ಲಖನೌ:  Conversion Racket Exposed In UP - ಉತ್ತರ ಪ್ರದೇಶದಲ್ಲಿ (Uttar Pradesh) ಧಾರ್ಮಿಕ ಮತಾಂತರದ ದೊಡ್ಡ ಪಿತೂರಿ ಬಹಿರಂಗಗೊಂಡಿದೆ. ಈ ಪಿತೂರಿಯಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಯುಪಿ ATS ಅಧಿಕಾರಿಗಳು ದೆಹಲಿಯ ಜಾಮಿಯಾ ನಗರದಿಂದ ಇಬಂಧಿಸಿದ್ದಾರೆ.  ಮತಾಂತರದ ಪಿತೂರಿಯ ಹಿಂದೆ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆ ಐಎಸ್‌ಐಗೆ (ISI) ಧನಸಹಾಯ ನೀಡಿದ ಪುರಾವೆಗಳನ್ನು UP ATS ಕಲೆ ಹಾಕಿದೆ.


COMMERCIAL BREAK
SCROLL TO CONTINUE READING

ಈ ಕುರಿತು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿರುವ ADG ಪ್ರಶಾಂತ್ ಕುಮಾರ್ (Law And Order), ಜೂನ್ 2, 2021ರಂದು ದೆಹಲಿಯ ದಾಸನಾನಲ್ಲಿರುವ ಒಂದು ದೇವಸ್ಥಾನಕ್ಕೆ ಇಬ್ಬರು ಅಕ್ರಮವಾಗಿ ನುಸುಳಲು ಯತ್ನಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರಿಬ್ಬರನ್ನು ಬಂಧಿಸಲಾಗಿತ್ತು. ಈ ಇಬ್ಬರು ಆರೋಪಿಗಳನ್ನು ವಿಪುಲ್ ವಿಜಯವರ್ಗಿಯ್ ಹಾಗೂ ಕಾಶಿಫ್ ಎಂದು ಗುರಿತಿದಲಾಗಿದೆ. ಅವರ ವಿಚಾರಣೆಯ ವೇಳೆ ದೊಡ್ಡದಾದ ಪಿತೂರಿ ನಡೆದ ಸಂಕೇತಗಳು ದೊರೆತಿದ್ದವು. ದೊರೆತ ಸಂಕೇತಗಳ ಪ್ರಕಾರ ಜನರನ್ನು ಸುನಿಯೋಜಿತ ರೀತಿಯಲ್ಲಿ ಧರ್ಮ ಪರಿವರ್ತನೆ ಮಾಡಲಾಗುತ್ತಿದ್ದು, ಅದಕ್ಕಾಗಿ ಭಾರಿ ಪ್ರಮಾಣದಲ್ಲಿ ಆಮೀಶವೊಡ್ಡಿ ಹಣ ಕೂಡ ನೀಡಿ ಈ ಕೆಲಸ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.


ಪ್ರಕರಣದ ವೇಳೆ ಗೌತಮ್ ಹೆಸರಿನ ಓರ್ವ ವ್ಯಕ್ತಿಯ ಹೆಸರು ಬೆಳಕಿಗೆ ಬಂದಿದ್ದು, ಆತ ಬಾಟ್ಲಾ ಹೌಸ್, ಜಾಮಿಯಾನಗರ ನಿವಾಸಿಯಾಗಿದ್ದಾನೆ. ಆತ ಸ್ವತಃ ಕೂಡ ತನ್ನ ಧರ್ಮವನ್ನು ಪರಿವರ್ತಿಸಿದ್ದಾನೆ. ಆತನನ್ನು ಮತ್ತಷ್ಟು ಸುದೀರ್ಘವಾಗಿ ವಿಚಾರಿಸಲಾಗಿ, ಜಾಹಾಂಗೀರ್ ಆಲಮ್ ಹೆಸರಿನ ಮತ್ತೋರ್ವ ವ್ಯಕ್ತಿಯ ಹೆಸರು ಬಹಿರಂಗಗೊಂಡಿದ್ದು ಆತನನ್ನು ಕೂಡ ಬಂಧನಕ್ಕೆ ಒಳಪಡಿಸಲಾಗಿದೆ. ವಿಚಾರಣೆಯ ವೇಳೆ ಈ ಇಬ್ಬರೂ ಕೂಡ ಸುಮಾರು 1000 ಜನರಿಗೆ ಆಮೀಶವೊಡ್ಡಿ ಹಾಗೂ ಭಯಭೀತರನ್ನಾಗಿಸಿ ಧರ್ಮಪರಿವರ್ತಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.


ಲಖನೌ ATS ಅಧಿಕಾರಿಗಳು ಸಂಬಂಧಿತ ಕಾಯ್ದೆ ಹಾಗೂ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಿರುವುದಾಗಿ ADG ಪ್ರಶಾಂತ್ ಕುಮಾರ್ ಹೇಳಿದ್ದಾರೆ. ಈ ಪ್ರಕರಣದ ಆಧಾರದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ. ಇದಲ್ಲದೆ, ಒಂದು ಸಂಸ್ಥೆ ಇದೆ ಮತ್ತು ನಾಮನಿರ್ದೇಶನಗೊಂಡ ಇತರ ಜನರಿದ್ದಾರೆ. ಅವರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಅತ್ಯಂತ ಮುಖ್ಯವಾದ ವಿಷಯವೆಂದರೆ ವಿಕಲಾಂಗ ಮಕ್ಕಳು ಮತ್ತು ಮಹಿಳೆಯರನ್ನು ಸಹ ಮತಾಂತರಗೊಳಿಸಲಾಗಿದೆ. ಮಹಿಳೆಯರನ್ನು ಮತಾಂತರಗೊಳಿಸಿದ ನಂತರ, ಅವರು ಇತರ ಧರ್ಮದ ಜನರನ್ನು ಮದುವೆಯಾಗಿದ್ದಾರೆ, ಇದರಿಂದಾಗಿ ನಂತರ ಅವರು ತಮ್ಮ ಧರ್ಮಕ್ಕೆ ಮರಳಲು ಯಾವುದೇ ಅವಕಾಶವಿಲ್ಲ.


ಇದನ್ನೂ ಓದಿ-Indian Railways: ಇಂದಿನಿಂದ ಶತಾಬ್ದಿ ಸೇರಿದಂತೆ 50 ವಿಶೇಷ ರೈಲುಗಳ ಸೇವೆ ಮತ್ತೆ ಆರಂಭ


ನೋಯ್ಡಾ, ಕಾನ್ಪುರ್, ಮಥುರಾ ಮತ್ತು ವಾರಣಾಸಿ ಸೇರಿದಂತೆ ಇನ್ನೂ ಅನೇಕ ಸ್ಥಳಗಳಲ್ಲಿ ಈ ಜನರು ಧರ್ಮ ಮತಾಂತರದ ದಂಧೆ ನಡೆಸಿದ್ದಾರೆ.  ಈ ದಂಧೆಯನ್ನು ದೇಶದ ಇತರ ರಾಜ್ಯಗಳಲ್ಲಿಯೂ ನಡೆಸಲಾಗುತ್ತಿದೆ ಎಂಬ ಮಾಹಿತಿ ದೊರೆತಿದೆ.


ಇದನ್ನೂ ಓದಿ-PM Jan Dhan Account: ಪಿಎಂ ಜನಧನ ಖಾತೆ ಮೂಲಕ ಸಿಗಲಿದೆ ಬಂಪರ್ ಲಾಭ


ಇದೇ ರೀತಿ ಆದಿತ್ಯ ಗುಪ್ತ ಹೆಸರಿನ ಓರ್ವ ವಿದ್ಯಾರ್ಥಿಯ ಪೋಷಕರನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಅವರು ತಮ್ಮ ಮಗು ಕಾಣೆಯಾದ ಕುರಿತು ತಾವು ವರದಿ ಮಾಡಿರುವುದಾಗಿ ಹೇಳಿದ್ದಾರೆ. ಆದಿತ್ಯ ಗುಪ್ತಾ ವಿಕಲ ಚೇತನರಾಗಿದ್ದಾರೆ. ಆತನ ಮತವನ್ನು ಪರಿವರ್ತಿಸಿ ಆತನನ್ನು ದಕ್ಷಿಣ ಭಾರತದ ರಾಜ್ಯವೊಂದಕ್ಕೆ ಕರೆದೊಯ್ಯಲಾಗಿದೆ.  ಈ ಕುರಿತು ಖುದ್ದು ತಮ್ಮ ಮಗನೆ ತಮಗೆ ವಿಡಿಯೋ ಕಾಲ್ ಮಾಡುವ ಮೊಲಕ ಮಾಹಿತಿ ನೀಡಿದ್ದಾನೆ ಎಂದು ಪೋಷಕರು ಹೇಳಿದ್ದಾರೆ. 


ಇದನ್ನೂ ಓದಿ-Samsung Galaxy M32 ಇಂದು ಭಾರತದಲ್ಲಿ ಬಿಡುಗಡೆ, ಇದರ ಬೆಲೆ, ವೈಶಿಷ್ಟ್ಯದ ಬಗ್ಗೆ ತಿಳಿಯಿರಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.