ನವದೆಹಲಿ: ದೇಶಾದ್ಯಂತ ಡಿಜಿಟಲ್ ವಹಿವಾಟು ಜಾರಿಗೆ ಬಂದ ಬಳಿಕ, ಕ್ರೆಡಿಟ್ ಕಾರ್ಡ್ ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಪೆಟ್ರೋಲ್ ಬಂಕ್, ಶಾಪಿಂಗ್ ಹೇಗೆ ಎಲ್ಲೆಡೆ ಹಣ ಪಾವತಿಗಾಗಿ ನೀವೇನಾದರೂ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಈ ಸುದ್ದಿಯನ್ನು ನೀವು ಖಂಡಿತಾ ಓದಿಲೇಬೇಕು. ಏಕೆಂದರೆ ಹೊಸ ನಿಯಮದ ಪ್ರಕಾರ, ಪೆಟ್ರೋಲ್ ಪಂಪ್‌ನಲ್ಲಿ ಕ್ರೆಡಿಟ್ ಕಾರ್ಡ್ ಪಾವತಿಗೆ ಸಿಗುತ್ತಿದ್ದ ರಿಯಾಯಿತಿ ಇನ್ಮುಂದೆ ಲಭ್ಯವಿರುವುದಿಲ್ಲ. 


COMMERCIAL BREAK
SCROLL TO CONTINUE READING

ಅಕ್ಟೋಬರ್ 1, 2019ರಿಂದ ತೈಲ ಕಂಪನಿಗಳು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಗೆ ನೀಡುವ ರಿಯಾಯಿತಿಯನ್ನು ನಿಲ್ಲಿಸಲಾಗುತ್ತಿದೆ. ಎರಡೂವರೆ ವರ್ಷಗಳ ಹಿಂದೆ ಪೆಟ್ರೋಲ್ ಪಂಪ್‌ನಲ್ಲಿ ಡಿಜಿಟಲ್ ಪಾವತಿಗಾಗಿ ಗ್ರಾಹಕರಿಗೆ 0.75 ರಷ್ಟು ಕ್ಯಾಶ್‌ಬ್ಯಾಕ್ ನೀಡುವ ಸೌಲಭ್ಯವನ್ನು ಪರಿಚಯಿಸಲಾಗಿತ್ತು. ಆದರೀಗ ಹೊಸ ನಿಯಮದ ಪ್ರಕಾರ ನಾಳೆಯಿಂದ ಆ ಸೌಲಭ್ಯ ಗ್ರಾಹಕರಿಗೆ ದೊರೆಯದಂತಾಗಿದೆ.


ಈ ಬಗ್ಗೆ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಸಂದೇಶ ಕಳುಹಿಸಿದ್ದು, ಅಕ್ಟೋಬರ್ 1ರಿಂದ  ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಕಡಿತಗೊಳಿಸಲಿದೆ ಎಂದು ತಿಳಿಸಿವೆ. ಆದರೆ ಈ ಸೌಲಭ್ಯ ಇ-ವ್ಯಾಲೆಟ್, ಡೆಬಿಟ್ ಕಾರ್ಡ್ ಮೂಲಕ ಪಾವತಿಗೆ ಲಭ್ಯವಿರಲಿದೆ.