ನವದೆಹಲಿ: ದೆಹಲಿ ಮೂಲದ ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ ಸಂಸ್ಥೆಯು ಈಗ ಒಂದು ಸ್ಪೋಟಕ ಅಂಶವನ್ನು ತನ್ನ ಅಧ್ಯಯನದ ಮೂಲಕ ಬಹಿರಂಗಪಡಿಸಿದೆ. 


COMMERCIAL BREAK
SCROLL TO CONTINUE READING

ನಿಮಗೆ ನೆನಪಿರಬಹುದು ಈ ಹಿಂದೆ  ಕುಲಾಂತರಿ ಬೀಜದ ವಿಷಯವಾಗಿ ಸಾಕಷ್ಟು ವಿವಾದ ಉಂಟಾಗಿತ್ತು. ಅದರಲ್ಲೂ ರೈತರು ಬಿಟಿ ಹತ್ತಿ ಬಿಟಿ ಬದನೆಯಂತಹ  ಕುಲಾಂತರಿ ಬೀಜಗಳನ್ನು ಬಿತ್ತಿದ್ದರ ಪ್ರತಿಫಲವಾಗಿ ಹಲವಾರು ವರ್ಷಗಳ ನಿರಂತರ ಕೃಷಿಯ ಮೂಲಕ  ಭೂಮಿಗೆ ಬರಡು ಬಂದಿತ್ತು.ಆದರೆ ಈಗ ಇಂತದ್ದೆ ಕುಲಾಂತರಿ ಮಾದರಿಯ ಆಹಾರ ಭಾರತದ ಮಾರುಕಟ್ಟೆಯಲ್ಲಿ  ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.


ಈ ಅಧ್ಯಯನ ಪ್ರಕಾರ ಭಾರತದ ಮಾರುಕಟ್ಟೆಯಲ್ಲಿ ಒಟ್ಟು 65 ಆಹಾರ ಪದಾರ್ಥಗಳಲ್ಲಿ ಶೇಕಡ 32 ರಷ್ಟು ಜಿಎಂ( ಕುಲಾಂತರಿ) ಅಂಶವನ್ನು  ಹೊಂದಿದೆ ಎಂದು ತಿಳಿದುಬಂದಿದೆ. ಈ ಎಲ್ಲ  ಆಹಾರ ಪದಾರ್ಥಗಳು ಹೆಚ್ಚಾಗಿ  ದೆಹಲಿ  ಪಂಜಾಬ್ ಗುಜರಾತ್ ಭಾಗಗಳಲ್ಲಿ ಹೇರಳವಾಗಿ  ಮಾರಾಟ ಮಾಡಲಾಗುತ್ತಿದೆ. ಈ ಆಹಾರ ಪದಾರ್ಥಗಳಲ್ಲಿ  ಪ್ರಮುಖವಾಗಿ ರಪ್ತಿನ ಪ್ರಮಾಣದಲ್ಲಿ( 35) ದೇಶಿಯವಾಗಿ ನಿರ್ಮಿಸಿದರಲ್ಲಿ (30) ಸ್ಯಾಂಪಲ್ ಗಳನ್ನು ಪರೀಕ್ಷಿಸಲಾಗಿದೆ. ಇವುಗಳಲ್ಲಿ ಹೇರಳವಾಗಿ ಎಣ್ಣೆ ಪದಾರ್ಥಗಳು, ಸ್ನಾಕ್ಸ್ ,ನಂತಹ ಪದಾರ್ಥಗಳನ್ನು ಹೆಚ್ಚಾಗಿ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ.


ಈ ಕುಲಾಂತರಿಯ ಆಹಾರ ಪದಾರ್ಥಗಳು ಆರೋಗ್ಯದ  ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡಲಿವೆ ಎನ್ನಲಾಗುತ್ತಿದೆ. ಆದ್ದರಿಂದ ಈ ರೀತಿಯ ಆಹಾರ ಪದಾರ್ಥಗಳು ಭಾರತದಲ್ಲಿ  ಮಾರಾಟವನ್ನು ನಿಷೇಧಿಸಲಾಗಿದೆ.