VIDEO: ನಮಾಜ್ ವೇಳೆ ಸಂಚಾರ ನಿಷೇಧ ಖಂಡಿಸಿ ನಡುರಸ್ತೆಯಲ್ಲಿ ಹನುಮಾನ್ಚಾಲೀಸಾ ಪಠಿಸಿದ ಬಿಜೆಪಿ
`ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್ ಟ್ರಂಕ್ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳನ್ನು ಶುಕ್ರವಾರ ನಮಾಜ್ ವೇಳೆ ಬಂದ್ ಮಾಡಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ` ಎಂದು ಬಿಜೆಪಿ ಯುವ ಮೋರ್ಚಾ ತಿಳಿಸಿದೆ.
ಹೌರ: ಪಶ್ಚಿಮ ಬಂಗಾಳದ ಹೌರದಲ್ಲಿ ಮುಸ್ಲಿಂ ಸಮಾಜದ ಜನರು ಶುಕ್ರವಾರ ಪ್ರಾರ್ಥನೆ(ನಮಾಜ್) ಸಲ್ಲಿಸಲು ರಸ್ತೆಯಲ್ಲಿ ಸಂಚಾರ ನಿಷೇಧಿಸಿರುವ ಕ್ರಮವನ್ನು ಖಂಡಿಸಿರುವ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಇಲ್ಲಿನ ಬೆಲ್ಲೆ ಖಾಲ್‌ನಲ್ಲಿ ರಸ್ತೆಯ ಮಧ್ಯೆ ಕುಳಿತು ಹನುಮಾನ್ ಚಾಲಿಸಾವನ್ನು ಪಠಿಸಿದ್ದಾರೆ.
"ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಗ್ರ್ಯಾಂಡ್ ಟ್ರಂಕ್ ರಸ್ತೆ ಸೇರಿದಂತೆ ಇತರ ಪ್ರಮುಖ ರಸ್ತೆಗಳನ್ನು ಶುಕ್ರವಾರ ನಮಾಜ್ ವೇಳೆ ಬಂದ್ ಮಾಡಲಾಗುತ್ತದೆ. ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಯುವ ಮೋರ್ಚಾ ಮಂಗಳವಾರ ಜೂನ್ 25 ರಂದು ಬಿಜೆಪಿ ಕಾರ್ಯಕರ್ತರು ಹನುಮಾನ್ ದೇವಸ್ಥಾನದ ಸಮೀಪವಿರುವ ಪ್ರತಿಯೊಂದು ರಸ್ತೆಯಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಶುಕ್ರವಾರದಂದು ನಮಾಜ್ ವೇಳೆ ಇಲ್ಲಿನ ಪ್ರಮುಖ ರಸ್ತೆಗಳು ಬಂದ್ ಆಗುವುದರಿಂದ ರೋಗಿಗಳು ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ತೆರಳಲು ಕಷ್ಟವಾಗಿದೆ, ಸಮಯಕ್ಕೆ ಸರಿಯಾಗಿ ಕಚೇರಿ ತಲುಪಲು ಹಲವರು ತೊಂದರೆ ಅನುಭವಿಸುತ್ತಿದ್ದಾರೆ. ನಮಾಜ್ ವೇಳೆ ರಸ್ತೆಯಲ್ಲಿ ಸಂಚಾರ ನಿಷೇಧವನ್ನು ಎಲ್ಲಿಯವರೆಗೆ ಮುಂದುವರೆಸುತ್ತಾರೊ ಅಲ್ಲಿಯವರೆಗೆ ನಾವೂ ಹನುಮಾನ್ ಮಂದಿರಗಳ ಸಮೀಪದ ಎಲ್ಲಾ ಮುಖ್ಯ ರಸ್ತೆಗಳಲ್ಲಿ ಹನುಮಾನ್ ಚಾಲಿಸಾವನ್ನು ಪಠಿಸುತ್ತೇವೆ ಎಂದು ಒ.ಪಿ. ಸಿಂಗ್ ತಿಳಿಸಿರುವುದಾಗಿ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.