ದೇಶಾದ್ಯಂತ ಐವರು ಮಾನವ ಹಕ್ಕು ಕಾರ್ಯಕರ್ತರ ಬಂಧನ,ವ್ಯಾಪಕ ಖಂಡನೆ
ಭೀಮಾ ಕೋರೆಗಾಂ ನಲ್ಲಿ ನಡೆದ ಹಿಂಸಾಚಾರದ ವಿಚಾರವಾಗಿ ದೇಶಾದ್ಯಂತ 9 ಮಾನವ ಹಕ್ಕು ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡಲಾಗಿದೆ ಅಲ್ಲದೆ ಅದರಲ್ಲಿ ಐವರನ್ನು ಬಂಧಿಸಲಾಗಿದೆ.
ನವದೆಹಲಿ: ಭೀಮಾ ಕೋರೆಗಾಂ ನಲ್ಲಿ ನಡೆದ ಹಿಂಸಾಚಾರದ ವಿಚಾರವಾಗಿ ದೇಶಾದ್ಯಂತ 9 ಮಾನವ ಹಕ್ಕು ಕಾರ್ಯಕರ್ತರ ಮನೆಯ ಮೇಲೆ ದಾಳಿ ಮಾಡಲಾಗಿದೆ ಅಲ್ಲದೆ ಅದರಲ್ಲಿ ಐವರನ್ನು ಬಂಧಿಸಲಾಗಿದೆ.
ಈ ದಾಳಿಗೆ ಪ್ರಮುಖವಾಗಿ ಈ ಮಾನವ ಹಕ್ಕು ಕಾರ್ಯಕರ್ತರು ಮಾವೋವಾದಿಗಳ ಸಂಪರ್ಕವನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಕಳೆದ ವರ್ಷ ಡಿಸೆಂಬರ್ 31 ರಂದು ಪುಣೆ ಹತ್ತಿರದ ಭೀಮಾ ಕೊರೆಗಾಂನಲ್ಲಿ ಎಲ್ಗರ್ ಪರಿಷದ್ ಕಾರ್ಯಕ್ರಮದ ಸಂದರ್ಭದಲ್ಲಿ ಹಿಂಸಾಚಾರ ನಡೆದಿತ್ತು, ಈಗ ಈ ಘಟನೆಗೆ ಸಂಬಂಧಿಸಿದಂತೆ ವರವರರಾವ್ ಸುಧಾ ಭಾರದ್ವಾಜ್ ವೆರ್ನೋನ್ ಗೊಂಜ್ಲ್ವೇಸ್,ಅರುಣ್ ಫೆರೆರಾ,ಗೌತಮ್ ನವಲಾಕಾರನ್ನು ಬಂಧಿಸಲಾಗಿದೆ.
ಇನ್ನೊಂದೆಡೆಗೆ ಈ ಬಂಧನಕ್ಕೆ ರಾಷ್ಟ್ರಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದ್ದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಇದು ಜನರನ್ನು ಸುಮ್ಮನಿಸರಲು ಮೋದಿ ಸರ್ಕಾರ ಅನುಸರಿಸುತ್ತಿರುವ ತಂತ್ರಕ್ಕೆ ನಿದರ್ಶನ ಎಂದು ಟೀಕಿಸಿದ್ದಾರೆ.ಈ ಬಂಧನಕ್ಕೆ ಪ್ರತಿಕ್ರಿಯಿಸಿರುವ ಇತಿಹಾಸಕಾರ ರಾಮಚಂದ್ರ ಗುಹಾ " ಗಾಂಧಿ ಜೀವನ ಕುರಿತ ಪುಸ್ತಕದ ಲೇಖಕನಾಗಿ ನನಗೆ ಇಂದು ಗಾಂಧಿಜಿ ಸಹ ಜೀವಂತವಿರುತ್ತಿರಲಿಲ್ಲ ಎನಿಸುತ್ತಿದೆ" ಎಂದು ಘಟನೆಯ ಕುರಿತಾಗಿ ಆಕ್ರೋಶವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆಗೆ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಮತ್ತು ಹೋರಾಟಗಾರ್ತಿ ಅರುಂಧತಿ ರಾಯ "ಏಕಾಕಾಲಕ್ಕೆ ದೇಶಾದ್ಯಂತ ಬಂಧನ ಮಾಡಿರುವುದು ಸರ್ಕಾರಕ್ಕೆ ಜನ ಬೆಂಬಲವನ್ನು ಕಳೆದುಕೊಳ್ಳುತ್ತಿರುವ ಆತಂಕ ಸುರುವಾಗಿರುದಕ್ಕೆ ನಿದರ್ಶನ. ಆದ್ದರಿಂದ ವಕೀಲರು,ಕವಿಗಳು,ದಲಿತ ಹಕ್ಕು ಹೋರಾಟಗಾರರನ್ನು ಬಂಧಿಸಲಾಗುತ್ತಿದೆ.ಇನ್ನೊಂದೆಡೆ ಮರ್ಡರ್, ಮಾಬ್ ಲಿಂಚಿಂಗ್ ನಲ್ಲಿ ಭಾಗಿಯಾದವರು ಮುಕ್ತವಾಗಿರುವುದು ಭಾರತ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವುದಕ್ಕೆ ನಿದರ್ಶನ" ಎಂದು ಕಿಡಿಕಾರಿದ್ದಾರೆ