ನವದೆಹಲಿ: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸುತ್ತಿರುವ ಕೋವಾಕ್ಸಿನ್ ಕರೋನವೈರಸ್ ಲಸಿಕೆಯನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗಗಳಿಗೆ ಅನುಮೋದನೆ ನೀಡಲಾಗಿದೆ.


COMMERCIAL BREAK
SCROLL TO CONTINUE READING

3 ನೇ ಹಂತದ ಪ್ರಯೋಗಗಳನ್ನು ನಡೆಸಲು ಅನುಮತಿ ಕೋರಿ ಹೈದರಾಬಾದ್ ಮೂಲದ ಲಸಿಕೆ ತಯಾರಕ ಕಂಪನಿಯಾಗಿರುವ ಭಾರತ್ ಬಯೋಟೆಕ್  ಅಕ್ಟೋಬರ್ 2 ರಂದು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಅರ್ಜಿ ಸಲ್ಲಿಸಿತ್ತು.


ಪ್ರಾಣಿಗಳಲ್ಲಿ ಯಶಸ್ವಿಯಾದ ಭಾರತ್ ಬಯೋಟೆಕ್‌ನ COVID-19 ಲಸಿಕೆ COVAXIN


ಅಧಿಕೃತ ವರದಿಗಳ ಪ್ರಕಾರ, ಹಂತ 1 ಮತ್ತು 2 ಕ್ಲಿನಿಕಲ್ ಪ್ರಯೋಗಗಳ ಸುರಕ್ಷತೆ ಮತ್ತು ಇಮ್ಯುನೊಜೆನೆಸಿಟಿ ಡೇಟಾವನ್ನು ನಿರ್ಣಯಿಸಿದ ನಂತರ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಯ ತಜ್ಞರ ಸಮಿತಿಯು ಈ ಶಿಫಾರಸನ್ನು ನೀಡಿದೆ ಮತ್ತು ಇದನ್ನು  ಅಂತಿಮ ಅನುಮೋದನೆಗಾಗಿ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಕಳುಹಿಸಲಾಗಿದೆ.


Covid19: Good News-Covaxin ವ್ಯಾಕ್ಸಿನ್ ನ ಮಾನವ ಪ್ರಯೋಗ ಆರಂಭ


ಈ ಅಧ್ಯಯನವು 10 ರಾಜ್ಯಗಳಲ್ಲಿ ದೆಹಲಿ, ಮುಂಬೈ, ಪಾಟ್ನಾ ಮತ್ತು ಲಕ್ನೋ ಸೇರಿದಂತೆ 19 ತಾಣಗಳಲ್ಲಿ ನಡೆಸಲಾಗುವುದು ಎಂದು ಸಂಸ್ಥೆ ತನ್ನ ಅರ್ಜಿಯಲ್ಲಿ ತಿಳಿಸಿದೆ.