ನವದೆಹಲಿ: ಏಷ್ಯಾದ ನೋಬೆಲ್ ಎಂದೇ ಬಿಂಬಿತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿ ಪ್ರಕಟವಾಗಿದ್ದು, ಆರು ಮಂದಿ ವಿಜೇತರಲ್ಲಿ ಇಬ್ಬರು ಭಾರತೀಯರು ಸೇರಿದ್ದಾರೆ. ಸೋನಮ್ ವ್ಯಾಂಗ್​ಚುಕ್ ಹಾಗೂ ಭರತ್ ವಟ್ವಾನಿ ಪ್ರಶಸ್ತಿ ಪಡೆದ ಭಾರತೀಯರಾಗಿದ್ದಾರೆ. 


COMMERCIAL BREAK
SCROLL TO CONTINUE READING

ಭರತ್ ವಟ್ವಾನಿ ಅವರಿಗೆ ಅವರ ಅಸಾಧರಣ ಧೈರ್ಯ ಮತ್ತು ಬಹಿಷ್ಕರಿಸಿದ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವ ಮೂಲಕ ಅವರ ಘನತೆಯನ್ನು ಪುನಃಸ್ಥಾಪಿಸುವ ಕಾರ್ಯವನ್ನು ಗುರುತಿಸಿ ಮ್ಯಾಗ್ಸೆಸೆ ಪ್ರಶಸ್ತಿ ನೀಡಲಾಗಿದೆ" ಎಂದು ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಫೌಂಡೇಶನ್ ತಿಳಿಸಿದೆ. 


ಇನ್ನು ಸೋನಂ ವಾಂಗ್ ಚುಕ್(51) ಅವರು ಉತ್ತರ ಭಾರತದ ಲಡಾಕ್ ಪ್ರದೇಶದಲ್ಲಿ ಅನನ್ಯವಾದ ವ್ಯವಸ್ಥಿತ, ಸಹಕಾರ ಮತ್ತು ಸಮುದಾಯದ ಕಲಿಕೆಗೆ ಸಾಕಷ್ಟು ಶ್ರಮಿಸಿದ್ದಾರೆ. ಅಲ್ಲದೆ, ಲಡಾಕಿ ಯುವಕರ ಜೀವನ ಅವಕಾಶಗಳನ್ನು ಸುಧಾರಿಸಿ, ಎಲ್ಲಾ ಕ್ಷೇತ್ರಗಳಲ್ಲಿ ಸ್ಥಳೀಯ ಸಮುದಾಯವನ್ನು ರಚನಾತ್ಮಕವಾಗಿ ತೊಡಗಿಸಿ, ಅಲ್ಲಿನ ಸಂಸ್ಕೃತಿ ಮತ್ತು ಆರ್ಥಿಕ ಪ್ರಗತಿಗೆ ಶ್ರಮಿಸಿದ್ದಾರೆ. ಅಲ್ಲದೆ, ಗ್ರಾಮೀಣ ಮಟ್ಟದಲ್ಲಿ ಹಲವಾರು ಬದಲಾವಣೆ ತರುವ ಪ್ರಯತ್ನ ಮಾಡಿದ್ದ ವ್ಯಾಂಗ್​ಚುಕ್ ಜಾಗತಿಕ ಮಟ್ಟದಲ್ಲಿ ಹಲವರಿಗೆ ಮಾದರಿಯಾಗಿದ್ದಾರೆ. 



1957ರಲ್ಲಿ ರಾಮನ್‌ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಫಿಲಿಪ್ಪೀನ್ಸ್‌ ನ ಮೂರನೇ ಅಧ್ಯಕ್ಷರ ಹೆಸರಲ್ಲಿ ಸ್ಥಾಪಿಸಲಾಯಿತು. ಇದು ಏಷ್ಯಾದ ಅತಿ ಪ್ರತಿಷ್ಠಿತ ಪ್ರಶಸ್ತಿ ಎಂದು ಕರೆಯಲ್ಪಡುತ್ತದೆ. ಏಷ್ಯಾ ವಲಯದಲ್ಲಿನ ಸಾಧಕರಿಗೆ ಮ್ಯಾಗ್ಸೆಸೆ ಪ್ರತಿಷ್ಠಾನ ಈ ಪ್ರಶಸ್ತಿ ನೀಡುತ್ತದೆ. ಪ್ರಶಸ್ತಿಯು ಮ್ಯಾಗ್ಸೆಸೆ ಅವರ ಭಾವಚಿತ್ರದ ಪದಕ, ಪ್ರಮಾಣಪತ್ರ, ನಗದು ಬಹುಮಾನ ಒಳಗೊಂಡಿರುತ್ತದೆ.