದಲ್ಲೇ 7 ಮೊಬೈಲ್‌ಗಳು, 4 ಸಿಮ್‌ಗಳು, 8 ಎಟಿಎಂ ಕಾರ್ಡ್‌ಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಆರೋಪಿ ಮೇಲೆ ಡಿಸಿಪಿ ಕಣ್ಣಿಟ್ಟಿದ್ದರು


ನವದೆಹಲಿ ಜಿಲ್ಲೆಯ ಡಿಸಿಪಿ ದೀಪಕ್ ಯಾದವ್(New Delhi Dcp Deepak Yadav) ಪ್ರಕಾರ, ವಂಚನೆ ಕುರಿತು ರಂಗಲಾಲ್ ಜಮುದಾ ಎಂಬುವರು ಅ.2 ರಂದು ದೂರು ನೀಡಿದ್ದರು. ತನಗೆ ವಾಟ್ಸ್‌ ಆ್ಯಪ್ ಅಪ್‌ಗ್ರೇಡ್ ಆಗುತ್ತಿದೆ ಎಂಬ ಸಂದೇಶ ಬಂದಿತ್ತು. ಇದಕ್ಕಾಗಿ 6 ಸಂಖ್ಯೆಯ ಒಟಿಪಿ ನೀಡಲಾಗಿತ್ತು. ಅವರು ತಮ್ಮ ವಾಟ್ಸ್‌ ಆ್ಯಪ್‌ನಲ್ಲಿ ಒಟಿಪಿ ನಮೂದಿಸುತ್ತಿದ್ದಂತೆಯೇ ವಾಟ್ಸ್‌ ಆ್ಯಪ್ ಹ್ಯಾಕ್(WhatsApp Fraud) ಆಗಿದೆ.


[[{"fid":"222728","view_mode":"default","fields":{"format":"default","field_file_image_alt_text[und][0][value]":"WhatsApp.jpg","field_file_image_title_text[und][0][value]":"WhatsApp.jpg"},"type":"media","field_deltas":{"1":{"format":"default","field_file_image_alt_text[und][0][value]":"WhatsApp.jpg","field_file_image_title_text[und][0][value]":"WhatsApp.jpg"}},"link_text":false,"attributes":{"alt":"WhatsApp.jpg","title":"WhatsApp.jpg","class":"media-element file-default","data-delta":"1"}}]]


ಇದನ್ನೂ ಓದಿ: 750 ಮೃತ ರೈತರ ಕುಟುಂಬಗಳಿಗೆ 3 ಲಕ್ಷ ರೂ.ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಕೆಸಿಆರ್


ಸಂಬಂಧಿಕರಿಗೆ ಕರೆಗಳು


ಆ ಬಳಿಕ ಪರಿಚಿತರು, ಸಂಬಂಧಿಕರಿಗೆ ವಾಟ್ಸ್‌ ಆ್ಯಪ್‌ ನಂಬರ್‌ನಿಂದ ಮೆಸೇಜ್‌ ಮಾಡಿ ಹಣ ಕೇಳುತ್ತಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ಬಾಣಸವಾಡಿ(Banasavadi)ಯ ಬ್ಯಾಂಕ್‌ನ ಎಟಿಎಂ ಬೂತ್‌ನಿಂದ ವಂಚಕ ಹಣ ಡ್ರಾ ಮಾಡುತ್ತಿರುವುದು ತಿಲಕ್ ಮಾರ್ಗ ಠಾಣೆ ಪೊಲೀಸರಿಗೆ ತನಿಖೆಯಲ್ಲಿ ತಿಳಿದು ಬಂದಿದತ್ತು. ಇದಾದ ಬಳಿಕ ಪೊಲೀಸರ ತಂಡ ಬೆಂಗಳೂರಿಗೆ ತೆರಳಿತ್ತು. ಈ ವೇಳೆ ಪೊಲೀಸರು ಎಟಿಎಂ ಬೂತ್‌ನಲ್ಲಿ ಹಣ ಡ್ರಾ ಮಾಡುತ್ತಿದ್ದಾಗ ವಂಚಕನನ್ನು ಹಿಡಿದಿದ್ದಾರೆ.


ಹೀಗೆ ಮೋಸ ನಡೆಯುತ್ತದೆ


ಆರೋಪಿಗಳು ವಾಟ್ಸ್‌ ಆ್ಯಪ್ ಹ್ಯಾಕ್(WhatsApp Fraud) ಮಾಡಿದ ಬಳಿಕ ಸಂತ್ರಸ್ತರ ಮೊಬೈಲ್‌ಗಳ ಕಾಂಟ್ಯಾಕ್ಟ್ ಲಿಸ್ಟ್‌ ನಲ್ಲಿರುವವರಿಗೆ ತಮ್ಮ ಖಾತೆ ಸಂಖ್ಯೆಯನ್ನು ಕಳುಹಿಸಿ ಸಹಾಯದ ಹೆಸರಿನಲ್ಲಿ ವಂಚಿಸುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಇದಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆಸಿ ಕೆಲವೊಮ್ಮೆ ಹರ್ಬಲ್ ಸೀಡ್ಸ್ ಹೆಸರಲ್ಲಿ ಮೋಸ ಮಾಡುತ್ತಿದ್ದರು. ಈ ಗ್ಯಾಂಗ್‌ನಲ್ಲಿ ಸಾಕಷ್ಟು ಮಂದಿ ಭಾಗಿಯಾಗಿದ್ದು, ಪೊಲೀಸರು ದಾಳಿ ವೇಳೆ ಪರಾರಿಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ವಿಚಾರಣೆ ವೇಳೆ ದೇಶಾದ್ಯಂತ ನೂರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿರುವುದು ಪತ್ತೆಯಾಗಿದೆ. ಸೈಬರ್ ದರೋಡೆಕೋರರು ಅಂತರಾಷ್ಟ್ರೀಯ ಗ್ಯಾಂಗ್ ಈ ಕೃತ್ಯವನ್ನು ನಡೆಸುತ್ತಿದ್ದು, ಅಮಾಯಕರನ್ನು ಟಾರ್ಗೆಟ್ ಮಾಡಿ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.


ಇದನ್ನೂ ಓದಿ: Good News: ಉದ್ಯೋಗ ಸೃಷ್ಟಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಪ್ರಕಟ, ಈ ವರದಿ ಓದಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.