ನವದೆಹಲಿ: ಪಾಟ್ನಾದಿಂದ ಸುಮಾರು 70 ಕಿ.ಮೀ. ದೂರದ ಅರಾ ಪಟ್ಟಣದಲ್ಲಿ ಭಾರತ ಬಂದ್ ಬೆಂಬಲಿಗರು ಮತ್ತು ದಲಿತರು ಮತ್ತು ಹಿಂದುಳಿದ ವರ್ಗಗಳ ನಡುವೆ ಘರ್ಷಣೆ ನಡೆದು 12 ಕ್ಕೂ ಅಧಿಕ  ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಈಗಾಗಲೇ ಪಟ್ಟಣದಲ್ಲಿ ಹೆಚ್ಚಿನ ಅವಘಡ ಸಂಭವಿಸದಂತೆ  ಹೆಚ್ಚುವರಿ ಭದ್ರತೆಯನ್ನು ನಿಯೋಜಿಸಲಾಗಿದೆ.



COMMERCIAL BREAK
SCROLL TO CONTINUE READING

ಪಾಟ್ನಾ, ಬೇಗುಸಾರೈ, ಲಖಿಸರೈ, ಮುಜಾಫ್ಫಾರ್ಪುರ್, ಭೋಜ್ಪುರ್, ಶೇಖಪುರಾ, ನವಾಡಾ ಮತ್ತು ದರ್ಬಂಗದಲ್ಲಿ, ನೂರಾರು ಜನರು ರಸ್ತೆ ರೋಖೋ ನಡೆಸಿದರು,ಅಲ್ಲದೆ  ರೈಲುಗಳು ಮತ್ತು ಬಲವಂತವಾಗಿ ಮುಚ್ಚಿದ ಮಾರುಕಟ್ಟೆಗಳನ್ನು ಸ್ಥಗೀತಗೊಳಿಸಲು ಯತ್ನಿಸಿದ್ದರು.


ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ಕಳೆದ ವಾರ ದಲಿತ ಸಂಘಟನೆಗಳು ನೀಡಿದ್ದ ಬಂದ್  ಕರೆದೊಂದರಲ್ಲಿ ಹಿಂಸಾಚಾರ ನಡೆದಿತ್ತು -  ನಂತರ ಕೇಂದ್ರ ಗೃಹ ಸಚಿವಾಲಯದ ಸಲಹೆಯ ನಂತರ ಭದ್ರತೆಯನ್ನು ಬಲಪಡಿಸಲಾಯಿತು. ಅಲ್ಲದೆ  ಕೆಲವು ಸ್ಥಳಗಳಲ್ಲಿ, ಬೃಹತ್  ಸಭೆಗಳನ್ನು ನಿಷೇದಿಸಲಾಗಿದೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗೀತಗೊಲಿಸಲಾಗಿತ್ತು.