Bidar Lok Sabha Election Results 2024: ಖೂಬಾಗೆ ಸೋಲಿನ ರುಚಿ ತೋರಿಸಿದ 26 ವರ್ಷದ ಸಾಗರ್ ಖಂಡ್ರೆ!
Bidar Lok Sabha Election Results 2024: ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ.
Bidar Lok Sabha Election Results 2024: ಬೀದರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ, ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆಯವರ ಪುತ್ರ ಸಾಗರ್ ಖಂಡ್ರೆ ಜಯ ಗಳಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ. ಈ ಗೆಲುವಿನ ಮೂಲಕ ಸಾಗರ್ ಖಂಡ್ರೆಯವರು ಹೊಸ ಇತಿಹಾಸವನ್ನು ಸೃಷ್ಟಿಸಲಿದ್ದಾರೆ.
ಪ್ರಸಕ್ತ ಲೋಕಸಭೆಗೆ ಆಯ್ಕೆಯಾದ ಸಂಸದರಲ್ಲಿ ಅತಿ ಕಿರಿಯ ವಯಸ್ಸಿನ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಸಾಗರ್ ಖಂಡ್ರೆ ಪಾತ್ರರಾಗಲಿದ್ದಾರೆ. LLB ಪದವೀಧರರಾಗಿರುವ ಸಾಗರ್‌ಗೆ ಈಗ ಜಸ್ಟ್ 26 ವರ್ಷ ವಯಸ್ಸು. ತಾನು ಎದುರಿಸಿದ ಮೊದಲ ಚುನಾವಣೆಯಲ್ಲೇ ಬಿಜೆಪಿ ಅಭ್ಯರ್ಥಿ, ಮಾಜಿ ಕೇಂದ್ರ ಸಚಿವ ಭಗವಂತ ಖೂಬಾರಿಗೆ ಸೋಲಿನ ರುಚಿ ತೋರಿಸುವ ಮೂಲಕ ಅವರು ಸಂಸತ್ತು ಪ್ರವೇಶಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಗೆಲುವಿನ ಕೇಕೆ : ಮೋದಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ ಕಾರ್ಯಕರ್ತರ ಸಂಭ್ರಮ
ಈ ಹಿಂದಿನ ಚುನಾವಣೆಗಳಲ್ಲಿ ಮಾಜಿ ಸಿಎಂ ಎನ್.ಧರಂ ಸಿಂಗ್ ಮತುತ ಈಶ್ವರ ಬಿ.ಖಂಡ್ರೆರನ್ನು ಸೋಲಿಸಿದ್ದ ಭಗವಂತ ಖೂಬಾ ಕೇಂದ್ರದಲ್ಲಿ ಮಂತ್ರಿಯಾಗಿದ್ದರು. ತಮ್ಮ ತಂದೆಯನ್ನು ಚುನಾವಣೆಯಲ್ಲಿ ಸೋಲಿಸಿದ್ದ ಖೂಬಾರನ್ನು ಈ ಚುನಾವಣೆಯಲ್ಲಿ ಮಣಿಸುವ ಮೂಲಕ ಸಾಗರ್ ಸೇಡು ತೀರಿಸಿಕೊಂಡತಾಗಿದೆ.
ಪ್ರಧಾನಿ ಮೋದಿಯವರ ಪ್ರಭಾವ ಮತ್ತು ಅತಿಯಾದ ಆತ್ಮವಿಶ್ವಾಸವೇ ಭಗವಂತ ಖೂಬಾರ ಹೀನಾಯ ಸೋಲಿಗೆ ಕಾರಣವೆಂದು ಹೇಳಲಾಗುತ್ತಿದೆ. ಪಕ್ಷದ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದ ಪರಿಣಾಮ ಸ್ವಪಕ್ಷೀಯರೇ ಅಭ್ಯರ್ಥಿ ಪರ ಕೆಲಸ ಮಾಡಿಲ್ಲವೆಂದು ಹೇಳಲಾಗಿದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಮೋದಿ ಅಲೆಯಲ್ಲಿ ಗೆದ್ದಿದ್ದ ಖೂಬಾರಿಗೆ ಈ ಬಾರಿ ಮತದಾರ ಕೈಕೊಟ್ಟಿದ್ದಾನೆ.
ಇದನ್ನೂ ಓದಿ: ಹಾಸನದಲ್ಲಿ ಶ್ರೇಯಸ್ ಪಟೇಲ್ ಗೆಲುವು: ಪ್ರಜ್ವಲ್ ಸೋಲನ್ನ ಸಂಭ್ರಮಿಸಿದ ಪ್ರೀತಂ ಗೌಡ ಬೆಂಬಲಿಗರು
ಸದ್ಯದ ಮಾಹಿತಿ ಪ್ರಕರಾ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಸಾಗರ್ ಖಂಡ್ರೆ 6,65,162 ಮತಗಳನ್ನು ಪಡೆದುಕೊಂಡಿದ್ದು, ತಮ್ಮ ಪ್ರತಿಸ್ಪರ್ಧಿಗಿಂತ ಬರೋಬ್ಬರಿ 1,29,396 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಅವರು ಒಟ್ಟು 5,35,766 ಮತಗಳನ್ನು ಪಡೆದಿದ್ದು, 1,29,396 ಮತಳಿಂದ ಭಾರೀ ಹಿನ್ನಡೆ ಅನುಭವಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.