ಚೀನಾದಲ್ಲಿ ಆರಂಭವಾಗಿರುವ CORONAVIRUSನ ಪ್ರಕೋಪ ಇದೀಗ ವಿಶ್ವಾದ್ಯಂತ ತನ್ನ ಪ್ರಭಾವ ತೋರಿಸಲು ಆರಂಭಿಸಿದೆ. ವಿಶ್ವಾದ್ಯಂತ ಇದೀಗ ಸರಿಸುಮಾರು 60 ದೇಶಗಳಲ್ಲಿ ಕೊರೊನಾ ವೈರಸ್ ತನ್ನ ಕಾಲು ಚಾಚಿದೆ. ಭಾರತವೂ ಕೂಡ ಇದಕ್ಕೆ ಹೊರತಾಗಿಲ್ಲ. ವರದಿಗಳ ಪ್ರಕಾರ ಭಾರತದಲ್ಲಿ ಇದುವರೆಗೆ ಸುಮಾರು ಐದು ಜನರಿಗೆ ಈ ವೈರಸ್ ನ ಸೋಂಕು ತಗುಲಿದೆ ಎನ್ನಲಾಗಿದೆ. ಈ ಪ್ರಕರಣಗಳ ಮೇಲೆ ಸರ್ಕಾರ ತನ್ನ ನಿರಂತರ ನಿಗಾವಹಿಸಿದೆ ಎನ್ನಲಾಗಿದೆ. ಈ ಸೋಂಕಿಗೆ ಸಂಬಂಧಿಸಿದಂತೆ ವಿಶ್ವಾದ್ಯಂತ ಹಲವು ರೋಗಗಳ ವರದಿಗಳು ಬಹಿರಂಗಗೊಳ್ಳುತ್ತಲೇ ಇವೆ. ಅವುಗಳ ಜೊತೆಗೆ ಈ ರೋಗಕ್ಕೆ ಸಂಬಂಧಿಸಿದಂತೆ ಹಲವು ಸುಳ್ಳು ಮಾಹಿತಿಗಳೂ ಕೂಡ ಆನ್ಲೈನ್ ನಲ್ಲಿ ಹಬ್ಬುತ್ತಿವೆ. ಇಲ್ಲಿ ನಾವು ಅಂತಹುದೇ ಕೆಲ ತಪ್ಪು ಮಾಹಿತಿಗಳ ಕುರಿತು ಉಲ್ಲೇಖಿಸುತ್ತಿದ್ದು, ಈ ಮಾಹಿತಿಗಳನ್ನು ಆನ್ಲೈನ್ ನಲ್ಲಿ ಎಂದಿಗೂ ಕೂಡ ಹಂಚಿಕೊಳ್ಳಬೇಡಿ.


COMMERCIAL BREAK
SCROLL TO CONTINUE READING

ತಜ್ಞರು ಹೇಳುವ ಪ್ರಕಾರ ಕರೋನಾ ವೈರಸ್ ಗೆ ಮಾರುಕಟ್ಟೆಯಲ್ಲಿ ಮಾಸ್ಕ್ ಗಳು ಲಭ್ಯವಿದ್ದು, ಇವುಗಳನ್ನು ಉಪಯೋಗಿಸಿ ನೀವು ಕರೋನಾ ವೈರಸ್ ನಿಂದ ಪಾರಾಗಬಹುದು ಎಂಬ ಜಾಹೀರಾತುಗಳನ್ನು ನೀವು ಗಮನಿಸಿದರೆ ಅವುಗಳನ್ನು ಎಂದಿಗೂ ಕೂಡ ನಂಬಬೇಡಿ ಮತ್ತು ಇಂತಹ ಮಾಹಿತಿಯನ್ನು ಹಂಚಿಕೊಳ್ಳುವುದರಿಂದ ದೂರವಿರಿ ಎಂದಿದ್ದಾರೆ. ಏಕೆಂದರೆ ಕರೋನಾ ವೈರಸ್ ನಿಂದ ಕಾಪಾಡುವ ಯಾವುದೇ ಮಾಸ್ಕ್ ಇನ್ನೂ ಮಾರುಕಟ್ಟೆಯಲ್ಲಿ ಸಿದ್ಧವಾಗಿಲ್ಲ ಎಂದು ಅವರು ಹೇಳಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ತಜ್ಞರು ಕೇವಲ ಮಾಸ್ಕ್ ವೊಂದನ್ನು ಧರಿಸಿ ನೀವು ಕರೋನಾ ವೈರಸ್ ನಿಂದ ಪಾರಾಗುವುದಿಲ್ಲ ಎಂದು ಹೇಳಿದ್ದಾರೆ.


ಕೊರೊನಾ ವೈರಸ್ ನಿಂದ ಬಚಾವಾಗಲು ಯಾವುದೇ ಔಷಧಿ ಅಥವಾ ಎಣ್ಣೆ ಆನ್ಲೈನ್ ನಲ್ಲಿ ಸರ್ಚ್ ಮಾಡಬೇಡಿ. ಏಕೆಂದರೆ ಕೊರೊನಾ ವೈರಸ್ ಗೆ ಇದುವರೆಗೆ ಯಾವುದೇ ಅಧಿಕೃತ ಔಷಧಿ ಮಾರುಕಟ್ಟೆಯಲ್ಲಿ ಲಭ್ಯವಿಲ್ಲ. ಈ ರೋಗಕ್ಕೆ ಯಾವುದೇ ಅಧಿಕೃತ ಟೆಸ್ಟ್ ಇಲ್ಲ. ಹೀಗಾಗಿ ಈ ರೋಗದ ಹೆಸರಿನಲ್ಲಿ ಆನ್ಲೈನ್ ನಲ್ಲಿ ಮಾರಾಟವಾಗುತ್ತಿರುವ ಕಿಟ್ ಮೇಲೆ ಭರವಸೆಯನ್ನು ಇಡಬೇಡಿ.


ಕೊರೊನಾ ವೈರಸ್ ಗೆ ಸಂಬಂಧಿಸಿದ ಲಕ್ಷಣಗಳನ್ನು ಆನ್ಲೈನ್ ನಲ್ಲಿ ಸರ್ಚ್ ಮಾಡಬೇಡಿ. ಒಂದು ವೇಳೆ ನಿಮಗೆ ಅಸ್ವಸ್ಥತೆ ಎನಿಸಿದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ಕೊರೊನಾ ವೈರಸ್ ಗೆ ಸಂಬಂಧಿಸಿದ ಯಾವುದೇ ಫಿಶಿಂಗ್ ಇ-ಮೇಲ್ ಗಳ ಕುರಿತು ಎಚ್ಚರಿಕೆವಹಿಸಿ. ಸೈಬರ್ ಅಪರಾಧಿಗಳು ತಪ್ಪು ಮಾರ್ಗಗಳನ್ನು ಅನುಸರಿಸಿ ನಿಮ್ಮಿಂದ ಲಾಭಗಳಿಸಲು ಹೊಂಚು ಹಾಕಿಕುಳಿತಿದ್ದಾರೆ ಎಚ್ಚರಿಕೆ ವಹಿಸಿ.