World Richest Beggar Income: ನೀವು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಭಾರತದ ಶ್ರೀಮಂತ ವ್ಯಕ್ತಿ ಮತ್ತು ಏಷ್ಯಾದ ಬಿಲಿಯನೇರ್‌’ಗಳ ಬಗ್ಗೆ ಸಾಕಷ್ಟು ಕೇಳಿರಬಹುದು. ಆದರೆ ಕೋಟಿಗಟ್ಟಲೆ ಆಸ್ತಿ ಹೊಂದಿರುವ ಭಿಕ್ಷುಕನನ್ನು ನೀವು ಎಂದಾದರೂ ಕೇಳಿದ್ದೀರಾ ಅಥವಾ ನೋಡಿದ್ದೀರಾ?


COMMERCIAL BREAK
SCROLL TO CONTINUE READING

ಇಂದು ನಾವು ಅಂತಹ ಒಬ್ಬ ಭಿಕ್ಷುಕನ ಬಗ್ಗೆ ಹೇಳಲಿದ್ದೇವೆ. ಈತನ ಬಳಿ ಬರೋಬ್ಬರಿ 7.5 ಕೋಟಿ ಆಸ್ತಿ ಇದ್ದು, ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಎಂದು ಕರೆಯಲ್ಪಟ್ಟಿದ್ದಾನೆ.


ಇದನ್ನೂ ಓದಿ: “ಏಕೆಂದರೆ ನಾನು…”- 53 ವರ್ಷ ವಯಸ್ಸಾದ್ರೂ ಮದುವೆಯಾಗದಿರಲು ಇದೇ ಕಾರಣ ಎಂದ ರಾಹುಲ್ ಗಾಂಧಿ


ಭಿಕ್ಷುಕ ಎಂದರೆ ಆತನಿಗೆ ಹಣದ ಬಿಕ್ಕಟ್ಟು, ಆಹಾರದ ಬಿಕ್ಕಟ್ಟು ಸೇರಿದಂತೆ ಮೂಲಭೂತ ಸೌಕರ್ಯದ ಕೊರತೆ ಇದ್ದು, ಬೇಡಿಕೊಂಡು ತಿನ್ನುವ ರೀತಿಯಲ್ಲಿರುತ್ತಾನೆ. ಅವರನ್ನು ಸಮಾಜದ ಕಟ್ಟಕಡೆಯ ವರ್ಗಕ್ಕೆ ಸೇರಿದವರು ಎನ್ನಲಾಗುತ್ತದೆ. ಆದರೆ, ಕೆಲವರಿಗೆ ಭಿಕ್ಷಾಟನೆಯೇ ವೃತ್ತಿಯಾಗಿದ್ದು, ಅದರ ಮೂಲಕವೇ ಕೋಟ್ಯಂತರ ರೂಪಾಯಿ ಸಂಪತ್ತು ಗಳಿಸುತ್ತಿದ್ದಾರೆ.


ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಯಾರು?


ವಿಶ್ವದ ಅತ್ಯಂತ ಶ್ರೀಮಂತ ಭಿಕ್ಷುಕ ಭಾರತದ ಮುಂಬೈ ನಗರದಲ್ಲಿ ವಾಸಿಸುತ್ತಿದ್ದಾನೆ. ಝೀ ನ್ಯೂಸ್ ವರದಿ ಪ್ರಕಾರ, ಭರತ್ ಜೈನ್ ಜಾಗತಿಕ ಮಟ್ಟದಲ್ಲಿ ವಿಶ್ವದ ಶ್ರೀಮಂತ ಭಿಕ್ಷುಕ ಎಂದು ಗುರುತಿಸಲ್ಪಟ್ಟಿದ್ದಾನೆ. ಈತ ಮುಂಬೈನ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ.


ಭರತ್ ಜೈನ್ ಪ್ರತಿ ತಿಂಗಳ ಆದಾಯ 75 ಸಾವಿರ ರೂ.


ಮುಂಬೈ ಮೂಲದ ಭರತ್ ಜೈನ್ ಅವರು 7.5 ಕೋಟಿ ಅಥವಾ 1 ಮಿಲಿಯನ್ ಡಾಲರ್ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಭಿಕ್ಷಾಟನೆಯಿಂದಲೇ ಈತನ ಮಾಸಿಕ ಆದಾಯ 60 ಸಾವಿರದಿಂದ 75 ಸಾವಿರ ರೂ. ಇದೆ


1.2 ಕೋಟಿ ಮೌಲ್ಯದ ಫ್ಲಾಟ್


ಭರತ್ ಜೈನ್ ಅವರು ಮುಂಬೈನಲ್ಲಿ 1.2 ಕೋಟಿ ರೂಪಾಯಿ ಮೌಲ್ಯದ ಎರಡು ಬೆಡ್ ರೂಂ ಫ್ಲಾಟ್ ಹೊಂದಿದ್ದಾರೆ. ಜೊತೆಗೆ ಥಾಣೆಯಲ್ಲಿ ಎರಡು ಅಂಗಡಿಗಳನ್ನು ಸಹ ನಿರ್ಮಿಸಿದ್ದಾರೆ, ಅಲ್ಲಿಂದ ಪ್ರತಿ ತಿಂಗಳು 30,000 ರೂಪಾಯಿ ಬಾಡಿಗೆ ಪಡೆಯುತ್ತಾರೆ. ಭರತ್ ಜೈನ್ ಛತ್ರಪತಿ ಶಿವಾಜಿ ಟರ್ಮಿನಸ್ ಅಥವಾ ಆಜಾದ್ ಮೈದಾನದಂತಹ ಪ್ರಮುಖ ಸ್ಥಳಗಳಲ್ಲಿ ಭಿಕ್ಷೆ ಬೇಡುವುದನ್ನು ಕಾಣಬಹುದು. ಇಷ್ಟೊಂದು ಸಂಪತ್ತು ಇದ್ದರೂ ಭರತ್ ಜೈನ್ ಮುಂಬೈನ ಬೀದಿಗಳಲ್ಲಿ ಭಿಕ್ಷುಕನಾಗಿ ದುಡಿಯುತ್ತಾನೆ. ಭರತ್ ಜೈನ್ 10 ರಿಂದ 12 ಗಂಟೆಗಳ ಒಳಗೆ ದಿನಕ್ಕೆ 2,000 ರಿಂದ 2,500 ರೂ. ಗಳಿಸುತ್ತಾನೆ.


ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರಿಂದಲೇ ಆಶೀರ್ವಾದ ಪಡೆದಿದ್ದ ಈಕೆ ಕನ್ನಡದ ಪ್ರಖ್ಯಾತ ಕಿರುತೆರೆ ನಟಿ! ಯಾರೆಂದು ಗೆಸ್ ಮಾಡಿ ನೋಡೋಣ..


ಅಂದಹಾಗೆ ಅವರ ವ್ಯಾಪಾರದಿಂದ ಆದಾಯ ಗಳಿಸುತ್ತಿದ್ದರೂ, ಭರತ್ ಜೈನ್ ಮತ್ತು ಅವರ ಕುಟುಂಬವು ಪರೇಲ್‌’ನಲ್ಲಿರುವ 1BHK ಡ್ಯುಪ್ಲೆಕ್ಸ್ ನಿವಾಸದಲ್ಲಿ ವಾಸಿಸುತ್ತಿದ್ದಾರೆ. ಅವರ ಮಕ್ಕಳು ಕಾನ್ವೆಂಟ್ ಶಾಲೆಯಲ್ಲಿ ಓದುತ್ತಿದ್ದಾರೆ. ಇದಲ್ಲದೇ ಕುಟುಂಬದ ಇತರ ಸದಸ್ಯರು ಸ್ಟೇಷನರಿ ಅಂಗಡಿ ನಡೆಸುತ್ತಿದ್ದು, ಇದು ಆದಾಯದ ಇನ್ನೊಂದು ಮೂಲವಾಗಿದೆ. ವರದಿಯ ಪ್ರಕಾರ, ಭಿಕ್ಷಾಟನೆಯನ್ನು ನಿಲ್ಲಿಸುವಂತೆ ಅವನ ಕುಟುಂಬವು ಅವನಿಗೆ ಸಲಹೆ ನೀಡಿದರೂ ಕೇಳುತ್ತಿಲ್ಲವಂತೆ.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ