ಕಾರ್ಡ್ ಗೆ ಸಂಬಂಧಿಸಿದ ಡೇಟಾ ಕಳುವು
ವಂಚಕರು ಗ್ರಾಹಕರ ಏಟಿಎಂಗೆ ಸಂಬಧಿಸಿದ ಡೇಟಾ ಅನ್ನು ಸ್ಕಿಮ್ಮರ್ ಬಳಸುವ ಮೂಲಕ ಕದಿಯುತ್ತಾರೆ. ಇದಕ್ಕಾಗಿ ಖದೀಮರು ಕಳುವು ಮಾಡುವ ಸಾಧನವನ್ನು ಕಾರ್ಡ್ ರೀಡರ್ಸ್ ಸ್ಲಾಟ್ ನಲ್ಲಿ ಇಡುತ್ತಾರೆ. ಈ ಸಾಧನದಿಂದ ನಿಮ್ಮ ಕಾರ್ಡ್ ಗೆ ಸಂಬಂಧಿಸಿದ ಡೇಟಾ ಕಳ್ಳರ ಬಳಿ ತಲುಪುತ್ತದೆ. ಅಷ್ಟೇ ಅಲ್ಲ ಅನೇಕ ಮೋಸಗಾರರು ನಕಲಿ ಕೀಬೋರ್ಡ್ ಬಳಸಿ ಡೇಟಾ ಕದಿಯುತ್ತಾರೆ.


COMMERCIAL BREAK
SCROLL TO CONTINUE READING

ATM ಕಾರ್ಡ್ ಕ್ಲೋನಿಂಗ್ 
ಇದಲ್ಲದೆ, ಸಾಮಾನ್ಯ ಕರೆಗಳ ಮೂಲಕವೂ ಕೂಡ ಮೋಸ ಮಾಡಲಾಗುತ್ತದೆ. ಇದಲ್ಲದೆ, ಕಾರ್ಡ್ ಕ್ಲೋನಿಂಗ್ ಕೂಡ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಗ್ರಾಹಕರು ಎಟಿಎಂ ಕಾರ್ಡ್ ಗಳ ಮಾಹಿತಿಯನ್ನು ಕ್ಲೋನಿಂಗ್ ಮಾಡುವ ಮೂಲಕ ನಿಮ್ಮ ಸಂಪೂರ್ಣ ಮಾಹಿತಿಯನ್ನು ಕಡಿಯಲಾಗುತ್ತದೆ. ನಂತರ ನಕಲಿ ಕಾರ್ಡ್ ರಚಿಸುವ ಮೂಲಕ ನಿಮ್ಮ ಖಾತೆಯಿಂದ ಹಣವನ್ನು ವಿಥ್ ಡ್ರಾ ಮಾಡಲಾಗುತ್ತದೆ.


ಬ್ಯಾಂಕ್ ಖಾತೆಯ ಹೆಸರಿನಲ್ಲಿ ವಂಚನೆ
ಇದಲ್ಲದೆ, ಬ್ಯಾಂಕ್ ಖಾತೆಗಳಲ್ಲಿ ಚೆಕಿಂಗ್ ಹೆಸರಿನಲ್ಲಿ ವಂಚಕರು ಮೋಸ ಮಾಡುತ್ತಾರೆ. ಎಲ್ಲಾ ಗ್ರಾಹಕರು ತಮ್ಮ ಬ್ಯಾಂಕ್ ಖಾತೆಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು ಮತ್ತು ಅವರು ಯಾವುದೇ ರೀತಿಯ ಅವ್ಯವಸ್ಥೆಯನ್ನು ಗಮನಿಸಿದರೆ ಬ್ಯಾಂಕಿನಿಂದ ತಕ್ಷಣವೇ ಅದರ ಬಗ್ಗೆ ಮಾಹಿತಿ ತಿಳಿದುಕೊಳ್ಳಬೇಕು.


ನೌಕರಿಯ ಹೆಸರಿನಲ್ಲಿ ವಂಚನೆ
ಇದಲ್ಲದೆ, ಅನೇಕ ಉದ್ಯೋಗ ನೀಡುವ ಪೋರ್ಟಲ್‌ಗಳು ಸಹ ಉದ್ಯೋಗಗಳ ಹೆಸರಿನಲ್ಲಿ ಮೋಸ ಎಸಗಲಾಗುತ್ತಿದೆ . ಜಾಬ್ ಅಲರ್ಟ್  ಹೆಸರಿನಲ್ಲಿ ನಿಮಗೆ ಶುಲ್ಕ ವಿಧಿಸಲಾಗುತ್ತದೆ. ಇದಲ್ಲದೆ, ಯಾವುದೇ ಪೋರ್ಟಲ್‌ನಲ್ಲಿ ಹಣ ಪಾವತಿಸುವ ಮೊದಲು ಖಂಡಿತವಾಗಿಯೂ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಳ್ಳಿ.


QR ಕೋಡ್ ಗಳ ಮೂಲಕ ವಂಚನೆ
ಕ್ಯೂಆರ್ ಅಂದರೆ, ತ್ವರಿತ ಪ್ರತಿಕ್ರಿಯೆ ಕೋಡ್ ಮೂಲಕವೂ ವಂಚನೆ ನಡೆಸಲಾಗುತ್ತಿದೆ. ವಂಚಕರು ಮೊಬೈಲ್‌ಗಳಿಗೆ ಕ್ಯೂಆರ್ ಕೋಡ್‌ಗಳನ್ನು ಕಳುಹಿಸುತ್ತಾರೆ. ಬಳಿಕ ಅದರ ಮೂಲಕ ವಂಚನೆ ಎಸಗುತ್ತಾರೆ. ಕ್ಯೂಆರ್ ಕೋಡ್ ಅನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ ಮತ್ತು ಅದನ್ನು ಸ್ವೀಕರಿಸುವ ವ್ಯಕ್ತಿ ಕ್ಯೂಆರ್ ಕೋಡ್ ಲಿಂಕ್ ಅನ್ನು ಕ್ಲಿಕ್ ಮಾಡುತ್ತಾರೆ, ನಂತರ ವಂಚಕರು ಮೊಬೈಲ್ ಫೋನ್‌ ಮೂಲಕ  ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತಾರೆ ಮತ್ತು ಬ್ಯಾಂಕ್ ಖಾತೆಯಿಂದ ಹಣವನ್ನು ವಿಥ್ ಡ್ರಾ ಮಾಡುತ್ತಾರೆ.


UPIಗಳ ಮೂಲಕ ವಂಚನೆ
ಇದಲ್ಲದೆ ಯುಪಿಐ ಮೂಲಕವೂ ವಂಚನೆ ನಡೆಸಲಾಗುತ್ತಿದೆ. ಯುಪಿಐ ಮೂಲಕ, ವಂಚಕರು ವ್ಯಕ್ತಿಯೊಬ್ಬರಿಗೆ  ಡೆಬಿಟ್ ಲಿಂಕ್ ಕಳುಹಿಸುತ್ತಾರೆ. ವ್ಯಕ್ತಿ ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಮತ್ತು ಪಿನ್ ನಮೂದಿಸಿದ ಬಳಿಕ ತಕ್ಷಣವೇ ಹಣವನ್ನು ಅವನ ಖಾತೆಯಿಂದ ಕಡಿತಗೊಳಿಸಲಾಗುತ್ತದೆ. ಇಂತಹ ವಂಚನೆಯಿಂದ ತಪ್ಪಿಸಿಕೊಳ್ಳಲು ಯಾವುದೇ ಅಪರಿಚಿತ ಲಿಂಕ್ ಮೇಲೆ ಕ್ಲಿಕ್ ಮಾಡಬೇಡಿ.


ವಾಟ್ಸ್ ಆಪ್ ಕಾಲ್ ಮೂಲಕ ವಂಚನೆ 
ಯಾವುದೇ ಒಂದು ಅಜ್ಞಾತ ಸಂಖ್ಯೆಯಿಂದ ನಿಮ್ಮ ವಾಟ್ಸ್ ಆಪ್ ಖಾತೆಗೆ ಕರೆ ಬಂದರೆ ತಕ್ಷಣ ಎಚ್ಚೆತ್ತುಕೊಳ್ಳಿ. ಏಕೆಂದರೆ ಕರೆ ಮಾಡಿದವನು ನಿಮಗೆ ವಂಚನೆ ಎಸಗುವ ಸಾಧ್ಯತೆ ಇದೆ. ತನ್ನ ಉದ್ದೇಶವನ್ನು ಕಾರ್ಯಗತಗೊಳಿಸಿ ಆತ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡುತ್ತಾನೆ. ಧ್ವನಿ ಕರೆ ಮಾಡುವವ ತನ್ನ ಟ್ರಿಕ್ ಬಳಸಿ ನಿಮ್ಮ ಹಣಕ್ಕೆ ಕನ್ನಹಾಕಬಹುದು.