ನವದೆಹಲಿ: ಭೀಮಾ ಕೋರೆಗಾಂವ್-ಎಲ್ಗರ್ ಪರಿಷತ್ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಕೇಂದ್ರ ಹಸ್ತಾಂತರಿಸಿದ ಒಂದು ದಿನದ ನಂತರ, ಕಾಂಗ್ರೆಸ್ ಮಾಜಿ ಅಧ್ಯಕ್ಷ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಶನಿವಾರ ಕೇಂದ್ರ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದರು, ಆಡಳಿತಾರೂಢ ಬಿಜೆಪಿಯ ಕಾರ್ಯಸೂಚಿಯನ್ನು ವಿರೋಧಿಸುವವರನ್ನು ನಗರ ನಕ್ಸಲ್ ಎಂದು ಕರೆಯಲಾಗುತ್ತದೆ ಎಂದರು. 


COMMERCIAL BREAK
SCROLL TO CONTINUE READING

"ದ್ವೇಷದ MOSH ಕಾರ್ಯಸೂಚಿಯನ್ನು ಯಾರಾದರೂ ವಿರೋಧಿಸಿದರೆ ಅಂತವರನ್ನು ನಗರ ನಕ್ಸಲ್ ಎಂದು ಕರೆಯಲಾಗುತ್ತದೆ ಎಂದು ರಾಹುಲ್ ಗಾಂಧಿ ಟ್ವಿಟ್ಟರ್ನಲ್ಲಿ ಬರೆದಿದ್ದಾರೆ.  ಇನ್ನು ಮುಂದುವರೆದು "ಭೀಮಾ-ಕೋರೆಗಾಂವ್ ಪ್ರತಿರೋಧದ ಸಂಕೇತವಾಗಿದ್ದು, ಸರ್ಕಾರದ ಎನ್ಐಎ ಹಸ್ತಕ್ಷೇಪವನ್ನು ಎಂದಿಗೂ ಅಳಿಸಲಾಗುವುದಿಲ್ಲ' ಎಂದರು.



ಶುಕ್ರವಾರ ಸಂಜೆ, ಗೃಹ ಸಚಿವಾಲಯದ ನಿರ್ದೇಶನದ ಮೇರೆಗೆ ಎಲ್ಗರ್ ಪರಿಷತ್ ಪ್ರಕರಣದ ತನಿಖೆಯನ್ನು ಎನ್ಐಎ ವಹಿಸಿಕೊಂಡಿದ್ದು, ಈ ನಡೆಗೆ ಈಗ ಮಹಾರಾಷ್ಟ್ರದ ಸೇನಾ-ಎನ್‌ಸಿಪಿ- ಕಾಂಗ್ರೆಸ್ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.


ಪುಣೆ ಪೊಲೀಸರು ಆರೋಪಗಳನ್ನು ಧೃಡಿಕರಿಸಲು ವಿಫಲವಾದರೆ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಬಹುದು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದ್ದು, ಹಿಂದಿನ ಬಿಜೆಪಿ ಸರ್ಕಾರ ಆರೋಪಿಗಳನ್ನು ರೂಪಿಸಲು ಸಂಚು ರೂಪಿಸಿತ್ತು ಮತ್ತು ರಾಜ್ಯ ಮತ್ತು ಪೊಲೀಸರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡ ಕಾರಣ ಪ್ರಕರಣದ ಪರಿಶೀಲನೆ ಅಗತ್ಯವಾಗಿದೆ ಎಂದು ಆರೋಪಿಸಿದರು.


ಭೀಮಾ ಕೋರೆಗಾಂವ್ ಕದನದ 200 ನೇ ವಾರ್ಷಿಕೋತ್ಸವದ ಮುನ್ನಾ ದಿನದಂದು ಡಿಸೆಂಬರ್ 31, 2017 ರಂದು ಆಯೋಜಿಸಲಾಗಿದ್ದ ಸಂಜೆ ಕಾರ್ಯಕ್ರಮವಾದ ಎಲ್ಗರ್ ಪರಿಷತ್‌ನ ಸಭೆಯಲ್ಲಿ ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ಒಂಬತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ವಕೀಲರನ್ನು 2018 ರಲ್ಲಿ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದರು. ಪುಣೆ ಕಾರ್ಯಕರ್ತರು ಮತ್ತು ವಕೀಲರು ಜನರನ್ನು ಪ್ರಚೋದಿಸಿದರು ಮತ್ತು ಇದು ಮರುದಿನ ಭೀಮಾ ಕೋರೆಗಾಂವ್ನಲ್ಲಿ ಜಾತಿ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.