ನವ ದೆಹಲಿ/ಚಂಡೀಗಢ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆ(SC/ST ಕಾಯ್ದೆ) ಅಡಿಯಲ್ಲಿ ಸುಪ್ರೀಂಕೋರ್ಟ್ನ ಇತ್ತೀಚಿನ ತೀರ್ಪಿನ ವಿರುದ್ಧ ಪ್ರತಿಭಟಿಸಿ ದಲಿತ ಮತ್ತು ಬುಡಕಟ್ಟು ಸಂಘಟನೆಗಳು ಇಂದು(ಏಪ್ರಿಲ್ 2) ಭಾರತ್ ಬಂದ್ ಗೆ ಕರೆ ನೀಡಿವೆ. ಸುದ್ದಿ ಸಂಸ್ಥೆಯ ANI ಯ ಪ್ರಕಾರ, ದಲಿತ ಸಂಘಟನೆಯೊಂದಿಗೆ ಜನರು ಸೋಮವಾರ ಒರಿಸ್ಸಾದಲ್ಲಿರುವ ಸಂಧಾಲ್ಪುರ್ (ಸಂಬಲ್ಪುರ) ರೈಲುಗಳನ್ನು ತಡೆಹಿಡಿದರು. ಪಂಜಾಬ್ ಸರ್ಕಾರ ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಅಮಾನತುಗೊಳಿಸುವುದಕ್ಕೆ ಆದೇಶಿಸಿದೆ.


COMMERCIAL BREAK
SCROLL TO CONTINUE READING

ಏಪ್ರಿಲ್ 2 ರಂದು ಇಡೀ ಪಂಜಾಬ್ ರಾಜ್ಯದಲ್ಲಿ ಮೊಬೈಲ್ ಸೇವೆಗಳನ್ನು ಅಮಾನತುಗೊಳಿಸಲಾಗುವುದು.  ಸಾರ್ವಜನಿಕ ಸಾರಿಗೆ ಸೇವೆಗಳನ್ನು ರದ್ದುಗೊಳಿಸಲು ಸರ್ಕಾರ ನಿರ್ಧರಿಸಿದೆ ಎಂದು ಪಂಜಾಬ್ ಸರ್ಕಾರದ ವಕ್ತಾರರು ತಿಳಿಸಿದರು. 


ಸಿಬಿಎಸ್ಇ 10 ಮತ್ತು 12 ನೇ ತರಗತಿ ಪರೀಕ್ಷೆಗಳ ಮುಂದೂಡಿಕೆ
ಭಾರತ್ ಬಂದ್ ಘೋಷಣೆ ಕಾರಣ, ಸೋಮವಾರ ಜರುಗಬೇಕಿದ್ದ 10 ಮತ್ತು 12ನೇ ತರಗತಿಗಳ ಬೋರ್ಡ್ ಪರೀಕ್ಷೆಗಳನ್ನು ಪಂಜಾಬ್ ನಲ್ಲಿ ರದ್ದುಗೊಳಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ಪಂಜಾಬ್ ಶಿಕ್ಷಣದ ನಿರ್ದೇಶನಾಲಯದ ಬೇಡಿಕೆಗೆ ಭಾನುವಾರ ರಾತ್ರಿ ತನ್ನ ಅಧಿಕೃತ ಪ್ರಕಟಣೆಯನ್ನು ಘೋಷಿಸಿತು. ಭದ್ರತೆಯ ದೃಷ್ಟಿಯಿಂದ, ಮಂಡಳಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಿಬಿಎಸ್ಇ ಹೇಳುತ್ತದೆ. ಎರಡೂ ಪತ್ರಿಕೆಗಳ ದಿನಾಂಕವನ್ನು ನಂತರ ಘೋಷಿಸಲಾಗುವುದು ಎಂದು ಬೋರ್ಡ್ ತಿಳಿಸಿದೆ.



ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮನವಿ ಮಾಡಿದ ಸಿಎಂ ಅಮರಿಂದರ್ ಸಿಂಗ್
ಅಧಿಕೃತ ಮಾಹಿತಿಯ ಪ್ರಕಾರ, ಸೋಮವಾರ ಬೆಳಗಿನ ಜಾವ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸಂಚಾರಿ ದೂರವಾಣಿ ಜಾಲಗಳಲ್ಲಿ SMS ಸೇವೆಗಳು ಮತ್ತು ಡೊಂಗ್ಲ್ ಸೇವೆಗಳಿಗೆ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು (2 ಜಿ / 3 ಜಿ / 4 ಜಿ / ಡಿಸಿಎಂಎ) ಅಮಾನತುಗೊಳಿಸುವಂತೆ ರಾಜ್ಯ ಸರ್ಕಾರ ಆದೇಶಿಸಿದೆ. 


ಅಸಮಾಧಾನ, ವದಂತಿಗಳನ್ನು ಹರಡುವುದನ್ನು ತಡೆಗಟ್ಟಲು ಮತ್ತು ಶಾಂತಿ ಕಾಪಾಡುವ ಸಲುವಾಗಿ ಮೊಬೈಲ್ ಇಂಟರ್ನೆಟ್ ಸೇವೆಗಳ ಅಮಾನತುಗೊಳಿಸುವ ಕ್ರಮವನ್ನು ಸಾಮಾಜಿಕ ಮಾಧ್ಯಮದ ಮೂಲಕ ಮಾಡಲಾಗಿದೆ ಎಂದು ಕಾರ್ಯದರ್ಶಿ (ಗೃಹ) ರಾಹುಲ್ ತಿವಾರಿ ಹೇಳಿದರು.


ಮುಖ್ಯಮಂತ್ರಿ ಅಮರೀಂದರ್ ಸಿಂಗ್ ರಾಜ್ಯದ ಜನತೆಗೆ, ವಿಶೇಷವಾಗಿ ಪರಿಶಿಷ್ಟ ಜಾತಿಗಳಿಗೆ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಮನವಿ ಮಾಡಿದ್ದಾರೆ.


ಗುಜರಾತ್ ಶಾಸಕ ಜಿಜ್ಞೇಶ್ ಮೆವಾನಿ ಅವರು ಸ್ವತಃ ತಾವು ದಲಿತ ಮುಖಂಡರೆಂದು ಕರೆಸಿಕೊಂಡಿದ್ದಾರೆ. ಜನರು ಬಂದ್ ನಲ್ಲಿ ಸೇರಲು ಅವರು ತಮ್ಮ ಟ್ವೀಟ್ ಮೂಲಕ ಜನರನ್ನು ಮನವಿ ಮಾಡಿದ್ದಾರೆ.



ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಎಸ್ಸಿ/ಎಸ್ಟಿ ಕಾಯ್ದೆ ಮೇಲಿನ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಸೋಮವಾರ ಮರುಪರಿಶೀಲನೆ ಅರ್ಜಿಯನ್ನು ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.