Bharat Jodo Yatra : ಬಿಜೆಪಿ ನಾಯಕರಿಗೆ ಫ್ಲೈಯಿಂಗ್ ಕಿಸ್ ನೀಡಿದ ರಾಹುಲ್ ಗಾಂಧಿ
Bharat Jodo Yatra : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸಧ್ಯ ರಾಜಸ್ಥಾನದಲ್ಲಿದೆ. ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಇಂದು ಬೆಳಗ್ಗೆ ಜಲಾವರ್ ನಗರವನ್ನು ದಾಟಿತು. ಈ ಭೇಟಿಯ ಸಂದರ್ಭದಲ್ಲಿ, ತಮ್ಮ ನೋಡಲು ಪಕ್ಷದ ಕಚೇರಿಯ ಟೆರೇಸ್‌ನಲ್ಲಿ ಕಾಯುತ್ತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಲಾವರ್ ಘಟಕದ ನಾಯಕರಿಗೆ ರಾಹುಲ್ ಗಾಂಧಿ `ಫ್ಲೈಯಿಂಗ್ ಕಿಸ್` ನೀಡಿದರು. ಸಧ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
Bharat Jodo Yatra : ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಸಧ್ಯ ರಾಜಸ್ಥಾನದಲ್ಲಿದೆ. ರಾಹುಲ್ ಗಾಂಧಿ ನೇತೃತ್ವದ ಯಾತ್ರೆ ಇಂದು ಬೆಳಗ್ಗೆ ಜಲಾವರ್ ನಗರವನ್ನು ದಾಟಿತು. ಈ ಭೇಟಿಯ ಸಂದರ್ಭದಲ್ಲಿ, ತಮ್ಮ ನೋಡಲು ಪಕ್ಷದ ಕಚೇರಿಯ ಟೆರೇಸ್‌ನಲ್ಲಿ ಕಾಯುತ್ತಿದ್ದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಜಲಾವರ್ ಘಟಕದ ನಾಯಕರಿಗೆ ರಾಹುಲ್ ಗಾಂಧಿ 'ಫ್ಲೈಯಿಂಗ್ ಕಿಸ್' ನೀಡಿದರು. ಸಧ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಭಾರತ್ ಜೋಡೋ ಯಾತ್ರೆ ಮಂಗಳವಾರ ಬೆಳಗ್ಗೆ ಖೇಲ್ ಸಂಕುಲ್‌ನಿಂದ ಹೊರಟು ರಾತ್ರಿ ಸ್ಥಗಿತಗೊಂಡಿದ್ದರು. ಇದಾದ ನಂತರ ಯಾತ್ರೆಯು ಜಲಾವರ್ ನಗರವನ್ನು ದಾಟಿ, ಸುಮಾರು 12 ಕಿಲೋಮೀಟರ್ ನಡೆದ ಯಾತ್ರೆ ಬೆಳಗ್ಗೆ 10 ಗಂಟೆಗೆ ದೇವರಿಘಾಟ್ ತಲುಪಿತು. ಊಟದ ವಿರಾಮದ ನಂತರ ಸುಕೇತ್‌ನಿಂದ ಮಧ್ಯಾಹ್ನ 3.30 ಕ್ಕೆ ಪ್ರಯಾಣ ಪುನರಾರಂಭವಾಯಿತು. ಜಾಲಾವರ್‌ನ ಮೋರು ಕಲಾನ್ ಕ್ರೀಡಾ ಮೈದಾನದಲ್ಲಿ ರಾತ್ರಿ ವಿಶ್ರಾಂತಿ ಮಾಡಲಿದ್ದಾರೆ.
ಇದನ್ನೂ ಓದಿ : Gujarat Assembly Election Exit Poll Results 2022 : ಗುಜರಾತ್‌ನಲ್ಲಿ ಬಿಜೆಪಿಗೆ ಸತತ 7ನೇ ಬಾರಿ ಹ್ಯಾಟ್ರಿಕ್ ಗೆಲುವಾಗಲಿದೆ!
ರಾಹುಲ್ ಗಾಂಧಿ ಅವರೊಂದಿಗೆ ಗುಜರಾತ್ ಸಿಎಂ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಗೋವಿಂದ್ ಸಿಂಗ್ ದೋಟಸಾರಾ, ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್, ಹಲವಾರು ಸಚಿವರು, ಶಾಸಕರು ಮತ್ತು ಅನೇಕ ಮುಖಂಡರು ಮತ್ತು ಕಾರ್ಯಕರ್ತರು ಇದ್ದಾರೆ. ಯಾತ್ರೆಗೆ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಈ ಎಲ್ಲದರ ನಡುವೆ, ಅಜಯ್ ಮಾಕನ್ ರಾಜ್ಯ ಉಸ್ತುವಾರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಕಾಂಗ್ರೆಸ್ ಪಕ್ಷವು ಹಿರಿಯ ಪಂಜಾಬ್ ಕಾಂಗ್ರೆಸ್ ನಾಯಕ ಸುಖಜಿಂದರ್ ಸಿಂಗ್ ರಾಂಧವಾ ಅವರನ್ನು ಆ ಸ್ಥಾನಕ್ಕೆ ನೇಮಿಸಿದೆ.
ರಾಹುಲ್, ಮೊದಲು ಒಂದು ಘೋಷಣೆ ಇತ್ತು, ಅದು ದೇಶಾದ್ಯಂತ ಮೊಳಗುತ್ತಿತ್ತು. ಅದು ಜೈ ಸಿಯಾರಾಮ್ ಘೋಷಣೆಯಾಗಿತ್ತು. ಸಹೋದರ ಸಹೋದರಿಯರೇ... ಸೀತೆ ಇಲ್ಲದೆ ರಾಮ ಇರಬಹುದೇ?... ಎಂಬ ಪ್ರಶ್ನೆಯೇ ಉದ್ಭವಿಸುವುದಿಲ್ಲವೆ. ಸೀತೆ ಇಲ್ಲದೆ ರಾಮ ಇರಲು ಸಾಧ್ಯವಿಲ್ಲ, ರಾಮ ಇಲ್ಲದೆ ಸೀತೆ ಇರಲು ಸಾಧ್ಯವಿಲ್ಲ. ಬಿಜೆಪಿ ಮತ್ತು ಆರೆಸ್ಸೆಸ್ ನವರು ತಮ್ಮ ಘೋಷಣೆಗಳೊಂದಿಗೆ ಸೀತಾ ಮಾತೆಯನ್ನು ಏಕೆ ದೂರವಿಟ್ಟಿದ್ದಾರೆ. ಅವರು ಜೈ ಸಿಯಾರಾಮ್ ಎಂದು ಏಕೆ ಹೇಳುವುದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Farooq Abdullah: ಭಾರತೀಯ ಸೇನೆ ಮೇಲೆ ಗಂಭೀರ ಆರೋಪ ಮಾಡಿದ ಫಾರೂಕ್ ಅಬ್ದುಲ್ಲಾ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.