ನವದೆಹಲಿ: ಇನ್ಮುಂದೆ ಪ್ಯಾನ್ ಮತ್ತು ಆಧಾರ್ ಮಾಹಿತಿ ನೀಡದೆ ಹೋದಲ್ಲಿ ನಿಮಗೆ ಭಾರಿ ಹಾನಿ ಉಂಟಾಗುವ ಸಾಧ್ಯತೆ ಇದೆ. ಈ ಮಾಹಿತಿಯನ್ನು ನೀಡದೆ ಹೋದಲ್ಲಿ ಇನ್ಮುಂದೆ ನಿಮಗೆ ನಿಮ್ಮ ಆದಾಯದ ಶೇ.20ರಷ್ಟು ಹಣವನ್ನು ಆದಾಯ ತೆರಿಗೆ ರೂಪದಲ್ಲಿ ಕಟ್ಟಬೇಕಾಗಲಿದೆ. CBDT ನಿಯಮಗಳ ಪ್ರಕಾರ TDS ಡಿಡಕ್ಷನ್ ಗಾಗಿ ನೌಕರರು ತಮ್ಮ  ಕಂಪನಿಯಲ್ಲಿ ಈ ಎರಡು ದಾಖಲೆಗಳ ಮಾಹಿತಿ ನೀಡುವುದು ಅನಿವಾರ್ಯವಾಗಿದೆ. ಒಂದು ವೇಳೆ ಯಾವುದೇ ನೌಕರ ಈ ಎರಡು ದಾಖಲೆಗಳ ಮಾಹಿತಿ ನೀಡದೆ ಹೋದಲ್ಲಿ, ಅವರು ತಮ್ಮ ಆದಾಯದ ಶೇ.20ರಷ್ಟು ಹಣವನ್ನು ಆದಾಯ ತೆರಿಗೆಯಾಗಿ ಪಾವತಿಸಬೇಕು.


COMMERCIAL BREAK
SCROLL TO CONTINUE READING

ಪ್ಯಾನ್-ಆಧಾರ್ ಮಾಹಿತಿ ಎಲ್ಲಿ ಅಗತ್ಯ?
CBDTಯ ಒಂದು ನಿಯಮದಲ್ಲಿ ಈ ಕುರಿತು ಉಲ್ಲೇಖಿಸಲಾಗಿದೆ. ಸಂಸ್ಥೆ ಜಾರಿಗೊಳಿಸಿರುವ ಒಂದು ಅಧಿಸೂಚನೆ ಪ್ರಕಾರ ಇನ್ಕಮ್ ಟ್ಯಾಕ್ಸ್ ನ ಕಾಯ್ದೆ 206AA ಅಡಿ ಎಲ್ಲಾ ನೌಕರರು ತಾವು ಪಾವತಿಸಬೇಕಾದ ತೆರಿಗೆ ಹಣದ ಜೊತೆಗೆ ಪ್ಯಾನ್ ಹಾಗೂ ಆಧಾರ್ ಮಾಹಿತಿ ನೀಡುವುದು ಅನಿವಾರ್ಯವಾಗಿದೆ. ಹೀಗೆ ಮಾಡದೆ ಹೋದಲ್ಲಿ ನಿಮ್ಮ ನೌಕರಿದಾತರು, ನಿಮ್ಮ ಆದಾಯದಿಂದ ಇನ್ಕಮ್ ಟ್ಯಾಕ್ಸ್ ಕಡಿತಗೊಳಿಸಬಹುದಾಗಿದೆ. ಇದು ನಿಮ್ಮ ಆದಾಯದ ಶೇ.20ರಷ್ಟು ಇರಲಿದೆ.


ತಪ್ಪು ಮಾಹಿತಿ ನೀಡಿದರು ಸಹ ದಂಡ ತೆರಬೇಕಾಗಲಿದೆ
ತೆರಿಗೆ ಪಾವತಿದಾರರು ತಮ್ಮ ನೌಕರಿದಾತರಿಗೆ ಪ್ಯಾನ್ ಹಾಗೂ ಆಧಾರ್ ಮಾಹಿತಿ ಸರಿಯಾಗಿ ನೀಡಬೇಕು. ಒಂದು ವೇಳೆ ನೀವು ತಪ್ಪು ಮಾಹಿತಿ ನೀಡಿದ್ದೆ ಆದಲ್ಲಿ ನಿಮ್ಮ ಆದಾಯದ ಮೇಲೆ ಹೆಚ್ಚುವರಿ TDS ಕಡಿತವಾಗುವ ಸಾಧ್ಯತೆ ಇದೆ.