ಎಚ್ಚರಿಕೆ: ಇನ್ಮುಂದೆ ವಾಟ್ಸ್ ಆಪ್ ನಲ್ಲಿ ನೀವು ಈ ಕೆಲಸ ಮಾಡುವಂತಿಲ್ಲ
15 ಸೆಕೆಂಡ್ ಗಳಲ್ಲಿ ವಾಟ್ಸ್ ಆಪ್ ಮೂಲಕ 100 ಅಥವಾ ಅದಕ್ಕಿಂತ ಹೆಚ್ಚು ಸಂದೇಶ ರವಾನಿಸುವ ಖಾತೆಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಿರುವ ವಾಟ್ಸ್ ಆಪ್, ಅಂತಹ ಖಾತೆಗಳನ್ನು ನಿಷ್ಕ್ರೀಯಗೊಳಿಸಲಾಗುವುದು ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ನವದೆಹಲಿ:ಒಂದು ವೇಳೆ ನೀವು ವಾಟ್ಸ್ ಆಪ್ ಖಾತೆ ಹೊಂದಿದ್ದು, ನೀವು ನಿಮ್ಮ ಖಾತೆಯ ಮೂಲಕ ಕೇವಲ 15 ಸೆಕೆಂಡಗಳಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಸಂದೇಶಗಳನ್ನು ರವಾನಿಸಿದರೆ ಇನ್ಮುಂದೆ ನಿಮ್ಮ ವಿರುದ್ಧ ವಾಟ್ಸ್ ಆಪ್ ಕಾನೂನು ಕ್ರಮ ಜರುಗಿಸಲಿದೆ. ಹೌದು, ಸಂಸ್ಥೆ ಈ ಕುರಿತು ತನ್ನ FAQ ಪುಟವನ್ನು ಅಪ್ಡೇಟ್ ಮಾಡಿದ್ದು, ಇದರಲ್ಲಿ ವಾಟ್ಸ್ ಆಪ್ ಮೂಲಕ 15 ಸೆಕೆಂಡ್ ನಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಸಂದೇಶಗಳನ್ನು ಬಲ್ಕ್ ರೂಪದಲ್ಲಿ ಕಳುಹಿಸುವ ವ್ಯಾಪಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿಕೊಂಡಿದೆ, ಇದಕ್ಕಾಗಿ ವಾಟ್ಸ್ ಆಪ್ ಬಿಸಿನೆಸ್ ಆಪ್ ಹಾಗೂ ವಾಟ್ಸ್ ಆಪ್ ಬಿಸಿನೆಸ್ API ಗಳನ್ನು ಅಭಿವೃದ್ಧಿಗೋಳಿಸಲಾಗಿದ್ದು, ಇವುಗಳ ಮೂಲಕ ಕಂಪನಿಗಳು ಗ್ರಾಹಕರ ಜೊತೆ ವ್ಯವಹಾರ ನಡೆಸಬಹುದು ಮತ್ತು ಇದರಲ್ಲಿ ಬಲ್ಕ್ ರೂಪದಲ್ಲಿ ಸಂದೇಶಗಳನ್ನು ಕಳುಹಿಸುವುದನ್ನು ತಡೆಯಲಾಗಿದೆ ಎಂದು ಸಂಸ್ಥೆ ಹೇಳಿದೆ. ಅಷ್ಟೇ ಅಲ್ಲ ಬಲ್ಕ್ ಅಥವಾ ಸ್ವಯಂಚಾಲಿತ ಸಂದೇಶ ರವಾನಿಸುವುದು ವಾಟ್ಸ್ ಆಪ್ ನ ಷರತ್ತು ಮತ್ತು ಸೇವಾ ನಿಯಮದ ಉಲ್ಲಂಘನೆಯಾಗಿದೆ ಎಂಬುದನ್ನು ಸಂಸ್ಥೆ ಸ್ಪಷ್ಟಪಡಿಸಿದೆ.
ತನ್ನ ಬಳಕೆದಾರರ ಖಾಸಗಿತನವನ್ನು ಬಲಪಡಿಸಲು ಸಂಸ್ಥೆ ಬದ್ಧವಾಗಿದ್ದು, ಬಲ್ಕ್ ಸಂದೇಶಗಳಿಂದ ತನ್ನ ವೇದಿಕೆಯ ಮೇಲೆ ಇರುವ ಬಳಕೆದಾರರು ಯಾವುದೇ ರೀತಿಯ ತೊಂದರೆ ಅನುಭವಿಸಲು ಬಿಡುವುದಿಲ್ಲ ಎಂದು ಸಂಸ್ಥೆ ಹೇಳಿಕೊಂಡಿದೆ
ತನ್ನ ಬಳಕೆದಾರರನ್ನು ದುರುಪಯೋಗದಿಂದ ಸುರಕ್ಷಿತವಾಗಿರಿಸಲು ತಮ್ಮ ವೇದಿಕೆಯ ಖಾಸಗಿ ಸ್ವರೂಪವನ್ನು ಬಲಪಡಿಸಲು ಅವರು ಬದ್ಧರಾಗಿದ್ದಾರೆ ಎಂದು ಕಂಪನಿ ಹೇಳುತ್ತದೆ. ಹಾಗೆ ಮಾಡಲು ಅವರು ತಮ್ಮ ನಿಯಮಗಳು ಮತ್ತು ಷರತ್ತುಗಳನ್ನು ಮುರಿಯುವ ಖಾತೆಗಳನ್ನು ಗುರುತಿಸುತ್ತಿದ್ದಾರೆ ಮತ್ತು ನಿಷೇಧಿಸುತ್ತಿದ್ದಾರೆ.
ಬೃಹತ್ ಅಥವಾ ಸ್ವಯಂಚಾಲಿತ ಸಂದೇಶಗಳನ್ನು ಕಳುಹಿಸುವ ಮೂಲಕ ವೇದಿಕೆಯನ್ನು ದುರುಪಯೋಗಪಡಿಸಿಕೊಳ್ಳುವಲ್ಲಿ ತೊಡಗಿರುವ ಅಥವಾ ಇತರರಿಗೆ ಸಹಾಯ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸೆಂಬರ್ 7 ರಂದು ಕಂಪನಿ ತಿಳಿಸಿದೆ.
ಒಂದು ವೇಳೆ ಯಾವುದಾದರು ಕಂಪನಿ ಅಥವಾ ವ್ಯಕ್ತಿ ಈ ರೀತಿಯ ಕಾರ್ಯಗಳಲ್ಲಿ ತೊಡಗಿದರೆ ಅದನ್ನು ವಾಟ್ಸ್ ಆಪ್ ನ ನಿಯಮ ಹಾಗೂ ಷರತ್ತುಗಳ ಉಲ್ಲಂಘನೆ ಎಂದು ಪರಿಗಣಿಸಿ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಸ್ಥೆ ಹೇಳಿದೆ.
ಇದಕ್ಕೆ ಸಮಗ್ರ ವಿಧಾನದ ಅಗತ್ಯತೆ ಇದ್ದು, ಸಂಸ್ಥೆಯ ಸೇವಾ ನಿಯಮಗಳ ಹಾಗೂ ಷರತ್ತುಗಳನ್ನು ಕಾಪಾಡುವಲ್ಲಿ ಸಂಸ್ಥೆ ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಲಿದೆ.
ಇದಕ್ಕೂ ಮೊದಲು ಸುಳ್ಳು ಸುದ್ದಿ ಅಥವಾ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಓರ್ವ ಬಳಕೆದಾರ ಒಂದು ಸಂದೇಶವನ್ನು ಒಂದು ಬಾರಿಗೆ ಕೇವಲ 5 ಜನರಿಗೆ ಅಥವಾ 5 ಗುಂಪುಗಳಿಗೆ ಕಳುಹಿಸುವುದರ ಮೇಲೆ ಸಂಸ್ಥೆ ನಿರ್ಬಂಧ ವಿಧಿಸಿರುವುದನ್ನು ಇಲ್ಲಿ ಸ್ಮರಿಸಬಹುದು.