ನವದೆಹಲಿ: 551 Oxygen Generation Plants To Be Setup - ಕರೋನಾ ವೈರಸ್ ಬಿಕ್ಕಟ್ಟಿನ ಮಧ್ಯೆ ದೇಶದಲ್ಲಿ ಆಮ್ಲಜನಕದ ಬಗ್ಗೆ ನಿರಂತರ ಕೋಲಾಹಲ ಸೃಷ್ಟಿಯಾಗುತ್ತಿರುವ ನಡುವೆಯೇ ಕೇಂದ್ರದ ಮೋದಿ ಸರ್ಕಾರ (PM Narendra Modi) ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದೆ. ಪಿಎಂ ಕೇರ್ಸ್ ಫಂಡ್ (PM Cares Fund) ಮೂಲಕ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಪಿಎಸ್‌ಎ (ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್) ಸ್ಥಾವರಗಳನ್ನು ಸ್ಥಾಪಿಸುವುದಾಗಿ ಕೇಂದ್ರ ಸರ್ಕಾರ ಪ್ರಕಟಿಸಿದೆ. ಕರೋನಾ ಅವಧಿಯಲ್ಲಿ, ಆಮ್ಲಜನಕದ ಕೊರತೆಯ ಬಿಕ್ಕಟ್ಟು  ಹೆಚ್ಚಾಗುತ್ತಿರುವುದು ಇಲ್ಲಿ ಗಮನಾರ್ಹ,  ಪ್ರತಿದಿನ ಅನೇಕ ಜನರು ಆಮ್ಲಜನಕದ ಕೊರತೆಯಿಂದ  ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. 


COMMERCIAL BREAK
SCROLL TO CONTINUE READING

PMO ಕಚೇರಿ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ದೇಶದಲ್ಲಿ ಹೆಚ್ಚುತ್ತಿರುವ ಕರೋನಾ (Coronavirus) ಸೋಂಕಿನ ಪ್ರಕರಣಗಳು ಮತ್ತು ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಆಮ್ಲಜನಕದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಮಂತ್ರಿಯ ನಾಗರಿಕ ಸಹಾಯ ಮತ್ತು ತುರ್ತು ಪರಿಹಾರ ನಿಧಿ (PM Cares Fund News) ಅಡಿಯಲ್ಲಿ ದೇಶದ ವಿವಿಧ ರಾಜ್ಯಗಳ ಆರೋಗ್ಯ ಕೇಂದ್ರಗಳಲ್ಲಿ 551 PSA ಆಮ್ಲಜನಕ ಉತ್ಪಾದನಾ ಘಟಕಗಳನ್ನು(Oxygen Plant) ಸ್ಥಾಪಿಸಲಾಗುವುದು ಎನ್ನಲಾಗಿದೆ.


ಈ ಸ್ಥಾವರಗಳನ್ನು ಸ್ಥಾಪಿಸಲು ಪಿಎಂ ಕೇರ್ಸ್ ಫಂಡ್ ತಾತ್ವಿಕ ಅನುಮೋದನೆ ನೀಡಿದೆ ಎಂದು ಪ್ರಧಾನಿ ಕಚೇರಿ ಭಾನುವಾರದ ತನ್ನ  ಹೇಳಿಕೆಯಲ್ಲಿ ತಿಳಿಸಿದೆ. ಇದರೊಂದಿಗೆ ಈ ಸ್ವಯಂತ್ರಗಳನ್ನು  ಆದಷ್ಟು ಬೇಗ ಜಾರಿಗೆ ತರಲು ಪ್ರಧಾನಿಗಳು ಸೂಚನೆ ಕೂಡ ನೀಡಿದ್ದಾರೆ. ಈ ಸ್ವಯಂತ್ರಗಳು ಜಿಲ್ಲಾ ಮಟ್ಟದಲ್ಲಿ ಆಮ್ಲಜನಕದ ಲಭ್ಯತೆಯನ್ನು ಖಾತರಿಪಡಿಸಲಿವೆ ಎಂದು ಅವರು ಹೇಳಿದ್ದಾರೆ. 


ಈ ಸ್ವಯಂತ್ರಗಳನ್ನು ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಕೇಂದ್ರದಲ್ಲಿರುವ ಗುರುತಿಸಲಾದ ಆಸ್ಪತ್ರೆಗಳಲ್ಲಿ ಸ್ಥಾಪಿಸಲಾಗುವುದು ಮತ್ತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಇದನ್ನು ಕೈಗೊಳ್ಳಲಿದೆ. ಇದಕ್ಕೂ ಮುನ್ನ ದೇಶದ ವಿವಿಧ ರಾಜ್ಯಗಳ ಆರೋಗ್ಯ ಕೇಂದ್ರಗಳಲ್ಲಿ 162 ಪಿಎಸ್‌ಎ ಚಿಕಿತ್ಸಕ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಿಎಂ ಕೇರ್ಸ್ ಫಂಡ್‌ನಿಂದ 201.58 ಕೋಟಿ ರೂ. ಅನುದಾನ ನೀಡಲಾಗಿತ್ತು.


ಇದನ್ನೂ ಓದಿ- ನಿಲ್ಲುತ್ತಿಲ್ಲ ಕರೋನಾಸುರ ಆರ್ಭಟ..! ಕಳೆದ 24 ಗಂಟೆಗಳಲ್ಲಿ 3.5 ಲಕ್ಷ ಜನರಿಗೆ ಸೋಂಕು


27 ಮಾರ್ಚ್ 2020 ರಂದು ಕೋವಿಡ್ -19 ಸಾಂಕ್ರಾಮಿಕದಂತಹ ಯಾವುದೇ ರೀತಿಯ ತುರ್ತುಸ್ಥಿತಿ ಅಥವಾ ಬಿಕ್ಕಟ್ಟನ್ನು ಎದುರಿಸುವ ಪ್ರಾಥಮಿಕ ಉದ್ದೇಶಕ್ಕಾಗಿ ಮೀಸಲಾದ ರಾಷ್ಟ್ರೀಯ ನಿಧಿಯ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ಅದರಿಂದ ಪೀಡಿತ ಜನರಿಗೆ ಪರಿಹಾರವನ್ನು ಒದಗಿಸುವುದು 'ತುರ್ತು ಸಂದರ್ಭಗಳಲ್ಲಿ ಪ್ರಧಾನ ಮಂತ್ರಿ ನಾಗರಿಕರ ನೆರವು ಮತ್ತು ಪರಿಹಾರ ನಿಧಿ (ಪಿಎಂ ಕೇರ್ಸ್ ಫಂಡ್) ಹೆಸರಿನಲ್ಲಿ ಚಾರಿಟಬಲ್ ಟ್ರಸ್ಟ್ ಅನ್ನು ರಚಿಸಲಾಗಿದೆ ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ- ಮಹಾರಾಷ್ಟ್ರದಲ್ಲಿ ಒಂದೇ ದಿನದಲ್ಲಿ 67 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣ ದಾಖಲು


ದೇಶಾದ್ಯಂತ ಕೊರೊನಾ ಸ್ಥಿತಿ ಹೇಗಿದೆ?
ಪ್ರಸ್ತುತ ಭಾರತದಲ್ಲಿ, ಕೊರೊನಾ ಸೋಂಕಿನ ಪ್ರಕರಣಗಳು 1,69,60,172 ಕ್ಕೆ ಏರಿಕೆಯಾಗಿದ್ದು, ಒಂದು ದಿನದಲ್ಲಿ 3,49,691 ಹೊಸ ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದರೆ, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ 26 ಲಕ್ಷ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಭಾನುವಾರ ಬೆಳಗ್ಗೆ ಎಂಟು ಗಂಟೆಯವರೆಗೆ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, ಈ ಅವಧಿಯಲ್ಲಿ ಸೋಂಕಿನಿಂದ 2,767 ಜನರು ಸಾವನ್ನಪ್ಪಿದ ಕಾರಣ ಸಾವಿನ ಸಂಖ್ಯೆ 1,92,311 ತಲುಪಿದೆ ಎಂದಿತ್ತು.


ಇದನ್ನೂ ಓದಿ- ದೇಶದ ರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ವಿಸ್ತರಣೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.