ಕೃಷಿ ಕಾನೂನುಗಳ ಕುರಿತಾದ ಸುಪ್ರೀಂ ಸಮಿತಿಯಿಂದ ಹೊರಬಂದ ಭೂಪಿಂದರ್ ಸಿಂಗ್ ಮಾನ್ ಹೇಳಿದ್ದೇನು?
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಿಂದ ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸಂಸದ ಭೂಪಿಂದರ್ ಸಿಂಗ್ ಮಾನ್ ಹೊರಬಂದಿದ್ದಾರೆ.
ನವದೆಹಲಿ: ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಿಂದ ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸಂಸದ ಭೂಪಿಂದರ್ ಸಿಂಗ್ ಮಾನ್ ಹೊರಬಂದಿದ್ದಾರೆ. ಈ ಕುರಿತು ಪತ್ರವೊಂದನ್ನು ಬರೆದಿರುವ ಅವರು ಈ ಮಾಹಿತ ನೀಡಿದ್ದಾರೆ. ಪತ್ರದಲ್ಲಿ ಉಲ್ಲೇಖಿಸಿರುವ ಅವರು. ತಾವು ಯಾವಾಗಲು ಕೂಡ ಪಂಜಾಬ್ ಹಾಗೂ ರೈತರ ಬೆಂಬಲಕ್ಕೆ ನಿಲ್ಲುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಕೃಷಿ ಕಾನೂನುಗಳ ಕುರಿತು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್ ನಾಲ್ಕು ಸದಸ್ಯರ ಸಮಿತಿ ರಚಿಸಿತ್ತು. ಜೊತೆಗೆ ಮುಂದಿನ ಆದೇಶದವರೆಗೆ ಕಾನೂನುಗಳನ್ನು ತಡೆಹಿಡಿಯುವಂತೆ ಆದೇಶ ನೀಡಿತ್ತು. ಮಾನ್ ಸೇರಿದಂತೆ ಸಮಿತಿಯಲ್ಲಿ ಕೃಷಿ ಆರ್ಥಿಕ ತಜ್ಞ ಅಶೋಕ್ ಗುಲಾಟಿ, ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಡಾ.ಪ್ರಮೋದ್ ಕುಮಾರ್ ಜೋಶಿ ಮತ್ತು ಮಹಾರಾಷ್ಟ್ರದ ರೈತ ಸಂಘಟನೆಯ ಅನೀಲ್ ಧನ್ವತ್ ಕೂಡ ಶಾಮೀಲಾಗಿದ್ದಾರೆ.
ಸಮಿತಿಯಿಂದ ತಾವು ಹೊರಬಂದಿರುವ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಾಜಿ ಸಂಸದ ಭೂಪಿಂದರ್ ಸಿಂಗ್ ಮಾನ್, "ಕೇಂದ್ರ ಸರ್ಕಾರವು ತಂದ ಮೂರು ಕಾನೂನುಗಳ ಬಗ್ಗೆ ರೈತರ ಸಂಘಟನೆಗಳೊಂದಿಗೆ ಮಾತುಕತೆ ಆರಂಭಿಸಲು ರಚಿಸಲಾದ ನಾಲ್ಕು ಸದಸ್ಯರ ಸಮಿತಿಯಲ್ಲಿ ನನ್ನನ್ನು ಸೇರಿಸಿದ್ದಕ್ಕಾಗಿ ನಾನು ಸುಪ್ರೀಂ ಕೋರ್ಟ್‌ಗೆ ಧನ್ಯವಾದ ಹೇಳುತ್ತೇನೆ" ಎಂದು ಹೇಳಿದ್ದಾರೆ. ಒಬ್ಬ ರೈತ ಮತ್ತು ಯೂನಿಯನ್ ನಾಯಕನಾಗಿ, ಸಾರ್ವಜನಿಕರಲ್ಲಿ ಉದ್ಭವಿಸಿರುವ ಭಾವನೆಗಳು ಮತ್ತು ಆತಂಕಗಳನ್ನು ಗಮನದಲ್ಲಿಟ್ಟುಕೊಂಡು, ಪಂಜಾಬ್ ಅಥವಾ ರೈತರ ಹಿತಾಸಕ್ತಿಗಳಿಗೆ ಧಕ್ಕೆಯಾಗದಿರಲು ನೀಡಲಾದ ಯಾವುದೇ ಹುದ್ದೆಯಿಂದ ದೂರವಿರಲು ನಾನು ಸಿದ್ಧನಿದ್ದೇನೆ. ನಾನು ಸಮಿತಿಯಿಂದ ನನ್ನನ್ನು ಪ್ರತ್ಯೇಕಿಸುತ್ತೇನೆ. ಯಾವಾಗಲೂ ತಾವು ರೈತರು ಮತ್ತು ಪಂಜಾಬ್ ಬೆಂಬಲಕ್ಕೆ ನಿಲ್ಲುವುದಾಗಿ" ಹೇಳಿದ್ದಾರೆ.
ಇದನ್ನು ಓದಿ- ಕೃಷಿ ಕಾನೂನುಗಳ ವಿಚಾರವಾಗಿ ರಾಹುಲ್ ಗಾಂಧಿಗೆ ಬಹಿರಂಗ ಚರ್ಚೆಗೆ ಆಹ್ವಾನಿಸಿದ ಜಾವಡೇಕರ್
ಕಾನೂನುಗಳ ಸಮಿತಿ ರಚನೆಯಾದಾಗಿನಿಂದಲೂ, ವಿವಿಧ ಆಂದೋಲನ ಸಂಘಟನೆಗಳ ಮುಖಂಡರು ಸದಸ್ಯರನ್ನು ಗುರಿಯಾಗಿಸುತ್ತಿದ್ದಾರೆ. ಸಮಿತಿಯ ನಾಲ್ವರು ಸದಸ್ಯರನ್ನು ಸರ್ಕಾರದ ಬೆಂಬಲಿಗರು ಎಂದು ರೈತರು ಆರೋಪಿಸಿದ್ದಾರೆ. ಎಲ್ಲಾ ಸದಸ್ಯರು ಸರ್ಕಾರದ ಬೆಂಬಲಿಗರಾಗಿರುವುದರಿಂದ, ಅವರು ಸರ್ಕಾರದ ಪರವಾಗಿ ಕಾನೂನುಗಳ ಬಗ್ಗೆಯೂ ವರದಿ ಮಾಡುತ್ತಾರೆ ಎಂದು ರೈತರು ಆರೋಪಿಸಿದ್ದಾರೆ. ಹೀಗಾಗಿ ರೈತರೂ ಕೂಡ ಸಮಿತಿಯ ಮುಂದೆ ಹೇಳಿಕೆ ನೀಡಲು ನಿರಾಕರಿಸಿದ್ದಾರೆ.
ಇದನ್ನು ಓದಿ-ಕೇಂದ್ರ ಸರ್ಕಾರಕ್ಕೆ ಮತ್ತೆ ರೈತರಿಂದ ಎಚ್ಚರಿಕೆ
ಕಾನೂನುಗಳನ್ನು ಬೆಂಬಲಿಸಿ ಹೇಳಿಕೆ ನೀಡಿದ ಸಮಿತಿ ಸದಸ್ಯರು
ಸಮಿತಿ ಸದಸ್ಯರು ವಿವಿಧ ಸುದ್ದಿ ವೇದಿಕೆಗಳಲ್ಲಿ ಕೇಂದ್ರ ಸರ್ಕಾರದ ಕಾನೂನುಗಳನ್ನು ಬೆಂಬಲಿಸಿ ಹೇಳಿಕೆ ನೀಡಿದ್ದಾರೆ. ಡಿಸೆಂಬರ ರಂದು ಹರಿಯಾಣ, ಮಹಾರಾಷ್ಟ್ರ, ಬಿಹಾರ್, ತಮಿಳುನಾಡು ರೈತರು ಈಗಾಗಲೇ ಕೃಷಿ ಸಚಿವರನ್ನು ಭೇಟಿಯಾಗಿ, ಕೆಲ ತಿದ್ದುಪಡಿಗಳೊಂದಿಗೆ ಕಾನೂನುಗಳನ್ನು ಜಾರಿಗೊಳಿಸಲು ಸೂಚಿಸಿದ್ದಾರೆ. ಈ ಸಂಘಟನೆ ಆಲ್ ಇಂಡಿಯಾ ಕಿಸಾನ್ ಫೆಡರೇಶನ್ ಕಮೀಟಿ (AIKCC) ಅಡಿ ಕೃಷಿ ಸಚಿವರನ್ನು ಭೇಟಿಯಾಗಿತ್ತು. ಈ ಸಮಿತಿಗೆ ಭೂಪಿಂದರ್ ಸಿಂಗ್ ಮಾನ್ ಅಧ್ಯಕ್ಷರಾಗಿದ್ದಾರೆ. ಇದಲ್ಲದೆ ಮಾನ್ ಕೃಷಿ ಕಾನೂನುಗಳನ್ನು ಬೆಂಬಲಿಸಿ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಕೃಷಿ ಕಾನೂನುಗಳ ಕುರಿತು ಪತ್ರದಲ್ಲಿ ಉಲ್ಲೇಖಿಸಿದ್ದ ಅವರು, ಭಾರತೀಯ ಕೃಷಿ ವ್ಯವಸ್ಥೆಯನ್ನು ಮುಕ್ತಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ತರಲಾಗಿರುವ ಮೂರು ಕಾನೂನುಗಳ (Farm Laws) ಬೆಂಬಲಕ್ಕೆ ನಾವು ಮುಂದೆ ಬರಲಿದ್ದೇವೆ ಎಂದೂ ಕೊಡ ಹೇಳಿದ್ದರು. ಅಷ್ಟೇ ಅಲ್ಲ ಉತ್ತರ ಭಾರತದ ಕೆಲ ಭಾಗಗಳಲ್ಲಿ ಅದರಲ್ಲೂ ವಿಶೇಷವಾಗಿ ದೆಹಲಿಯಲ್ಲಿ ಜಾರಿಯಲ್ಲಿರುವ ರೈತ ಪ್ರತಿಭಟನೆಯಲ್ಲಿ ಶಾಮೀಲಾಗಿರುವ ಕೆಲವರು ಈ ಕಾನೂನುಗಳ ಕುರಿತು ರೈತರ ದಾರಿತಪ್ಪಿಸುತ್ತಿದ್ದಾರೆ" ಎಂದೂ ಕೂಡ ಅವರು ಹೇಳಿದ್ದಾರೆ.
ಇದನ್ನು ಓದಿ-'ನಾನು ಜೋತಿಷ್ಯ ಹೇಳುವವನಲ್ಲ'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.