ನವದೆಹಲಿ: ಕೊವಿಡ್ 19 ಮಹಾಮಾರಿಯನ್ನು ತಡೆಗಟ್ಟಲು ವಿಶ್ವಾದ್ಯಂತ ಸುಮಾರು 14೦ಕ್ಕೂ ಅಧಿಕ ಲಸಿಕೆಗಳ ಮೇಲೆ ಕೆಲಸ ಮುಂದುವರೆದಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಲಸಿಕೆಗಳು ಎರಡನೇ ಹಂತದ ಪ್ರಯೋಗಗಳನ್ನು ಪೂರೈಸಿ ಪ್ರಗತಿ ಸಾಧಿಸಿವೆ. ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ, ಮಾಡರ್ನಾ, ಅಸ್ಟ್ರಾ-ಜೆನೆಕಾ ಸೇರಿದಂತೆ ಅರ್ಧ ಡಜನ್ ಕಂಪನಿಗಳ ಲಸಿಕೆಗಳು ಸುಧಾರಿತ ಹಂತದಲ್ಲಿವೆ. ಇದೆ ಸಮಯದಲ್ಲಿ ಭಾರತದಲ್ಲಿಯೂ ಕೂಡ ಎರಡು ಲಸಿಕೆಗಳು ಮಾನವ ಪ್ರಯೋಗ ಹಂತಕ್ಕೆ ತಲುಪಿವೆ.


COMMERCIAL BREAK
SCROLL TO CONTINUE READING

ಈ ಕುರಿತು ಮಾಹಿತಿ ನೀಡಿರುವ ಹರ್ಯಾಣ ಆರೋಗ್ಯ ಸಚಿವ ಅನೀಲ್ ವಿಜ್, ಭಾರತದಲ್ಲಿ ತಯಾರಿಸಲಾಗಿರುವ ವ್ಯಾಕ್ಸಿನ್ ನ ಮಾನವ ಪರೀಕ್ಷೆ ಹರಿಯಾಣಾದ ರೋಹ್ತಕ್ ಪಿಜಿಐನಲ್ಲಿ ಆರಂಭಗೊಂಡಿದೆ ಎಂದು ಹೇಳಿದ್ದಾರೆ. ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಅನ್ನು ಈಗಾಗಲೇ ಇಲಿ ಹಾಗೂ ಮೊಲಗಳ ಮೇಲೆ ಯಶಸ್ವಿ ಪ್ರಯೋಗ ನಡೆಸಲಾಗಿದೆ. ಬಳಿಕ ಈ ವ್ಯಾಕ್ಸಿನ್ ನ ಮಾನವ ಪರೀಕ್ಷೆ ಆರಂಭಗೊಂಡಿದೆ. ಈ ವ್ಯಾಕ್ಸಿನ್ ಅನ್ನು ಈಗಾಗಲೇ ಮೂವರ ಮೇಲೆ ಪ್ರಯೋಗ ನಡೆಸಲಾಗಿದ್ದು, ಇದುವರೆಗೆ ಅವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ಅನೀಲ್ ವಿಜ್ ಹೇಳಿದ್ದಾರೆ.


ರೋಹ್ತಕ್ ನಲ್ಲಿ COVAXINನ ಮಾನವ ಪರೀಕ್ಷೆ ಆರಂಭ
ಭಾರತ್ ಬಯೋಟೆಕ್ ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೊರೊನಾ ವ್ಯಾಕ್ಸಿನ್ ನ ಮಾನವ ಪರೀಕ್ಷೆ ರೋಹತಕ್ ನ PGI ನಲ್ಲಿ ಆರಂಭಗೊಂಡಿದೆ. ಇಂದು ಒಟ್ಟು ಮೂವರು ವಾಲಂಟಿಯರ್ಸ್ ಗಳ ಮೇಲೆ ಈ ವ್ಯಾಕ್ಸಿನ್ ಅನ್ನು ಎನ್ರೋಲ್ ಮಾಡಲಾಗಿದೆ. ಎಲ್ಲ ಮೂರು ವಾಲಂಟೀಯರ್ಸ್ ಗಳ ಮೇಲೆ ಈ ವ್ಯಾಕ್ಸಿನ್ ಉತ್ತಮ ಪರಿಣಾಮ ಬೀರಿದೆ. ಅವರಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳ ಗಮನಿಸಲಾಗಿಲ್ಲ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR)-ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಾಜಿ (NIV) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳು ಜಂಟಿಯಾಗಿ ಈ ವ್ಯಾಕ್ಸಿನ್ ಅನ್ನು ಸಿದ್ಧಪಡಿಸಿವೆ.


ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ ಭಾರತ
ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತ ಬಲವಾಗಿ ಮುಂದುವರೆಯುತ್ತಿದೆ. ಭಾರತ ಬಯೋಟೆಕ್ ಹಾಗೂ ICMR ಅಭಿವೃದ್ಧಿಗೊಳಿಸಿರುವ ವೈರಸ್ ನ ಮಾನವ ಪರೀಕ್ಷೆ ಈಗಾಗಲೇ ಆರಂಭಗೊಂಡಿದೆ. ಈ ಕುರಿತು ಹೇಳಿಕೆ ನೀಡಿರುವ ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್ ನ ಡೈರೆಕ್ಟರ್ ಜನರಲ್ ಡಾ. ಬಲರಾಮ್ ಭಾರ್ಗವ್, ಭಾರತ ವ್ಯಾಕ್ಸಿನ್ ಅಭಿವೃದ್ಧಿಪಡಿಸುವ ರೆಸ್ ನಲ್ಲಿ ಇದುವರೆಗೆ ಮುಂಚೂಣಿಯಲ್ಲಿದೆ. ಆದರೆ, ಇದೇ ವೇಳೆ ಈ ವೈರಸ್ ಗೆ ಯಾವ ದೇಶ ಬೇಕಾದರೂ ಮೊದಲು ವ್ಯಾಕ್ಸಿನ್ ಸಿದ್ಧಪಡಿಸಬಹುದು. ಆದರೆ, ಇದಕ್ಕಾಗಿ ಆ ದೇಶಗಳು ಭಾರತದ ಮೇಲೆ ಅವಲಂಭಿಸಬೇಕಾಗಲಿದೆ ಎಂದೂ ಕೂಡ ಅವರು ಮಾಹಿತಿ ನೀಡಿದ್ದಾರೆ.


ಶೇ.60ರಷ್ಟು ವ್ಯಾಕ್ಸಿನ್ ಗಳು ಭಾರತದಲ್ಲಿಯೇ ತಯಾರಾಗುತ್ತವೆ
ವ್ಯಾಕ್ಸಿನ್ ಉತ್ಪಾದನೆಯ ಕ್ಷೇತ್ರದಲ್ಲಿ ಅತಿ ಕಡಿಮೆ ಅವಧಿಯಲ್ಲಿ ಹೆಚ್ಚು ವ್ಯಾಕ್ಸಿನ್ ಡೋಸ್ ಗಳನ್ನು ಉತ್ಪಾದಿಸುವ ಕ್ಷಮತೆ ಕೇವಲ ಭಾರತ ಮತ್ತು ಚೀನಾ ಬಳಿಗೆ ಮಾತ್ರ ಇದೆ. ವಿಶ್ವದ ಇನ್ನೊಂದು ಭಾಗದಲ್ಲಿ ಬಳಕೆಯಾಗುವ ವ್ಯಾಕ್ಸಿನ್ ನ ಶೇ.60ರಷ್ಟು ವ್ಯಾಕ್ಸಿನ್ ಭಾರತದಲ್ಲಿಯೇ ಉತ್ಪಾದಿಸಲಾಗುತ್ತದೆ ಎಂದು ಡಾ.ಭಾರ್ಗವ್ ಹೇಳಿದ್ದಾರೆ. ಜೊತೆಗೆ ಸದ್ಯ ವಿಶ್ವದ ಸುಮಾರು 140ಕ್ಕೂ ಅಧಿಕ ವಿವಿಧ ಕೊರೊನಾ ವ್ಯಾಕ್ಸಿನ್ ಗಳ ಮೇಲೆ ಕೆಲಸ ಮುಂದುವರೆದಿದೆ. ಇವುಗಳಲ್ಲಿ ರಷ್ಯಾ ನಂ.1 ಸ್ಥಾನದಲ್ಲಿದ್ದರೆ, ಭಾರತ ನಂ.2 ಸ್ಥಾನದಲ್ಲಿದೆ. ಬಳಿಕ ಚೀನಾ, ಅಮೇರಿಕಾ, ಯುರೋಪ್ ಗಳು ರೆಸ್ ನಲ್ಲಿವೆ.