ಕೊಲ್ಕತ್ತಾ: ಬಂಗಾಳಿ ನಟಿ ಮೌಮಿತಾ ಸಹಾ ಕಳೆದ ರಾತ್ರಿ ಕೋಲ್ಕತಾದ ರೀಜೆಂಟ್ ಪಾರ್ಕ್ನಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. 


COMMERCIAL BREAK
SCROLL TO CONTINUE READING

23 ವರ್ಷ ವಯಸ್ಸಿನ  ಮೌಮಿತಾ ತನ್ನ ಕೋಣೆಯ ಸೀಲಿಂಗ್ ಫ್ಯಾನ್ ನಲ್ಲಿ ಡುಪಾಟ್ಟಾ ಸಹಾಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದೆ.


ಮೂಲತಃ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ಬಾಂದೆಲ್ ವರಾಗಿರುವ ನಟಿ ದಕ್ಷಿಣ ಕೊಲ್ಕತಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಅಶೋಕನಗರದ ಪೊಲೀಸರು ತಿಳಿಸಿದ್ದಾರೆ 


ಕೊಲ್ಕತ್ತಾ ದಕ್ಷಿಣ ಭಾಗದ ಎಸಿಪಿ ನಿಂಬಾಳ್ಕರ್ ಸಂತೋಷ ಉತ್ತಮರಾವ್ ಹೇಳುವಂತೆ ನಟಿ ಮೌಮಿತಾರವರು ಮಾನಸಿಕ ಖಿನ್ನತೆಯಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.